ಆಸಿಸ್ ಮಾಜಿ ನಾಯಕನ ಬೆನ್ನತ್ತಿದ ಐಪಿಎಲ್ ತಂಡಗಳು..!ಡೆಲ್ಲಿ ತಂಡದಿದಂದ ಹೊರಬೀಳುತ್ತಿದ್ದಂತೆ ರಿಕಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಮುಂಚೆ ಡೆಲ್ಲಿ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಆದರೆ ಇತ್ತೀಚೆಗೆ ಡೆಲ್ಲಿ ತಂಡ ರಿಕಿ ಪಾಂಟಿಂಗ್ ಅವರನ್ನು ಕೋಚ್ ಅಧಿಕಾರದಿಂದ ಕೆಳಗಿಳಿಸಿತ್ತು. ಇದರ ನಂತರ ರಿಕಿ ಪಾಂಟಿಂಗ್ ಕೋಚ್ ಅಧಿಕಾರಕ್ಕೆ ವಿದಾಯ ಹೇಳುತ್ತಾರೆ ಎನ್ನು ಸುದ್ದಿ ಕೇಳಿಬಂದಿತ್ತು, ಆದರೆ ಇದೀ ರಿಕಿ ತಾನು ಕೋಚ್ ಹುದ್ದೆಯಲ್ಲಿ ಮುಂದುವರೆಯುತ್ತೇನೆ ಎಂದು ಖಚಿತ ಪಡೆಸಿದ್ದಾರೆ. ಹಾಗಾದರೆ ಡೆಲ್ಲಿ ಇವರನ್ನು ಕೈ ಬಿಟ್ಟ ನಂತರ ಯಾವ ತಂಡಕ್ಕೆ ಕೋಚ್ ಆಗಿಲಿದ್ದರೆ ಎನ್ನುವುದು ಹಲವರ ಪ್ರಶ್ನೆ.
ರಿಕಿ ಪಾಂಟಿಂಗ್ ಅವರು 2018 ರಲ್ಲಿ ಮೊದಲ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗಿ ನೇಮಕಗೊಂಡರು. ತರಬೇತುದಾರರಾಗಿ ಅವರ ನಾಯಕತ್ವದಲ್ಲಿ ಕೆಲವು ಅತ್ಯುತ್ತಮ ಋತುಗಳನ್ನು ದಾಖಲಿಸಲಾಗಿದೆ. 2020 ರ ಋತುವಿನಲ್ಲಿ, ಇದು ಫೈನಲ್‌ಗೆ ತಲುಪಿತು, ಆದರೆ ದುರದೃಷ್ಟವಶಾತ್, ಅದನ್ನು ವಿಜಯವಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ದೆಹಲಿ ಕ್ಯಾಪಿಟಲ್ಸ್ ಆಳ್ವಿಕೆಯಲ್ಲಿ ಇದು ಅತ್ಯುತ್ತಮ ಕ್ಷಣವಾಗಿದೆ.
ಸಹಾಯಕ ಕೋಚ್ ಪ್ರವೀಣ್ ಆಮ್ರೆ, ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಗ್ಯಾರಿ ಕರ್ಸ್ಟನ್, ಗ್ರೆಗ್ ಶೆಪರ್ಡ್, ಪ್ಯಾಡಿ ಆಪ್ಟನ್ ಡೆಲ್ಲಿ ತಂಡದ ಮುಖ್ಯ ಕೋಚ್ ರೇಸ್‌ನಲ್ಲಿದ್ದಾರೆ. ವಿದೇಶಿ ಆಟಗಾರರನ್ನು ಕಣಕ್ಕಿಳಿಸಲು ಬಯಸಿದರೆ ಗ್ಯಾರಿ ಕರ್ಸ್ಟನ್ ಮತ್ತು ತಾಯ್ನಾಡಿನತ್ತ ಒಲವು ತೋರಿದರೆ ರಾಹುಲ್ ದ್ರಾವಿಡ್ ಅವರಿಗೆ ಈ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆಗಳಿವೆ.
ಡೆಲ್ಲಿ ಬಿಟ್ಟುಕೊಟ್ಟರೂ 2025ರ ಋತುವಿನಲ್ಲಿ ಮತ್ತೆ ಮುಖ್ಯ ಕೋಚ್ ಆಗಿ ಮರಳುವುದಾಗಿ ರಿಕಿ ಪಾಂಟಿಂಗ್ ಸ್ಪಷ್ಟಪಡಿಸಿದ್ದಾರೆ. ಐಪಿಎಲ್‌ನಲ್ಲಿ ಕೋಚ್ ಆಗಿ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಏಕದಿನ ಮಾದರಿಯಲ್ಲಿ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುವ ಅವಕಾಶವನ್ನು ಕೈಬಿಟ್ಟಿದ್ದರು.
ಇನ್ನೂ ಒಂದೆರಡು ತಿಂಗಳಲ್ಲಿ ನಾನು ಯಾವ ತಂಡಕ್ಕೆ ಮುಖ್ಯ ಕೋಚ್ ಆಗಿ ಕೆಲಸ ಮಡುತ್ತೇನೆ ಎನ್ನುವುದು ಕಚಿತವಾಗುತ್ತದೆ ಎಂದ ರಿಕಿ ತಾವು ಯಾವ ತಂಡಕ್ಕೆ ಕೋಚ್ ಆಗಲಿದ್ದಾರೆ ಎನ್ನುವ ಸುಳಿವನ್ನು ಬಿಚ್ಚಿಡಲು ನಿರಾಕರಿಸಿದರು. ಆದರೆ - ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗಳು ರಿಕಿ ಪಾಂಟಿಂಗ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವರಿದಿಯಾಗಿದೆ. ಈ ಋತುವಿನಲ್ಲಿ ಕೋಲ್ಕತ್ತಾ ತಂಡವನ್ನು ಚಾಂಪಿಯನ್ ಮಾಡಿದ ನಿರ್ದೇಶಕ ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದು, ಸದ್ಯಕ್ಕೆ ಹುದ್ದೆ ಖಾಲಿ ಇದೆ.
ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಕುಮಾರ ಸಂಗಕ್ಕಾರ.. ಇಂಗ್ಲೆಂಡ್ ನ ವೈಟ್ ಬಾಲ್ ಮಾದರಿಯ ಮುಖ್ಯ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಹೀಗಾದರೆ ಸಂಗಕ್ಕಾರ ಐಪಿಎಲ್‌ನಿಂದ ಹೊರಗುಳಿಯಬಹುದು. ಅವರ ಸ್ಥಾನವನ್ನು ರಿಕಿ ಪಾಂಟಿಂಗ್ ಬದಲಿಸುವುದು ಖಚಿತ. ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್ ಟ್ರೆವರ್ ಬೇಲಿಸ್ ಒಪ್ಪಂದದ ಅವಧಿ ಮುಗಿದಿದ್ದರೂ.. ಅದನ್ನು ನವೀಕರಿಸಿಲ್ಲ ಅಥವಾ ಫ್ರಾಂಚೈಸಿ ಮಾಡಿಲ್ಲ.