WTC ಫೈನಲ್’ನಲ್ಲಿ ರೋಹಿತ್ ಜೊತೆ ಆರಂಭಿಕರಾಗಿ ಈ ಆಟಗಾರ ಕಣಕ್ಕಿಳಿಯಲಿ ಎಂದ ದಿಗ್ಗಜ ಪಾಂಟಿಂಗ್

Tue, 07 Mar 2023-4:30 pm,

WTC Final 2023: ವಿಶ್ವ ಟೆಸ್ಟ್ ಚಾಂಪಿಯನ್‌’ಶಿಪ್‌ನಲ್ಲಿ (WTC) ಭಾರತ ಫೈನಲ್ ತಲುಪಿದರೆ, ಶುಭಮನ್ ಗಿಲ್ ಮತ್ತು ಕೆ ಎಲ್ ರಾಹುಲ್ ಇಬ್ಬರೂ ಭಾರತ ತಂಡದ ಭಾಗವಾಗಿರಬೇಕು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದರೆ ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಇಬ್ಬರೂ ಭಾರತ ತಂಡದ ಭಾಗವಾಗಿರಬೇಕು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗಷ್ಟೇ ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ನಲ್ಲಿ ಕೆ ಎಲ್ ರಾಹುಲ್ ಅವರನ್ನು ಕೈಬಿಡಲಾಯಿತು ಮತ್ತು ಅವರ ಸ್ಥಾನಕ್ಕೆ ಗಿಲ್ ಅವರನ್ನು ಸೇರಿಸಲಾಯಿತು.

2018 ರಲ್ಲಿ ಓವಲ್‌ನಲ್ಲಿ ಪ್ರಭಾವಿ 149 ರನ್ ಸೇರಿದಂತೆ ಇಂಗ್ಲೆಂಡ್‌ನಲ್ಲಿ ಅದ್ಭುತ ಶತಕಗಳಲ್ಲಿ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ 30 ವರ್ಷದ ರಾಹುಲ್ ಅವರನ್ನು ಬಳಸಿಕೊಳ್ಳುವುದು ಒಂದು ಆಯ್ಕೆಯಾಗಿರಬಹುದು ಎಂದು ಪಾಂಟಿಂಗ್ ಹೇಳುತ್ತಾರೆ.

“ಬಹುಶಃ ಶುಭಮನ್ ಇನ್ನಿಂಗ್ಸ್ ಆರಂಭಿಕರಾಗಿರಬಹುದು. ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು, ಏಕೆಂದರೆ ರಾಹುಲ್ ಮೊದಲು ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ಆಡಿದ್ದಾರೆ. ಆದರೆ ನಮಗೆ ತಿಳಿದಿರುವ ಒಂದು ವಿಷಯವೆಂದರೆ ಇಂಗ್ಲೆಂಡ್‌ನಲ್ಲಿ ಚೆಂಡು ದೀರ್ಘಕಾಲದವರೆಗೆ ಸ್ವಿಂಗ್ ಆಗುತ್ತದೆ” ಎಂದರು. ಇನ್ನು ಇದೇ ವೇಳೆ ಇಂಗ್ಲೆಂಡ್‌ನಲ್ಲಿನ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಮತ್ತು ಜೂನ್‌ನಲ್ಲಿ ಫೈನಲ್‌ಗೆ ಅತ್ಯುತ್ತಮ XI ಅನ್ನು ಆಯ್ಕೆ ಮಾಡಲು ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳನ್ನು ಪಾಂಟಿಂಗ್ ಒತ್ತಾಯಿಸಿದರು.

ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ಬೆಂಬಲಿಸಿ ಮಾತನಾಡಿದ್ದು,”ಈ ಸಮಯದಲ್ಲಿ ಅವರು ರನ್ ಗಳಿಸದಿರುವುದು ಪರವಾಗಿಲ್ಲ. ಆದರೆ ಚಾಂಪಿಯನ್ ಬ್ಯಾಟ್ಸ್‌ಮನ್‌ಗಳು ಅದರಿಂದ ಹೊರಬರುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ ಮತ್ತು ಅವರು ರನ್ ಗಳಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ವಿರಾಟ್ ಕೊಹ್ಲಿ ಬಗ್ಗೆ ಚಿಂತಿಸುತ್ತಿಲ್ಲ ಏಕೆಂದರೆ ಅವರು ಪುನರಾಗಮನ ಮಾಡುತ್ತಾರೆ ಎಂದು ನನಗೆ ತಿಳಿದಿದೆ' ಎಂದು ಹೇಳಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link