ಕೊನೆಗೂ ಮದುವೆ ಆಗಿಯೇ ಬಿಟ್ಟರಾ ಅನುಶ್ರೀ? ಬಯಲಾಯಿತು ನಿರೂಪಕಿಯ ಮ್ಯಾರೇಜ್ ಸೀಕ್ರೆಟ್

Thu, 26 Sep 2024-6:30 pm,

ನಿರೂಪಕಿಯಿಂದ ರಾಜ್ಯದ ಮನೆ ಮಗಳಾಗಿ ಬದಲಾಗಿರುವ ಅನುಶ್ರೀಗೆ ಹೋದಲ್ಲಿ ಬಂದಲ್ಲಿ ಕಾಡುವ ಪ್ರಶ್ನೆ ಯಾವಾಗ ಮದುವೆ ಎನ್ನುವುದು. ಲೈವ್ ಕಾರ್ಯಕ್ರಮಗಳಲ್ಲಿಯೂ ಅನುಶ್ರೀಗೆ ಅನೇಕ ಬಾರಿ ಈ ಪ್ರಶ್ನೆ ಕೇಳಲಾಗಿದೆ. 

ಕೆಲವೊಮ್ಮೆ ನಗುವಿನ ಮೂಲಕವೇ ಉತ್ತರಿಸಿದರೆ ಇನ್ನು ಕೆಲವೊಮ್ಮೆ ರೋಸಿ ಹೋಗಿ ಈ ಪ್ರಶ್ನೆಗೆ ಅನುಶ್ರೀ ಉತ್ತರಿಸಿದ್ದೂ ಇದೆ.   

ಸುಂದರವಾಗಿದ್ದು, ಹೆಸರು, ಕೀರ್ತಿ, ಹಣ ಎಲ್ಲವೂ ಸಂಪಾದಿಸಿರುವ ಅನುಶ್ರೀ ವರ್ಷ 36 ಆದರೂ ಇನ್ನೂ ಯಾಕೆ ಮದುವೆಯಾಗಿಲ್ಲ ಎನ್ನುವುದೇ ಅವರ ಅಭಿಮಾನಿಗಳ ಪ್ರಶ್ನೆ.   

ಇದೀಗ ಅನುಶ್ರೀಗೆ ಈಗಾಗಲೇ ಮದುವೆಯಾಗಿದೆಯಾ ಎನ್ನುವ ಪ್ರಶ್ನೆ ಹರಿದಾಡುತ್ತಿದೆ. ಅವರ ಕೈಯ್ಯಲ್ಲಿ ಇರುವ ಉಂಗುರವೇ ಈ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣ.   

ಮಂಗಳೂರು ಮೂಲದ ಅನುಶ್ರೀ, ಅಲ್ಲಿನ ಸಂಪ್ರದಯವಾಗಿರುವ ಉಂಗುರ (ಒಡ್ಡುಂಗುರ) ಧರಿಸಿರುವುದು ಕಾರ್ಯಕ್ರಮವೊಂದರಲ್ಲಿ ಬೆಳಕಿಗೆ ಬಂದಿದೆ. ಈ ಉಂಗುರವನ್ನು ತುಳುನಾಡಿನಲ್ಲಿ ಮದುವೆಯಾದ ಹೆಣ್ಣು ಮಕ್ಕಳು ಮಾತ್ರ ಧರಿಸುತ್ತಾರೆ.   

ಹಾಗಾಗಿ ಈಗ ಅನುಶ್ರೀ ಕೈಯ್ಯಲ್ಲಿ ಇರುವ ಈ ಉಂಗುರ ಚರ್ಚೆಗೆ ಕಾರಣವಾಗಿದೆ.

ಆದರೆ ಅನುಶ್ರೀ ಇದನ್ನು ಹಾಗೆಯೇ ಸುಮ್ಮನೆ ಧರಿಸಿದ್ದಾರೆಯಂತೆ. ಇದು ಮದುವೆಯಾಗಿದೆ ಎನ್ನುವ ಕಾರಣಕ್ಕೆ ಧರಿಸಿರುವ ಉಂಗುರ ಅಲ್ಲ ಎನ್ನಲಾಗಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link