ಕಾಂತಾರ ಪ್ರೀಕ್ವೆಲ್‌ಗೆ ರಿಷಬ್‌ ಶೆಟ್ಟಿ ಪಡೆಯುತ್ತಿರುವ ಭಾರೀ ಸಂಭಾವನೆ ಇದು.!

Fri, 01 Dec 2023-3:37 pm,

ಕಾಂತಾರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಬುಡಮೇಲು ಮಾಡಿತು. ಇದರೊಂದಿಗೆ ರಿಷಬ್ ಶೆಟ್ಟಿ ಹೆಸರು ದೇಶಾದ್ಯಂತ ಜನಪ್ರಿಯವಾಯಿತು. ಯಾವುದೇ ನಿರೀಕ್ಷೆ ಇಲ್ಲದೇ ತೆರೆಕಂಡ ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದು ಗೊತ್ತೇ ಇದೆ. 

ಕಳೆದ ವರ್ಷ ತೆರೆಕಂಡ ಕಾಂತಾರ ಸಿನಿಮಾ ವಿಶ್ವಾದ್ಯಂತ 400 ಕೋಟಿ ರೂಪಾಯಿ ಕೊಳ್ಳೆ ಹೊಡೆದಿದೆ. ಈ ಸಿನಿಮಾಗೆ ರಿಷಬ್ 4 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ. ಸದ್ಯ ಕಾಂತಾರ ಪ್ರಿಕ್ವೆಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್ ಕೂಡ ಬಿಡುಗಡೆ ಮಾಡಿದರು. ಆದರೆ ಈ ಎರಡನೇ ಭಾಗಕ್ಕೆ ರಿಷಬ್ ಶೆಟ್ಟಿ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಕಾಂತಾರ ಎರಡನೇ ಭಾಗಕ್ಕೆ ರಿಷಬ್ ಶೆಟ್ಟಿ 100 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ವರದಿಗಳಿವೆ. ಈ ಸಿನಿಮಾದ ಮೇಲಿನ ನಿರೀಕ್ಷೆ ದೊಡ್ಡದಿರುವುದರಿಂದ ಅವರ ಸಂಭಾವನೆ ಕೂಡ 25 ಪಟ್ಟು ಹೆಚ್ಚಿದೆ.

ಕಾಂತಾರ ಪ್ರೀಕ್ವೆಲ್‌ ಸಿನಿಮಾಗಾಗಿ 100 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈ ಸಂಭಾವನೆಯಲ್ಲಿ ಅರ್ಧದಷ್ಟು ಅಂದರೆ 50 ಕೋಟಿಯನ್ನು ಮುಂಗಡವಾಗಿ ಪಡೆದಿರುವಂತಿದೆ.

ಈ ಸಿನಿಮಾದ ರೈಟ್ಸ್ ಮಾರಾಟವಾದ ಮೇಲೆ ರಿಷಬ್ ಶೆಟ್ಟಿ ಅದರ ಲಾಭದಲ್ಲಿ ಕೂಡ ಪಾಲು ಪಡೆಯಲಿದ್ದಾರೆ. ನಿರ್ದೇಶಕನಾಗಿ, ನಟನಾಗಿ ಎಲ್ಲವನ್ನೂ ನಿಭಾಯಿಸುತ್ತಿರುವ ರಿಷಬ್ ಗೆ ಗೋಲ್ಡನ್ ಟೈಮ್ ಇದಾಗಿದೆ. 

ಇತ್ತೀಚೆಗೆ ಬಿಡುಗಡೆಯಾದ ರಿಷಬ್ ಅವರ ಫಸ್ಟ್ ಲುಕ್ ಪ್ರೇಕ್ಷಕರನ್ನು ಅದ್ಭುತವಾಗಿ ಆಕರ್ಷಿಸಿದೆ. ಕಾಂತಾರ: ಎ ಲೆಜೆಂಡ್ ಅಧ್ಯಾಯ 1 ಎಂಬ ಶೀರ್ಷಿಕೆಯ ಈ ಚಿತ್ರವು ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link