ಈ ರಾಶಿಯವರ ಎಲ್ಲಾ ಕಷ್ಟಗಳಿಗೂ ಮುಕ್ತಿ ! ಇನ್ನೇನಿದ್ದರೂ ಪ್ರಗತಿ, ಸಮೃದ್ದಿ, ನೆಮ್ಮದಿಯ ಬದುಕು
ಜ್ಯೋತಿಷಿಗಳ ಪ್ರಕಾರ, ಬುಧಗ್ರಹ ಅಸ್ತ ಅವಸ್ಥೆಯಲ್ಲಿ ಇರುವುದು ಮಂಗಳಕರವಲ್ಲ. ಈ ಬಾರಿ ಬುಧನು ಮೇಷ ರಾಶಿಯಲ್ಲಿ ಉದಯಿಸಲಿರುವುದರಿಂದ ಕೆಲವು ರಾಶಿಗಳ ಅದೃಷ್ಟದ ಬಾಗಿಲು ತೆರೆಯಲಿದೆ. ಈ ಸಮಯದಲ್ಲಿ ವೃತ್ತಿ ಮತ್ತು ಉದ್ಯೋಗದಲ್ಲಿ ಪ್ರಯೋಜನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಈ ರಾಶಿಯವರ ಆದಾಯದಲ್ಲಿ ಹೆಚ್ಚಳವಾಗಲಿದೆ. ಸಾಮಾಜಿಕ ಗೌರವ ಹೆಚ್ಚಾಗಲಿದೆ.
ಮೇಷ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧಗ್ರಹದ ಉದಯವು ಮೇಷ ರಾಶಿಯವರಿಗೆ ಶುಭ ಮತ್ತು ಫಲದಾಯಕವಾಗಿರುತ್ತದೆ. ಈ ಸಮಯದಲ್ಲಿ, ಈ ರಾಶಿಯವರ ಆತ್ಮ ವಿಶ್ವಾಸವು ಹೆಚ್ಚಾಗುತ್ತದೆ. ವ್ಯಕ್ತಿತ್ವ ಸುಧಾರಿಸುತ್ತದೆ. ವೈವಾಹಿಕ ಜೀವನವು ಮಂಗಳಕರವಾಗಿರುತ್ತದೆ. ಅಷ್ಟೇ ಅಲ್ಲ, ವ್ಯಾಪಾರ ಮಾಡುವವರಿಗೂ ಈ ಸಮಯ ಅತ್ಯಂತ ಶುಭಕರವಾಗಿದೆ. ಆದಾಯ ಹೆಚ್ಚಲಿದೆ.
ಕಟಕ ರಾಶಿ : ಬುಧ ಗ್ರಹದ ಉದಯವು ಕರ್ಕಾಟಕ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ, ವೃತ್ತಿಜೀವನದಲ್ಲಿ ಪ್ರಗತಿಯ ಸಾಧ್ಯತೆಯಿದೆ. ಉದ್ಯಮಿಗಳಿಗೂ ಲಾಭವಾಗುವುದು. ನೀವು ಸಾಲವಾಗಿ ಕೊಟ್ಟು ಹಿರಗೆ ಉಳಿದಿರುವ ಹಣ ಅಥವಾ, ಇಷ್ಟು ದಿನ ನಿಮ್ಮ ಕೈ ಸೇರದೇ ಉಳಿದಿರುವ ಹಣವನ್ನು ಮರಳಿ ಪಡೆಯುವುದು ಸಾಧ್ಯವಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧಗ್ರಹದ ಉದಯದಿಂದಾಗಿ, ಸಿಂಹ ರಾಶಿಯವರ ಅದೃಷ್ಟದ ಬಾಗಿಲು ತೆರೆಯುತ್ತದೆ. ಈ ಸಮಯದಲ್ಲಿ, ಈ ರಾಶಿಯವರು ಇದ್ದಕ್ಕಿದ್ದಂತೆ ಹಣವನ್ನು ಗಳಿಸುತ್ತಾರೆ. ಯಾವುದೇ ರೀತಿಯ ಶುಭ ಕಾರ್ಯವನ್ನು ನೆರವೇರಿಸಬಹುದು. ನಿಮ್ಮ ಸ್ಥಾನ ಮತ್ತು ಗೌರವ ಹೆಚ್ಚಾಗುತ್ತದೆ.
(ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)