ಬೆದರಿಕೆಗಳ ನಡುವೆಯೂ ಸಿಎಂ ಪುತ್ರನನ್ನೇ ಪ್ರೀತಿಸಿ ಮದುವೆಯಾದ ಸ್ಟಾರ್ ನಟಿ ಈಕೆ..!
)
Riteish deshmukh and Genelia love story: ಸಿನಿಮೀಯ ಕಥೆಯಂತೆ ಈ ಸ್ಟಾರ್ ನಟಿ ಬೆದರಿಕೆಗಳ ನಡುವೆಯೂ ಸಿಎಂ ಪುತ್ರನನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.
)
ಬಾಲಿವುಡ್ ಸೆಲೆಬ್ರಿಟಿ ಜೋಡಿ ಜೆನಿಲಿಯಾ ಮತ್ತು ರಿತೇಶ್ ದೇಶಮುಖ್ 2012ರಲ್ಲಿ ಮದುವೆಯಾಗಿದ್ದಾರೆ. ಸಿನಿಮೀಯ ಕಥೆಯಂತೆ ಜೆನಿಲಿಯಾ ಮತ್ತು ರಿತೇಶ್ ದೇಶಮುಖ್ ಪ್ರೇಮಕಥೆ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ಆಗಿದೆ.
)
ಜೆನಿಲಿಯಾ ಮತ್ತು ರಿತೇಶ್ ಮೊದಲು ಮೊದಲು ಭೇಟಿಯಾಗಿದ್ದು ಹೈದರಾಬಾದ್‌ನಲ್ಲಿ. 'ತುಜೆ ಮೇರಿ ಕಸಮ್' ಚಿತ್ರದ ಟೆಸ್ಟ್ ಶೂಟ್‌ನಲ್ಲಿ ಒಬ್ಬರೊನ್ನಬ್ಬರು ಮೀಟ್ ಮಾಡಿದರು.
ಜೆನಿಲಿಯಾ ಏರ್‌ಪೋರ್ಟ್‌ನಲ್ಲಿ ರಿತೇಶ್ ಅವರನ್ನು ನೋಡಿದ್ದರಂತೆ. ರಿತೇಶ್ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ಅವರ ಪುತ್ರ ಎಂಬ ಕಾರಣಕ್ಕೆ ಇಗ್ನೋರ್ ಮಾಡಿದ್ದರಂತೆ. ಸಂದರ್ಶನವೊಂದರಲ್ಲಿ ಈ ವಿಷಯವನ್ನು ರಿತೇಶ್ ದೇಶಮುಖ್ ಬಹಿರಂಗಪಡಿಸಿದ್ದಾರೆ.
ತುಜೆ ಮೇರಿ ಕಸಮ್ ಸೆಟ್‌ನಲ್ಲಿ ಜೆನಿಲಿಯಾ ಮತ್ತು ರಿತೇಶ್ ಸ್ನೇಹಿತರಾದರು. ಮುಂದೆ ಹೈದರಾಬಾದ್ ನಲ್ಲಿ ಶೂಟಿಂಗ್ ಮುಗಿಸಿದ ನಂತರ ಜೆನಿಲಿಯಾ ಅವರನ್ನು ರಿತೇಶ್ ತುಂಬಾ ಮಿಸ್ ಮಾಡಿಕೊಂಡಿದ್ದರಂತೆ.
ನಂತರ ಇಬ್ಬರೂ ಮತ್ತೆ 'ಮಸ್ತಿ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇಬ್ಬರೂ ತಮ್ಮ ಪ್ರೀತಿಯನ್ನು ತಿಳಿಸಿದ್ದಾರೆ. ಮದುವೆಯಾಗಲು ಬಯಸಿದ್ದರಂತೆ. ಆದರೆ ರಿತೇಶ್ ತಂದೆಗೆ ಈ ಮದುವೆ ಇಷ್ಟವಿರಲಿಲ್ಲ. ಜೆನಿಲಿಯಾಳನ್ನು ರಿತೇಶ್ ತುಂಬಾ ಪ್ರೀತಿಸುತ್ತಿದ್ದರು.
ಜೆನಿಲಿಯಾಗೆ ಬೆದರಿಕೆ ಕೂಡ ಬಂದಿತ್ತಂತೆ. ಆದರೂ ಬಿಟ್ಟುಕೊಡದೇ ಹಲವು ಪ್ರಯತ್ನಗಳ ನಂತರ ತಂದೆ ವಿಲಾಸರಾವ್ ಅವರನ್ನು ಒಪ್ಪಿಸಿ ಇಬ್ಬರೂ ಮದುವೆಯಾದರು.