ಸಹೋದರಿ ಸ್ನೇಹಿತೆಯನ್ನೇ ಪ್ರೀತಿಸಿ ಮದ್ವೆಯಾದ ರವೀಂದ್ರ ಜಡೇಜಾ! ಆಕೆ ದೇಶದ ಪ್ರಸಿದ್ಧ ರಾಜಕಾರಣಿ… 97 ಕೋಟಿ ಆಸ್ತಿಗೆ ಒಡತಿಯೂ ಹೌದು
ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಘೋಷಿಸಿದ್ದಾರೆ.
ಈ ವರದಿಯಲ್ಲಿ ಟೀಂ ಇಂಡಿಯಾದ ಪ್ರಮುಖ ಆಲ್’ರೌಂಡರ್ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಭಾರತೀಯ ಜನತಾ ಪಕ್ಷದ ಸದಸ್ಯರಾಗಿ ಜಾಮ್ ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಿವಾಬಾ ಜಡೇಜಾ ಭರ್ಜರಿಗೆ ಗೆಲುವು ಸಾಧಿಸಿ, 8 ಡಿಸೆಂಬರ್ 2022 ರಂದು ಶಾಸಕಿಯಾಗಿ ಆಯ್ಕೆಯಾದರು.
ಅಂದಹಾಗೆ ರಿವಾಬಾ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಚುನಾವಣಾ ಅಫಿಡವಿಟ್ ಪ್ರಕಾರ ರಿವಾಬಾ ಒಟ್ಟು 97 ಕೋಟಿ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದಾರೆ. ಆಕೆಯ ಬಳಿ 57.60 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದು, 4.70 ಲಕ್ಷ ನಗದು ಹೊಂದಿದ್ದಾರೆ.
ಇನ್ನು ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್’ನಲ್ಲಿ ರಿವಾಬಾ ಅವರು ತಮ್ಮ ಪತಿ ರವೀಂದ್ರ ಜಡೇಜಾ ಬಳಿ ರೂ. 35 ಲಕ್ಷ ಮೌಲ್ಯದ ಚಿನ್ನಾಭರಣಗಳಿವೆ. ಇದಲ್ಲದೇ 14.80 ಲಕ್ಷ ಮೌಲ್ಯದ ವಜ್ರ, 8 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳಿವೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ರವೀಂದ್ರ ಜಡೇಜಾ ಕೂಡ 33 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇದು ಕೃಷಿ ಭೂಮಿ, ವಾಣಿಜ್ಯ ಮತ್ತು ವಸತಿ ಪ್ಲಾಟ್;ಗಳು ಮತ್ತು ಮನೆಯನ್ನು ಒಳಗೊಂಡಿದೆ.
ರಿವಾಬಾ ಮತ್ತು ರವೀಂದ್ರ ಜಡೇಜಾ 2016 ರಲ್ಲಿ ವಿವಾಹವಾದರು. ರಿವಾಬಾ ಜುನಾಗಢದ ನಿವಾಸಿಯಾಗಿದ್ದು, ಕಾಂಗ್ರೆಸ್ ನಾಯಕ ಹರಿಸಿಂಗ್ ಸೋಲಂಕಿ ಅವರ ಸೊಸೆ.