Ria Dabi: ಇವರೇ ನೋಡಿ ಐಎಎಸ್ ಟಾಪರ್ ಟೀನಾ ಡಾಬಿ ಸಹೋದರಿ ರಿಯಾ ಡಾಬಿ
ಟೀನಾರಂತೆಯೇ ಅವರ ಸಹೋದರಿ ರಿಯಾ ಡಾಬಿ ಕೂಡ ಯುಪಿಎಸ್ಸಿ ಪರೀಕ್ಷೆಯಲ್ಲಿ 15ನೇ ಸ್ಥಾನ ಪಡೆಯುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ. ತಮ್ಮ ಐಐಎಸ್ ಅಧಿಕಾರಿಯಾಗುವ ಕನಸು ಈಡೇರಿಸಿಕೊಂಡಿರುವ ರಿಯಾ ಕೂಡ ತಮ್ಮ ಅಕ್ಕ ಟೀನಾರಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ.
2015ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿಯೇ ಟೀನಾ ಡಾಬಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಖಿಲ ಭಾರತ ಟಾಪರ್ ಆಗಿದ್ದರು. ಟೀನಾ ಯುಪಿಎಸ್‌ಸಿಯಲ್ಲಿ ಅಗ್ರಸ್ಥಾನ ಪಡೆದಾಗ ರಿಯಾ ಶಾಲೆಯಲ್ಲಿ ಓದುತ್ತಿದ್ದರು. ತನ್ನ ಮೊದಲ ಪ್ರಯತ್ನದಲ್ಲಿಯೇ ತನ್ನ ಅಕ್ಕ ಟಾಪರ್ ಆಗಿರುವುದನ್ನು ನೋಡಿ ದೇಶದ ಪ್ರತಿಷ್ಠಿತ ವೃತ್ತಿಯ ಭಾಗವಾಗಲು ಯೋಚಿಸಿದ್ದೆ ಎಂದು ಸಂದರ್ಶನವೊಂದರಲ್ಲಿ ರಿಯಾ ಹೇಳಿದ್ದರು.
ಟೀನಾರಂತೆಯೇ ರಿಯಾ ಕೂಡ 2021ರ UPSC ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಸಾಧಿಸಿದರು. ದೆಹಲಿಯ ಗೋಲ್ ಮಾರ್ಕೆಟ್ ನಿವಾಸಿಯಾಗಿರುವ ರಿಯಾ ದೆಹಲಿ ವಿವಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದುಕೊಂಡರು.
UPSC ಪರೀಕ್ಷೆಯಲ್ಲಿ ರಿಯಾ ಡಾಬಿ 15ನೇ ರ‍್ಯಾಂಕ್ ಗಳಿಸುವ ಮೂಲಕ ಸಾಧನೆ ಮಾಡಿದ್ದರು. ಮನೆಗೆ ಆಗಮಿಸುವ ಮೂಲಕ ಕುಟುಂಬಸ್ಥರೊಂದಿಗೆ ಸೇರಿ ಟೀನಾ ಡಾಬಿಯವರು ತಮ್ಮ ಸಹೋದರಿಯ ಯಶಸ್ಸನ್ನು ಸಂಭ್ರಮದಿಂದ ಆಚರಿಸಿದ್ದರು.
ಟೀನಾ ಅವರಂತೆಯೇ ರಿಯಾ ಸಹ ದೇಶದ ಅತ್ಯಂತ ಸುಂದರ ಐಎಎಸ್ ಅಧಿಕಾರಿಯಾಗಿದ್ದಾರೆ. ಸಾಮಾಜಿಕ ತಾಣಗಳಲ್ಲಿ ರಿಯಾರಿಗೆ ಅಪಾರ ಅಭಿಮಾನಿ ಬಳಗವಿದೆ.