ದೀರ್ಘ ಕಾಲದವರೆಗೆ ಕಾಡುವ ಕೆಮ್ಮು ಕಫವನ್ನು ಒಂದೇ ಏಟಿಗೆ ನಿವಾರಿಸುತ್ತದೆ ಈ ಹಣ್ಣು!ಈ ಹಣ್ಣಿಗೆ ಉಪ್ಪು ಖಾರ ಹಾಕಿ ತಿಂದರೆ ಅದೇ ದಿವ್ಯೌಷಧ
ಚಳಿ ಆರಂಭವಾಗಿದೆ. ಈ ಬಾರಿ ಚಳಿ ದಾಖಲೆ ಮಟ್ಟದಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿಯಲಿದೆ ಎನ್ನಲಾಗಿದೆ.
ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಕಾಯಿಲೆ ಎಂದರೆ ಕೆಮ್ಮು, ಕಫ. ಕೆಮ್ಮು ಒಮ್ಮೆ ಆರಂಭವಾದರೆ ನಿಲ್ಲುವ ಮಾತೇ ಇರುವುದಿಲ್ಲ.ಮಾತ್ರೆ, ಸಿರಪ್ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ.
ಆದರೆ ಚಳಿಗಾಲದಲ್ಲಿಯೇ ಹೇರಳವಾಗಿ ಸಿಗುವ ಈ ಹಣ್ಣು ಕಾಡುವ ಕೆಮ್ಮು, ಕಫಕ್ಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ.
ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳಂತಹ ಹೊಟ್ಟೆಯ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುವ ಪೇರಳೆ ಕೆಮ್ಮು, ಕಫ ನಿವಾರಣೆಯಲ್ಲಿಯೂ ಬಹು ಮುಖ್ಯ ಪಾತ್ರ ವಹಿಸುತ್ತದೆ.
ಆದರೆ ಪೇರಳೆಯನ್ನು ಹಾಗೆಯೇ ತಿನ್ನುವುದಲ್ಲ. ಕೆಮ್ಮು ಮತ್ತು ನೆಗಡಿಗಾಗಿ ಹುರಿದ ಪೇರಳೆಯನ್ನು ಸೇವಿಸಿದರೆ ಅದಕ್ಕಿಂತ ದೊಡ್ಡ ಮನೆಮದ್ದು ಮತ್ತೊಂದಿಲ್ಲ.
ಪೇರಳೆಯಲ್ಲಿ ವಿಟಮಿನ್ ಸಿ ಅಧಿಕವಾಗಿದೆ.ಇದರ ಸಂಕೋಚಕ ಗುಣಲಕ್ಷಣಗಳು ಕಫವನ್ನು ನೀರು ಮಾಡಲು ಮತ್ತು ಕೆಮ್ಮು ಮತ್ತು ಶೀತವನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಪೇರಳೆ ಆಸ್ಕೋರ್ಬಿಕ್ ಆಮ್ಲ ಮತ್ತು ಕಬ್ಬಿಣದ ಸಮೃದ್ಧ ಮೂಲವಾಗಿದೆ. ಇದು ಶ್ವಾಸಕೋಶ ಬಿಗಿ ಹಿಡಿಯುವುದು ಮತ್ತು ಕಫ ರಚನೆಯನ್ನು ಕಡಿಮೆ ಮಾಡುತ್ತದೆ. ಇದು ಇನ್ಫ್ಲುಯೆನ್ಸ14 ಅನ್ನು ಗುಣಪಡಿಸುವಲ್ಲಿ ಪವಾಡದಂತೆ ಕಾರ್ಯನಿರ್ವಹಿಸುತ್ತವೆ
ಒಂದು ಹಸಿ ಪೇರಳೆಯನ್ನು ತೆಗೆದುಕೊಂಡು ಎರಡು ಭಾಗಗಳಾಗಿ ಕತ್ತರಿಸಿ. ಇದಕ್ಕೆ ಸ್ವಲ್ಪ ಕಲ್ಲು ಉಪ್ಪು ಮತ್ತು ಸ್ವಲ್ಪ ಖಾರ ಹಾಕಿ ಹುರಿಯಬೇಕು. ಈ ರೀತಿ ಹುರಿದ ಪೇರಳೆಯನ್ನು ಕೆಮ್ಮಿನಿಂದ ಬಳಲುತ್ತಿದ್ದವರಿಗೆ ನೀಡಿದರೆ ಕೆಮ್ಮು ಮಾಯವಾಗಿ ಬಿಡುತ್ತದೆ.
ಇದನ್ನು ಕನಿಷ್ಠ 3-4 ದಿನಗಳ ಕಾಲ ಸೇವಿಸಬೇಕು.ಕೆಮ್ಮು ನಿಂತು ಬಿಡುತ್ತದೆ. ಪ್ರತಿದಿನವೂ ಇದನ್ನು ಸೇವಿಸಿದರೂ ಯಾವುದೇ ಹಾನಿಯಾಗುವುದಿಲ್ಲ.
ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.