ರಾಕಿಂಗ್ ಸ್ಟಾರ್ ಯಶ್ ಬಾಡಿಗಾರ್ಡ್ ಶ್ರೀನಿವಾಸ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?
![](https://kannada.cdn.zeenews.com/kannada/sites/default/files/2024/10/25/459155-yash-1.jpg?im=FitAndFill=(500,286))
Yash bodyguard remuneration: ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಹೀರೋ ಆಹಿ ಸದ್ಯ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸದ್ಯ ಇದೀಗ ನಟನ ಬಾಡಿಗಾರ್ಡ್ ಹಾಯಬೂಸಾ ಗಾಡಿ ಮೇಲೆ ಕೂತು ಫೋಟೋಗೆ ಪೋಸ್ ಕೊಟ್ಟಿದ್ದು ಈತನ ಸಂಭಾವನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳು ಹುಟ್ಟಿಕೊಂಡಿದೆ.
![](https://kannada.cdn.zeenews.com/kannada/sites/default/files/2024/10/25/459154-yash-1.jpeg?im=FitAndFill=(500,286))
ರಾಕಿಂಗ್ ಸ್ಟಾರ್ ಯಶ್ ಅವರ ಬಾಡಿಗಾರ್ಡ್‌ನ ಹೆಸರು ಶ್ರೀನಿವಾಸ್. ಧೈತ್ಯ ಮೈಕಟ್ಟು ಹೊಂದಿರುವ ಈತ ಸದಾ ರಾಕಿಂಗ್ ಸ್ಟಾರ್ ಎಲ್ಲಿಗೇ ಹೋದರು ಅವರ ಜೊತೆ ಹೋಗುತ್ತಾರೆ.
![](https://kannada.cdn.zeenews.com/kannada/sites/default/files/2024/10/25/459153-yash-6.jpg?im=FitAndFill=(500,286))
ಯಶ್ ಹಾಗೂ ರಾಧಿಕಾ ಇಬ್ಬರೂ ಕೂಡ ಯಾವುದೇ ಬೇದ ಭಾವ ಮಾಡದೆ ತಮ್ಮ ಅಂಗರಕ್ಷಕರೊಂದಿಗೆ ಕಾಲ ಕಳೆಯುತ್ತಾರೆ. ಇತ್ತೀಚೆಗಷ್ಟೆ ಈ ಜೋಡಿ ಒಟ್ಟಿಗೆ ಕೂತು ತಮ್ಮ ಅಂಗರಕ್ಷಕರೊಂದಿಗೆ ಕೂತು ಊಟ ಮಾಡಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನ ಗೆದ್ದಿತ್ತು.
ಯಶ್ ಸಾಮಾನ್ಯವಾಗಿ ಎಲ್ಲರಂತೆ ಸಿಂಪಲ್ ಜೀವನವನ್ನು ನಡೆಸಲು ಭಯಸುತ್ತಾರೆ. ತಮ್ಮ ಅಂಗರಕ್ಷಕರು ಹಾಗೂ ಟ್ರೇನರ್‌ಗಳೊಂದಿಗೆ ಕೂತು ಊಟ ಮಾಡುತ್ತಾರೆ, ಯಾವುದೇ ಬೇದ ಭಾವ ಮಾಡದೆ ಅವರ ಜೊತೆ ಸಮಯ ಕಳೆಯುತ್ತಾರೆ.
ಸದ್ಯ ರಾಕಿಂಗ್ ಸ್ಟಾರ್ ಯಶ್ ಅವರ ಅಂಗರಕ್ಷಕ ಶ್ರೀನಿವಾಸ್ ಅವರು ಹಾಯಬುಸಾ ಗಾಡಿ ಮೇಲೆ ಕೂತು ಫೋಟೋಗೆ ಪೋಸ್ ಕೊಟ್ಟಿದ್ದು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಯಶ್ ಅವರ ಅಂಗರಕ್ಷಕ ಶ್ರೀನಿವಾಸ ಅವರು ಹಾಯಬುಸಾ ಗಾಡಿಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದ್ದು, ಸದ್ಯ ಈ ಗಾಡಿಯ ಬೆಲೆ 20 ಲಕಷ ರೂಪಾಯಿ.
ಸದ್ಯ ಈ ಫೋಟೋಗಳನ್ನು ನೋಡಿದ ನಂತರ ನೆಟ್ಟಿಗರು, ಇವರು ಬಳಸುವ ಗಾಡಿಯೇ 20 ಲಕ್ಷ ರೂ. ಎಂದರೆ ರಾಕಿಂಗ್ ಸ್ಟಾರ್ ಯಶ್ ಈತನಿಗೆ ತಿಂಗಳಿಗೆ ಲಕ್ಷ ಲಕ್ಷ ಸಂಭಾವನೆ ನೀಡುತ್ತಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ಆದರೆ ಇಲ್ಲಿಯವರೆಗೂ ನಟ ತನ್ನ ಅಂಗರಕ್ಷನಿಗೆ ಎಷ್ಟು ಸಂಭಾವನೆ ನೀಡುತ್ತಾರೆ ಎಂಬುದು ಅಧಿಕೃತವಾಗಿ ತಿಳಿದುಬಂದಿಲ್ಲವಾದರೂ, ಶ್ರೀನಿವಾಸ್ ಯಶ್ ಅವರಿಂದ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಿತುವುದು ಮಾತ್ರ ಕನ್‌ಫರ್ಮ್ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.