Rohit Sharma : ಭರ್ಜರಿ ಕಮ್ ಬ್ಯಾಕ್ ನೀಡಲು ರೋಹಿತ್ ಶರ್ಮಾ ಏನು ಮಾಡ್ತಿದ್ದಾರೆ ನೋಡಿ

Sat, 26 Nov 2022-9:52 pm,

ವಿರಾಟ್ ಕೊಹ್ಲಿ ಇಡೀ ವಿಶ್ವದ ಫಿಟ್ ಆಟಗಾರ ಎಂದು ಕರೆಯಲಾಗುತ್ತದೆ. ಏಷ್ಯಾ ಕಪ್ 2022 ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸಿದ ನಂತರ ಕೊಹ್ಲಿ ತಮ್ಮ ಫಾರ್ಮ್ ಗೆ ಮರಳಿದರು, ಈಗ ರೋಹಿತ್ ಕೂಡ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಶರ್ಮಾ ಫಿಟ್ ಆದ ನಂತರ ಫಾರ್ಮ್ಗೆ ಮರಳಲು ಮುಂದಾಗಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಹರ್ಭಜನ್ ಸಿಂಗ್ ಮತ್ತು ಸುನಿಲ್ ಗವಾಸ್ಕರ್ ಅವರಂತಹ ಅನುಭವಿಗಳು ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. 2022 ರ ಸಂಪೂರ್ಣ ಟಿ 20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಯುಜ್ವೇಂದ್ರ ಚಹಾಲ್ ಮತ್ತು ಹರ್ಷಲ್ ಪಟೇಲ್ ನನ್ನ ಮೈದಾನದ ಹೊರಗೆ ಕೂರಿಸಿದ್ದರು.

ಟಿ20 ವಿಶ್ವಕಪ್ 2022 ರಲ್ಲಿ, ರೋಹಿತ್ ಹೀನಾಯವಾಗಿ ಸೋತರು. ಶರ್ಮಾ ಬ್ಯಾಟ್‌ನಿಂದ ರನ್ ಬರಲೇ ಇಲ್ಲ. ಭಾರತ ತಂಡಕ್ಕೆ ಬಲಿಷ್ಠ ಓಪನಿಂಗ್ ನೀಡಲು ಸಾಧ್ಯವಾಗಲಿಲ್ಲ. ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಕೇವಲ ಒಂದು ಅರ್ಧ ಶತಕ ಗಳಿಸಿಲು ಸಶಕ್ತರಾದರು.

ರೋಹಿತ್ ಶರ್ಮಾ ನೆಟ್‌ನಲ್ಲಿ ಬೆವರು ಹರಿಸುತ್ತಿರುವ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ನ್ಯೂಜಿಲೆಂಡ್ ಪ್ರವಾಸದಿಂದ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. ನ್ಯೂಜಿಲೆಂಡ್ ಪ್ರವಾಸದ ನಂತರ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸಕ್ಕೆ ತೆರಳಬೇಕಿದೆ. ಇದಕ್ಕಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಶ್ರಮಿಸುತ್ತಿದ್ದಾರೆ. ಅತ್ಯುತ್ತಮ ಫಿಟ್ನೆಸ್ ಪಡೆಯಲು ವರ್ಕೌಟ್ ಮಾಡುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link