ಅರಮನೆಯೇ ಮಂಕಾಗುವಷ್ಟು ಐಷಾರಾಮಿಯಾಗಿದೆ ರೋಹಿತ್ ಶರ್ಮಾ ಮನೆ: ಹಿಟ್’ಮ್ಯಾನ್ ಹೌಸ್ ಸ್ಪೆಷಾಲಿಟಿ ತಿಳಿದ್ರೆ ಕಳೆದೋಗ್ತೀರ!
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅತ್ಯಂತ ಯಶಸ್ವಿ ಕ್ಯಾಪ್ಟನ್’ಗಳಲ್ಲಿ ಒಬ್ಬರು. ODIಗಳಲ್ಲಿ ಎರಡು ದ್ವಿಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಲ್ಲದೆ, ರೋಹಿತ್ ಈಗ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ.
ಇಂದು ರೋಹಿತ್ ಶರ್ಮಾ ಅದ್ಭುತ ಜೀವನಶೈಲಿಯನ್ನು ನಡೆಸುತ್ತಿದ್ದಾರೆ. ಮುಂಬೈನಲ್ಲಿರುವ ರೋಹಿತ್ ಶರ್ಮಾ ಅವರ ಮನೆ ಐಷಾರಾಮಿಯಾಗಿರುವುದು ಮಾತ್ರವಲ್ಲ, ಬಹಳ ಕ್ರಿಯಾಶೀಲವಾಗಿ ವಿನ್ಯಾಸಗೊಳಿಸಲಾಗಿದೆ.
ರೋಹಿತ್ ಶರ್ಮಾ ಸೌತ್ ಬಾಂಬೆಯ ಐಷಾರಾಮಿ ಪ್ರದೇಶವಾದ ವರ್ಲಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇನ್ನು ಇದೇ ಪ್ರದೇಶದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ಯುವರಾಜ್ ಸಿಂಗ್, ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ಅಜಯ್ ಪಿರಾಮಲ್, ನಾರಾಯಣ ಮೂರ್ತಿ, ಅನಿಲ್ ಅಗರ್ವಾಲ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ನೆಲೆಸಿದ್ದಾರೆ.
ಮುಂಬೈನ ವರ್ಲಿ - ಅಹುಜಾ ಟವರ್ಸ್’ನಲ್ಲಿರುವ ಅತಿ ಎತ್ತರದ ಗಗನಚುಂಬಿ ಕಟ್ಟಡಗಳಲ್ಲಿ ಅವರ ಅಪಾರ್ಟ್ಮೆಂಟ್ ಇದೆ. ಅಪಾರ್ಟ್ಮೆಂಟ್ 29 ನೇ ಮಹಡಿಯಲ್ಲಿದ್ದು, ಅರೇಬಿಯನ್ ಸಮುದ್ರ ಮತ್ತು ಸುಂದರವಾದ ಮುಂಬೈ ಸ್ಕೈಲೈನ್ ಅನ್ನು ಇಲ್ಲಿ ನೋಡಬಹುದು.
ರೋಹಿತ್ ಶರ್ಮಾ ಅವರ ಮನೆಯೊಳಗಿನ ಚಿತ್ರಣ ಹೇಗಿದೆ ಎಂದರೆ, ಆಧುನಿಕ ಕನಸಿನ ಅರಮನೆಯಂತೆ ಇದೆ. 6,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಮನೆ ಸಾಕಷ್ಟು ಐಷಾರಾಮಿ ಮತ್ತು ಆರಾಮದಾಯಕವಾಗಿದೆ.
ರೋಹಿತ್ ಶರ್ಮಾ ಮತ್ತು ಪತ್ನಿ ರಿತಿಕಾ 2015 ರಲ್ಲಿ ಈ ಮನೆಯನ್ನು ಖರೀದಿಸಿದ್ದರು. ಈಗ ತಮ್ಮ ಮಗಳು ಸಮೈರಾ ಜೊತೆ ಇಲ್ಲಿ ವಾಸಿಸುತ್ತಿದ್ದಾರೆ.
ಅಂದಹಾಗೆ ರೋಹಿತ್ ಶರ್ಮಾ ಅವರು ಸದ್ಯ ಟಿ20 ವಿಶ್ವಕಪ್’ನಲ್ಲಿ ಆಡುತ್ತಿದ್ದು, ಕಳೆದ ದಿನ ನಡೆಸ ಸೂಪರ್ 8ರ ಕೊನೆಯ ಪಂದ್ಯದಲ್ಲಿ ಸಿಕ್ಸರ್ ಸುರಿಮಳೆ ಸುರಿಸಿ ಅಬ್ಬರಿಸಿದ್ದರು. ಅಷ್ಟೇ ಅಲ್ಲದೆ, ಟೀಂ ಇಂಡಿಯಾ ಸೆಮಿಫೈನಲ್’ಗೆ ಲಗ್ಗೆ ಇಟ್ಟಿದೆ.
ಕೆಲ ವರದಿಗಳ ಪ್ರಕಾರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ನಿವ್ವಳ ಮೌಲ್ಯ ರೂ 214 ಕೋಟಿ.