Ind vs SA ಮ್ಯಾಚ್ ಬರೀ ಘರ್ಷಣೆಯಲ್ಲ, ಇದುವಿರಾಟ್-ರೋಹಿತ್‌ಗೂ `ಯುದ್ಧ`
11 ಸಾವಿರ ಗಳಿಸಿದ ಬ್ಯಾಟ್ಸ್‌ಮನ್ ವಿರಾಟ್ : ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಮಾದರಿಯಲ್ಲಿ ಒಟ್ಟಾರೆ 11 ಸಾವಿರ ಗಳಿಸಿದ ಬ್ಯಾಟ್ಸ್‌ಮನ್ ಆಗಬಹುದು. ಟಿ20 ಕ್ರಿಕೆಟ್‌ನಲ್ಲಿ 353 ಪಂದ್ಯಗಳಲ್ಲಿ 40ರ ಸರಾಸರಿಯಲ್ಲಿ ಒಟ್ಟು 10981 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಅವರು ಒಟ್ಟಾರೆ ಆರು ಶತಕಗಳು ಮತ್ತು 81 ಅರ್ಧ ಶತಕಗಳನ್ನು ಹೊಂದಿದ್ದಾರೆ. ಅವರು 11 ಸಾವಿರ ರನ್ ಪೂರೈಸಲು ಕೇವಲ 19 ರನ್‌ಗಳ ಅಂತರದಲ್ಲಿದ್ದಾರೆ.
ವಿರಾಟ್ ಮತ್ತು ರೋಹಿತ್ ನಡುವೆ 'ಫೈಟ್' : ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರನ್‌ಗಳ ವಿಷಯದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ದೊಡ್ಡ ವ್ಯತ್ಯಾಸವಿಲ್ಲ. ಇಬ್ಬರು ದಿಗ್ಗಜ ಬ್ಯಾಟ್ಸ್‌ಮನ್‌ಗಳ ನಡುವೆ ಕೇವಲ 31 ರನ್‌ಗಳ ವ್ಯತ್ಯಾಸವಿದೆ. ಆದರೆ, ಸರಾಸರಿಯಲ್ಲಿ ವಿರಾಟ್ ಸಾಕಷ್ಟು ಮೇಲಿದ್ದಾರೆ. ವಿರಾಟ್ ಸರಾಸರಿ 50 ಕ್ಕಿಂತ ಹೆಚ್ಚು ಆದರೆ ರೋಹಿತ್ ಸರಾಸರಿ 32 ರ ಸಮೀಪದಲ್ಲಿದೆ. ವಿರಾಟ್ 2010ರಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೆ, ರೋಹಿತ್ 2007ರಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.
2ನೇ ಸ್ಥಾನದಲ್ಲಿದ್ದಾರೆ ವಿರಾಟ್ : ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಅವರಿಗಿಂತ ಮೇಲಿದ್ದಾರೆ. ವಿರಾಟ್ ಭಾರತದ ಪರ 108 ಟಿ20 ಪಂದ್ಯಗಳಲ್ಲಿ ಒಟ್ಟು 3663 ರನ್ ಗಳಿಸಿದ್ದಾರೆ. ಅವರು ಇತ್ತೀಚೆಗೆ ಏಷ್ಯಾಕಪ್‌ನಲ್ಲಿ ಈ ಮಾದರಿಯ ಮೊದಲ ಶತಕವನ್ನು ಗಳಿಸಿದರು.
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ಗಳು : ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ್ದಾರೆ. ಇದುವರೆಗೆ ಅವರು ಈ ಮಾದರಿಯಲ್ಲಿ ಭಾರತಕ್ಕಾಗಿ 140 ಪಂದ್ಯಗಳನ್ನು ಆಡಿದ್ದಾರೆ ಮತ್ತು ಒಟ್ಟು 3694 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಮತ್ತು 28 ಅರ್ಧ ಶತಕಗಳು ಸೇರಿವೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ರೋಹಿತ್ ಸರಾಸರಿ 32.12 ಆಗಿದೆ.
ಟೀಂ ಇಂಡಿಯಾ ನಾಯಕತ್ವ ನಿಭಾಯಿಸುತ್ತಿದ್ದಾರೆ ರೋಹಿತ್ : ಆರಂಭಿಕ ಆಟಗಾರ ರೋಹಿತ್ ಶರ್ಮಾ ಟೀಂ ಇಂಡಿಯಾದ ನಾಯಕತ್ವವನ್ನು ವಹಿಸಿಕೊಳ್ಳುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ಮುಂಬರುವ ಟಿ20 ವಿಶ್ವಕಪ್‌ಗೆ ಪ್ರವೇಶಿಸಲಿದೆ. ಟೀಂ ಇಂಡಿಯಾ ಇತ್ತೀಚೆಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತು ಮತ್ತು ಈಗ ದಕ್ಷಿಣ ಆಫ್ರಿಕಾ ವಿರುದ್ಧ ಅದೇ ಸಾಧನೆಯನ್ನು ಪುನರಾವರ್ತಿಸುವುದು ಅದರ ಗುರಿಯಾಗಿದೆ.
ಟಾಪರ್ ಆಗಿದ್ದಾರೆ ಕ್ರಿಸ್ ಗೇಲ್ : ಒಟ್ಟಾರೆ ಟಿ20ಯಲ್ಲಿ ಗರಿಷ್ಠ ರನ್ ಗಳಿಸಿದ ವಿಚಾರದಲ್ಲಿ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ. ಗೇಲ್ ವಿಶ್ವದ ಅನೇಕ ಟಿ20 ಲೀಗ್‌ಗಳಲ್ಲಿ ಭಾಗವಹಿಸಿದ್ದಾರೆ. ಟಿ20ಯಲ್ಲಿ ಒಟ್ಟು 14562 ರನ್ ಗಳಿಸಿದ್ದಾರೆ. ಅವರ ನಂತರ, ಕೀರಾನ್ ಪೊಲಾರ್ಡ್ 11915 ರನ್ ಗಳಿಸಿದ ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ (11902 ರನ್) ಮೂರನೇ ಸ್ಥಾನದಲ್ಲಿದ್ದಾರೆ. ಸದ್ಯ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.