ರೋಹಿತ್ ಶರ್ಮಾ ಸಹೋದರ ಕೂಡ ಟೀಂ ಇಂಡಿಯಾದ ಸ್ಟಾರ್‌ ಆಟಗಾರ! ಇದುವರೆಗೆ ಬಹಿರಂಗವಾಗದ ಸತ್ಯ ತೆರೆದಿಟ್ಟಿದ್ದು ಅವರ ತಾಯಿಯೇ.. ಆತ ಯಾರು ಗೊತ್ತಾ!?

Fri, 18 Oct 2024-1:37 pm,

ಟೆಸ್ಟ್‌ ಮತ್ತು ಏಕದಿನ ತಂಡದ ನಾಯಕ ರೋಹಿತ್‌ ಶರ್ಮಾ ಸದ್ಯ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಆಡುತ್ತಿದ್ದಾರೆ. ಕಳೆದ ದಿನ ಕಳಪೆ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ಕೇವಲ 46 ರನ್‌ಗಳಿಗೆ ಆಲೌಟ್‌ ಆಗಿತ್ತು. ಈ ಎಲ್ಲದರ ಮಧ್ಯೆ ಪೋಸ್ಟ್‌ ಒಂದು ವೈರಲ್‌ ಆಗಿದ್ದು, ರೋಹಿತ್‌ ಶರ್ಮಾ ಅವರ ತಾಯಿ ನೀಡಿದ ಹೇಳಿಕೆ ಇದಾಗಿದೆ.

 

ಭಾರತ ಈ ವರ್ಷ ಟಿ20 ವಿಶ್ವಕಪ್‌ ಗೆಲ್ಲುವ ಮೂಲಕ ಸುಮಾರು 11 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿತ್ತು. ಅಂದು ಬಾರ್ಬಡೋಸ್‌ ಮೈದಾನದಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿದ್ದು, ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸಿತ್ತು.

 

ಇನ್ನೂ ಭಾರತ ಚಾಂಪಿಯನ್‌ ಪಟ್ಟ ಅಲಂಕರಿಸುತ್ತಿದ್ದಂತೆ ದೇಶಾದ್ಯಂತ ಸಂಭ್ರಮಾಚರಣೆ ಮನೆ ಮಾಡಿತ್ತು. ಎಲ್ಲೆಡೆಯಿಂದಲೂ ಶುಭಾಶಯಗಳ ಸುರಿಮಳೆ ಹರಿದುಬಂದಿತ್ತು. ಇವೆಲ್ಲದರ ನಡುವೆ ಮತ್ತಷ್ಟು ಗಮನಸೆಳೆದಿದ್ದು ರೋಹಿತ್‌ ಶರ್ಮಾ ಅವರ ತಾಯಿ ಪೂರ್ಣಿಮಾ ಮಾಡಿದ್ದ ಪೋಸ್ಟ್‌.

 

ಪೂರ್ಣಿಮಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡು, ಮತ್ತೊಬ್ಬ ಟೀಂ ಇಂಡಿಯಾದ ಕ್ರಿಕೆಟಿಗನನ್ನು ತನ್ನ ಮಗ ಮತ್ತು ರೋಹಿತ್‌ ಶರ್ಮಾ ಸಹೋದರ ಎಂದು ಬರೆದುಕೊಂಡಿದ್ದರು.  ಆ ಆಟಗಾರ ಬೇರಾರು ಅಲ್ಲ ವಿರಾಟ್‌ ಕೊಹ್ಲಿ.

 

“ಭುಜದ ಮೇಲೆ ಮಗಳು, ಬೆನ್ನ ಹಿಂದೆ ದೇಶ, ಪಕ್ಕದಲ್ಲೇ ಸಹೋದರ” ಎಂದು ಬರೆದಿರುವ ಫೋಟೋವೊಂದನ್ನು ಪೂರ್ಣಿಮಾ ಹಂಚಿಕೊಂಡಿದ್ದರು. ಈ ಮೂಲಕ ಕೊಹ್ಲಿಯನ್ನೂ ಸಹ ತನ್ನ ಮಗನೆಂದೇ ಭಾವಿಸಿ ಪೂರ್ಣಿಮಾ ಪೋಸ್ಟ್ ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ಅಂದಿನಿಂದ ಇಂದಿನವರೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಲೇ ಇದೆ.

 

ಇನ್ನು ಭಾರತವು T20 ವಿಶ್ವಕಪ್ 2024 ಪ್ರಶಸ್ತಿಯನ್ನು ಗೆದ್ದ ನಂತರ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ ಮತ್ತು ರವೀಂದ್ರ ಜಡೇಜಾ T20 ಕ್ರಿಕೆಟ್‌’ನಿಂದ ನಿವೃತ್ತಿ ಘೋಷಿಸಿದ್ದರು.

 

2007 ರಲ್ಲಿ T20 ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ಪಾದಾರ್ಪಣೆ ಮಾಡಿದ ರೋಹಿತ್, ಇಲ್ಲಿಯವರೆಗೆ ಪ್ರತಿ T20 ವಿಶ್ವಕಪ್‌’ನಲ್ಲಿ ಆಡಿದ ಏಕೈಕ ಭಾರತೀಯ ಕ್ರಿಕೆಟಿಗ ಎಂಬ ವಿಶಿಷ್ಟ ಹಿರಿಮೆಯನ್ನು ಹೊಂದಿದ್ದಾರೆ. ರೋಹಿತ್ 2024ರ ಟಿ 20 ವಿಶ್ವಕಪ್‌’ನ 8 ಪಂದ್ಯಗಳಲ್ಲಿ 257 ರನ್ ಗಳಿಸಿದ್ದು, ಇದು ಭಾರತೀಯ ಆಟಗಾರನ ಗರಿಷ್ಠ ದಾಖಲೆಯಾಗಿದೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link