`ಅವರು ನನ್ನನ್ನು ಬದುಕಲು ಬಿಡುವುದಿಲ್ಲ...`- ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಶಾಕಿಂಗ್ ಹೇಳಿಕೆ ವೈರಲ್
ಭಾರತದಲ್ಲಿ ಕ್ರಿಕೆಟ್ ಮೇಲೆ ಕ್ರೇಜ್ ಎಷ್ಟಿದೆಯೋ ಅದರ ದುಪ್ಪಟ್ಟು ಕ್ರೇಜ್ ಕ್ರಿಕೆಟಿಗರ ಜೀವನಶೈಲಿ ಮೇಲಿದೆ. ಇವರು ತಮ್ಮ ಬದುಕನ್ನು ಎಷ್ಟೇ ಗೌಪ್ಯವಾಗಿಟ್ಟುಕೊಳ್ಳಲು ಪ್ರಯತ್ನಿಸಿದರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಅದು ರಿವೀಲ್ ಆಗಿಯೇ ಆಗುತ್ತದೆ.
ಅಂದಹಾಗೆ ಭಾರತದ ಬ್ಯಾಟಿಂಗ್ ಆಧಾರ ಸ್ತಂಭ ಮತ್ತು ನಾಯಕನಾಗಿರುವ ರೋಹಿತ್ ಶರ್ಮಾ ಹೇಳಿಕೆಯೊಂದರ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
ಅದು ರಿತಿಕಾ ಜೊತೆ ರೋಹಿತ್ ಶರ್ಮಾ ಡೇಟಿಂಗ್ ಮಾಡುತ್ತಿದ್ದ ಸಮಯ. ಆ ಸಂದರ್ಭದಲ್ಲಿ ತಾನು ಅನುಭವಿಸಿದ ಸಂಕಷ್ಟದ ಬಗ್ಗೆ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಜೊತೆಗಿನ ಸಂಭಾಷಣೆಯಲ್ಲಿ ರಿವೀಲ್ ಮಾಡಿದ್ದಾರೆ.
ಹಿಟ್‌ಮ್ಯಾನ್' ರಿತಿಕಾ ಮತ್ತು ತನಗೆ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಎಂದಿಗೂ ಭಾವಿಸಲಿಲ್ಲ ಎಂದು ಹೇಳಿದ್ದಾರೆ. ಶರ್ಮಾ ಅವರು ಮತ್ತು ಅವರ ಪತ್ನಿ ಇಬ್ಬರೂ ತಮ್ಮ ನಡುವೆ ನೇರವಾದ ಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳಿದರು.
"ನಾವು ನಿಜವಾಗಿಯೂ ಎಂದಿಗೂ ಡೇಟಿಂಗ್ ಮಾಡುತ್ತಿದ್ದೇವೆ ಎಂದು ಭಾವಿಸಲಿಲ್ಲ. ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಆಕೆ ಅವತ್ತೂ, ಇವತ್ತೂ... ನನ್ನ ಮ್ಯಾನೇಜರ್. ನಾವು ಕೆಲಸದ ವಿಷಯದಲ್ಲಿ ನೇರ ಸಂಬಂಧವನ್ನು ಹೊಂದಿದ್ದೇವೆ. ಕೆಲಸದನಂತರ, ಸ್ನೇಹಿತರಾಗಿದ್ದೆವು. ಜನರು ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ನಾನು ಹೆದರುವುದಿಲ್ಲ”ಎಂದು ರೋಹಿತ್ ಶರ್ಮಾ ಸ್ಕೈ ಸ್ಪೋರ್ಟ್ಸ್ʼನ ಯೂಟ್ಯೂಬ್ ಚಾನೆಲ್ʼನಲ್ಲಿ ಹೇಳಿದ್ದರು.
ರೋಹಿತ್ ಶರ್ಮಾ ಮತ್ತು ರಿತಿಕಾ ಪರಸ್ಪರ ಕಾಳಜಿ ವಹಿಸುತ್ತಿದ್ದರು. ರಿತಿಕಾ ಜೊತೆಗಿನ ಸಂಬಂಧದ ಬಗ್ಗೆ ಸ್ನೇಹಿತರಿಗೆ ಮೊದಲೇ ಹೇಳಿದರೆ, ಅವರು ನನ್ನನ್ನು ಬದುಕಲು ಬಿಡುವುದಿಲ್ಲ ಎಂಬುದು ಅರಿವಾಯಿತು. ಹಾಗಾಗಿ ತಡವಾಗಿ ತಿಳಿಸಿದೆವು ಎಂದು ಹೇಳಿದ್ದಾರೆ.
"ಇದು ಕೇವಲ ಸ್ನೇಹ ಮತ್ತು ಕಾಳಜಿ. ಆದರೆ, ನಮ್ಮ ಪ್ರೀತಿ ವಿಚಾರವನ್ನು ನನ್ನ ಸ್ನೇಹಿತರೆಲ್ಲರೂ ಹೇಗೆ ತಿಳಿಸಬೇಕೆಂದು ತಿಳಿದಿರಲಿಲ್ಲ. ನಾವು ಅಧಿಕೃತವಾಗಿ ಡೇಟಿಂಗ್ ಮಾಡಲು ಪ್ರಾರಂಭಿಸಿದಾಗ, ಈ ಬಗ್ಗೆ ಹೇಗೆ ತಿಳಿಸುವುದು ಎಂದು ನಾನು ಯೋಚಿಸಲು ಪ್ರಾರಂಭಿಸಿದೆ. ವಿಷಯ ಗೊತ್ತಾದಲ್ಲಿ ಅವರು ನನ್ನನ್ನು ಬದುಕಲು ಬಿಡುವುದಿಲ್ಲ ಎಂದು ನಾನು ಭಾವಿಸಿದೆ” ಎಂದು ರೋಹಿತ್ ಶರ್ಮಾ ಹೇಳಿದರು