ದಾಖಲೆಗಾಗಿ ಕೊಹ್ಲಿ ನಿಧಾನವಾಗಿ ಆಡ್ತಾರಾ? ನಾಯಕ ರೋಹಿತ್ ಶರ್ಮಾ ಹೇಳಿದ್ದೇನು?
ಭಾರತ vs ಸೌತ್ ಆಫ್ರಿಕಾ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ವಿರಾಟ್ ಕೊಹ್ಲಿ ಅವರ ಶತಕ ಮತ್ತು ಜಡೇಜಾ ಅವರ ಅದ್ಭುತ ಬೌಲಿಂಗ್‌ನಿಂದಾಗಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧದ ಲೀಗ್ ಪಂದ್ಯದಲ್ಲಿ 243 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ವಿರಾಟ್ ಕೊಹ್ಲಿ ದಾಖಲೆಯ ಶತಕ: ವಿರಾಟ್ ಕೊಹ್ಲಿ ತಮ್ಮ ದಾಖಲೆಯ ಶತಕಕ್ಕಾಗಿ ತುಂಬಾ ನಿಧಾನವಾಗಿ ಆಡಿದ್ದು ಭಾರತ ತಂಡಕ್ಕೆ ಹಿನ್ನಡೆಗೆ ಕಾರಣವಾಯಿತು ಎಂದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ.
ವಿರಾಟ್ ಕೊಹ್ಲಿ ಪಂದ್ಯದ ನಂತರ ಮಾತನಾಡಿದ್ದು, "ಹೊರಗಿನ ಜನರು ಆಟವನ್ನು ಸ್ವಲ್ಪ ವಿಭಿನ್ನವಾಗಿ ನೋಡುತ್ತಾರೆ. ಓಪನರ್‌ಗಳು ಆಕ್ಷನ್‌ಗೆ ಬಂದಾಗ, ಅದು ಉತ್ತಮ ಭಾವನೆ ಮತ್ತು ಪ್ರತಿಯೊಬ್ಬರೂ ಅದನ್ನು ಮುಂದುವರಿಸಲು ಬಯಸುತ್ತಾರೆ. ಆದರೆ ಚೆಂಡು ಹಳೆಯದಾದಾಗ , ಪರಿಸ್ಥಿತಿ ವಿಭಿನ್ನವಾಗುತ್ತದೆ. ನಾನು ಕೊನೆಯವರೆಗೂ ಆಡಬೇಕು. ನನ್ನ ಸುತ್ತಲಿನ ಆಟಗಾರರು ಆಕ್ರಮಣಕಾರಿಯಾಗಿ ಆಡಬೇಕು ಅಂತ ತಂಡದ ಆಡಳಿತ ಸ್ಪಷ್ಟವಾಗಿ ಸಂದೇಶ ನೀಡಿತ್ತು ಎಂದು ಹೇಳಿದರು.
ವಿರಾಟ್ ಕೊಹ್ಲಿ ಬಗ್ಗೆ ರೋಹಿತ್ ಶರ್ಮಾ, ಪಿಚ್ ಸುಲಭದ್ದಾಗಿರಲಿಲ್ಲ. ಈ ಪಿಚ್‌ನಲ್ಲಿ ನಿಮಗೆ ವಿರಾಟ್ ಕೊಹ್ಲಿಯಂತಹವರು ಬೇಕು ಎಂದು ಹೊಗಳಿದ್ದಾರೆ.
ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿಗೆ ಇದು ಅದ್ಭುತ ಶತಕ. ಇದು 260-270 ರನ್‌ಗಳನ್ನು ತೆಗೆದುಕೊಳ್ಳುವ ಪಿಚ್. ವಿರಾಟ್ ಕೊಹ್ಲಿ ಆಟವಾಡುತ್ತಾ ನಮ್ಮ ಸ್ಕೋರ್ 300 ದಾಟಿತು ಎಂದಿದ್ದಾರೆ.
ನಾನು ವಿರಾಟ್ ಕೊಹ್ಲಿಯೊಂದಿಗೆ ಬ್ಯಾಟಿಂಗ್ ಮಾಡುವುದನ್ನು ನಿಜವಾಗಿಯೂ ಆನಂದಿಸುತ್ತೇನೆ ಎಂದು ಶ್ರೇಯಸ್ ಐಯ್ಯರ್ ಹೇಳಿದ್ದಾರೆ.
ಇದರೊಂದಿಗೆ ವಿರಾಟ್ ಕೊಹ್ಲಿ ಕೊನೆಯವರೆಗೂ ನಿಂತು ಆಡಬೇಕು ಎಂಬುದು ಭಾರತ ತಂಡದ ಆಡಳಿತದ ನಿರೀಕ್ಷೆಯಾಗಿತ್ತು. ವಿರಾಟ್ ಕೊಹ್ಲಿ ಅದನ್ನು ಪರಿಪೂರ್ಣವಾಗಿ ಮಾಡುತ್ತಾರೆ ಎಂದು ತಿಳಿದುಬಂದಿದೆ.