ಇನ್ನೂ ನಾಲ್ಕೆ ತಿಂಗಳಲ್ಲಿ ಅಂತರಾಷ್ಟ್ರೀಯಾ ಟೆಸ್ಟ್ ಹಾಗೂ ಏಕದಿನ ಪಂದ್ಯಕ್ಕೆ ಗುಡ್ ಬೈ ಹೇಳಲಿದ್ದಾರೆ ಹಿಟ್‌ಮ್ಯಾನ್..! ಇನ್ಸ್ಟಾ ಪೋಸ್ಟ್ ಬಿಚ್ಚಿಟ್ಟ ಶಾಕಿಂಗ್ ಸತ್ಯ
ರೋಹಿತ್ ಶರ್ಮಾ ಪ್ರಸ್ತುತ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಆಡಲು ಕೊಲಂಬೊದಲ್ಲಿದ್ದಾರೆ. ಆಗಸ್ಟ್ 2 ರಿಂದ ಸರಣಿ ಆರಂಭವಾಗಿದ್ದು, ಮೊದಲ ಪಂದ್ಯ ಟೈ ಆಗಿದೆ. ಇನ್ನೂ ಎರಡನೇ ಪಂದ್ಯ ಭಾನುವಾರ ನಡೆಯಲಿದೆ.
ಟಿ20 ವಿಶ್ವಕಪ್ ಫೈನಲ್ ಬಳಿಕ ರೋಹಿತ್ ಶರ್ಮಾ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಟಿ20 ಸರಣಿಯ ಬಳಿಕ ಇದೀಗ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಭಾರತ ಸೋತಿದ್ದು ಎರಡನೇ ಪಂದ್ಯ ಗೆಲ್ಲಲೇ ಬೇಕಾದ ಅನಿವಾರ್ಯತೆ ಭಾರತ ತಂಡಕ್ಕೆ ಎದುರಾಗಿದೆ.
ರೋಹಿತ್ ಶ್ರೀಲಂಕಾದಲ್ಲಿದ್ದು, ಈ ನಡುವೆ ಈ ಆಟಗಾರ ಇನ್ನು 4 ತಿಂಗಳಲ್ಲಿ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ ಎಂಬ ದೊಡ್ಡ ಸುದ್ದಿ ಹೊರ ಬಿದ್ದಿದೆ.
ರೋಹಿತ್ ಶರ್ಮಾ ಅವರ ಇನ್ಸ್ಟಾಗ್ರಾಮ್ ಸ್ಟೋರಿ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಕೊನೆಯ ವರ್ಷ ಎಂದು ಭಾರತೀಯ ನಾಯಕ ಹೇಳಿದ್ದಾರೆ ಎಂದು ಹೇಳಲಾಗಿದೆ.
ರೋಹಿತ್ ಶರ್ಮಾ ಈ ರೀತಿ ಎಲ್ಲಿಯೂ ಬರೆದಿಲ್ಲ ಅವರ Instagram ಕಥೆಯಲ್ಲಿ ಅಂತಹ ಯಾವುದೇ ಪೋಸ್ಟ್ ಹಾಕಿಲ್ಲ. ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆಗುವುದು ರೋಹಿತ್ ಅವರ ಪ್ರಸ್ತುತ ಗುರಿಯಾಗಿದೆ.ಆದರೆ, ರೋಹಿತ್ ಶರ್ಮಾ ಫಿಟ್ ಆಗಿದ್ದರೆ 2027ರ ವಿಶ್ವಕಪ್ ಕೂಡ ಆಡಬಹುದು ಎಂದು ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.