World cup Final : ದುಃಖ - ದುಗುಡ, ನೋವು - ನಿರಾಶೆ , ಫ್ಯಾನ್ಸ್ ಎಂದೂ ಮರೆಯಲು ಸಾಧ್ಯವಾಗದ ದೃಶ್ಯಗಳಿವು !

Mon, 20 Nov 2023-10:51 am,

ಸತತ 10 ಗೆಲುವಿನೊಂದಿಗೆ ವಿಶ್ವಕಪ್ ಫೈನಲ್ ತಲುಪಿದ್ದ ಟೀಂ ಇಂಡಿಯಾ ಸೋಲು ಕಂಡಾಗ ಆಕಾಶವೇ ಕಳಚಿ ಬಿದ್ದ ಭಾವ ಆಟಗಾರರದ್ದು. ಭಾರತೀಯ ನಾಯಕ ರೋಹಿತ್ ಶರ್ಮಾಗೆ ಕಣ್ಣೀರು ತಡೆಯಲಾಗಲಿಲ್ಲ. ರೋಹಿತ್ ಪತ್ನಿ ರಿತಿಕಾ ಅವರ ಕಣ್ಣಲ್ಲೂ ನೀರು  ಜಿನುಗುತ್ತಿತ್ತು. 

ಭಾರತದ ಸೋಲಿನ ನಂತರ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕೂಡಾ ಭಾವುಕರಾಗಿದ್ದು ಕಂಡು ಬಂತು. ಅವನ ಕಣ್ಣಲ್ಲಿ ನೀರು ತುಂಬಿತ್ತು. ಜಸ್ಪ್ರೀತ್ ಬುಮ್ರಾ ಅವರನ್ನು ತಬ್ಬಿ ಅತ್ತಿರುವ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದೆ. 

ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ  ಮುಖದಲ್ಲೂ ನಿರಾಸೆ. 2023ರ ವಿಶ್ವಕಪ್‌ನಲ್ಲಿ ಕೊಹ್ಲಿ 765 ರನ್ ಬಾರಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 

ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಸೋಲಿನ ನಂತರ ಮೈದಾನದಲ್ಲಿಯೇ ಕುಳಿತು ಮೌನವಾಗಿದ್ದರು. 

ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್ ಪಡೆದು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮೊಹಮ್ಮದ್ ಶಮಿ ಕೂಡ ಸೋಲಿನ ಬಳಿಕ ನಿರಾಸೆ ಕಂಡಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link