Health tips : ಗುಲಾಬಿಯಲ್ಲಿದೆ ಸೌಂದರ್ಯ ಹೆಚ್ಚಿಸುವ ರಹಸ್ಯ ಗುಣಗಳು..!
ಗುಲಾಬಿಯ ಎಸಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಅದೇ ನೀರಿನಿಂದ ಕಣ್ಣುಗಳನ್ನು ತೊಳೆದರೆ, ಕಣ್ಣಿನ ಉರಿ ಮಾಯವಾಗುತ್ತದೆ.
ಗುಲಾಬಿ ಎಸಳಗಳನ್ನು ತಿಂದರೆ ಗಂಟಲು ಹುಣ್ಣು ಮಾಗುತ್ತದೆ.
ಗುಲಾಬಿ ದಳಗಳನ್ನು ತಿಂದರೆ ಅದರಿಂದ ಹೊಟ್ಟೆಯು ತುಂಬಿದಂತೆ ಆಗುವುದು ಮತ್ತು ನೈಸರ್ಗಿಕವಾಗಿ ತೂಕ ಇಳಿಸಲು ಇದು ಸಹಕಾರಿ.
ಗುಲಾಬಿಯಲ್ಲಿರುವ ಫೆನಿಲೆಥೆನಾಲ್ ಅಂಶವು ನಂಜುನಿರೋಧಕವಾಗಿ ಕೆಲಸ ಮಾಡಿ ಮೊಡವೆ ನಿವಾರಣೆಗೆ ಪರಿಣಾಮಕಾರಿ.
ಗುಲಾಬಿಯ ದಳಗಳನ್ನು ಅರೆದು ತುಟಿಗೆ ಹಚ್ಚುವುದರಿಂದ ಬಣ್ಣ ವೃದ್ಧಿಸಲು ಪ್ರಮುಖ ಪಾತ್ರ ವಹಿಸುವುದು.
ಗುಲಾಬಿ ಹೂವಿನ ದಳಗಳನ್ನು ತಿನ್ನುತ್ತಿದ್ದರೆ ಮುಖದ ಮೇಲಿನ ಕಲೆಗಳು ದೂರವಾಗುತ್ತವೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.