Rose Day 2024: ಈ ಐದು ಬಗೆಯ ಗುಲಾಬಿಗಳ ಅರ್ಥವೇನು ಗೊತ್ತಾ.. ಆ ಹೂವು ಕೊಟ್ರೆ ಪ್ರೀತಿಗೆ ಗ್ರೀನ್ ಸಿಗ್ನಲ್!
ಹಳದಿ ಗುಲಾಬಿ: ಇದು ಸಂತೋಷ ಮತ್ತು ಸ್ನೇಹದ ಸಂಕೇತ ಎಂದು ಹೇಳಲಾಗುತ್ತದೆ. ಈ ಹೂವು ಇಬ್ಬರ ನಡುವೆ ಸಂತೋಷವನ್ನು ಹೆಚ್ಚಿಸುತ್ತದೆ ಎಂದು ಪ್ರೇಮಿಗಳು ನಂಬುತ್ತಾರೆ.
ಬಿಳಿ ಗುಲಾಬಿ: ಸಾಮಾನ್ಯವಾಗಿ ನಾವು ಬಿಳಿ ಬಣ್ಣವನ್ನು ಶಾಂತಿಯ ಸಂಕೇತವೆಂದು ಭಾವಿಸುತ್ತೇವೆ. ಈ ಹೂವು ನಾವು ಯಾರಿಗಾದರೂ ಕ್ಷಮೆ ಕೇಳಲು ಬಯಸಿದಾಗ ನೀಡುತ್ತೇವೆ. ನೀವು ರೋಸ್ ಡೇ ದಿನ ನೀವು ಕ್ಷಮೆಯಾಚಿಸಲು ಬಯಸುವ ವ್ಯಕ್ತಿಗೆ ಈ ಹೂವನ್ನು ನೀಡಬಹುದು.
ಕೆಂಪು ಗುಲಾಬಿ: ಕೆಲವರು ತಮ್ಮ ಪ್ರಿಯತಮೆಗೆ ಅನೇಕ ರೀತಿಯ ಹೂವುಗಳನ್ನು ನೀಡುತ್ತಾರೆ. ಅದರಲ್ಲಿ ವಿಶೇಷವಾಗಿ ಕೆಂಪು ಗುಲಾಬಿಗಳನ್ನು ನೀಡಲಾಗುತ್ತದೆ. ಈ ಕೆಂಪು ಬಣ್ಣವನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಯಾರಾದರೂ ನಿಮಗೆ ಈ ಹೂವನ್ನು ಕೊಟ್ಟರೆ, ಅವರು ನಿಮ್ಮನ್ನು ಪ್ರೀತಿಸುತ್ತಾರೆ ಎಂದು ತಿಳಿಯಿರಿ.
ಪಿಂಕ್ ಗುಲಾಬಿ: ಅನೇಕ ಜನರು ಪಿಂಕ್ ಗುಲಾಬಿಯನ್ನು ಇಷ್ಟಪಡುತ್ತಾರೆ. ಅವರ ಸ್ನೇಹ ಚೆನ್ನಾಗಿರಲಿ ಎಂದು ಹಾರೈಸಿ ಆತ್ಮೀಯ ಗೆಳೆಯನಿಗೆ ಪಿಂಕ್ ಗುಲಾಬಿ ನೀಡಲಾಗುತ್ತದೆ.
ನೀಲಿ ಗುಲಾಬಿ: ಇದು ಅಪರೂಪದ ಗುಲಾಬಿ. ಯಾರಾದರೂ ನಿಮಗೆ ನೀಲಿ ಗುಲಾಬಿ ಹೂವನ್ನು ನೀಡಿದರೆ, ನೀವು ಅಪರೂಪವೆಂದು ಪರಿಗಣಿಸಿದ್ದಾರೆ ಎಂದರ್ಥ.