ಗುಲಾಬಿ ಹೂವಿನ ಎಸಳು ಸಾಕು… 5 ನಿಮಿಷದಲ್ಲಿ ಬುಡದಿಂದಲೇ ಬಿಳಿಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು!
ಗುಲಾಬಿ ಎಸಳುಗಳ ಬಳಕೆಯು ಕೂದಲಿನ ಅನೇಕ ಸಮಸ್ಯೆಗಳನ್ನು ತೊಡೆದುಹಾಕಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯೋಣ.
ಗುಲಾಬಿ ಎಸಳುಗಳನ್ನು ಒಣಗಿಸಿ ಅದರ ಪುಡಿಯನ್ನು ತಯಾರಿಸಿ ಬಳಕೆ ಮಾಡುವುದರಿಂದ ಹಲವಾರು ರೀತಿಯ ಕೂದಲಿನ ಸಮಸ್ಯೆಗಳು ದೂರವಾಗುತ್ತವೆ. ಗುಲಾಬಿ ಎಸಳಿನ ಪುಡಿಯನ್ನು ಅಗತ್ಯಕ್ಕೆ ಅನುಗುಣವಾಗಿ ಇತರ ನೈಸರ್ಗಿಕ ಪದಾರ್ಥಗಳೊಂದಿಗೆ ಬೆರೆಸಿ ವಿವಿಧ ಪೇಸ್ಟ್’ಗಳನ್ನು ತಯಾರಿಸಬಹುದು. ನಂತರ ಕೂದಲಿಗೆ ಹಲವು ವಿಧಗಳಲ್ಲಿ ಬಳಸಬಹುದು.
ತಲೆಹೊಟ್ಟು ತುಂಬಾ ಸಾಮಾನ್ಯವಾದ ಸಮಸ್ಯೆ. ಆದರೆ ಅದನ್ನು ತೊಡೆದುಹಾಕಲು ಕಷ್ಟ. ಗುಲಾಬಿಯಲ್ಲಿ ಉತ್ಕರ್ಷಣ ನಿರೋಧಕ ಗುಣವಿದ್ದು ತಲೆಹೊಟ್ಟು ಹೋಗಲಾಡಿಸಲು ಸಹಾಯ ಮಾಡುತ್ತದೆ. ರೋಸ್ ಪೆಟಲ್ ಪೌಡರ್ ಅನ್ನು ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿದರೆ, ತಲೆಹೊಟ್ಟು ಅಥವಾ ಫಂಗಸ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಗುಲಾಬಿ ದಳದ ಪುಡಿ ಕೂದಲಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಗುಲಾಬಿ ದಳದ ಪುಡಿಯನ್ನು ಪೇಸ್ಟ್ ಮಾಡಿ ಅದನ್ನು ನಿಯಮಿತವಾಗಿ ಬಳಸುವುದರಿಂದ, ಕೂದಲನ್ನು ಹೈಡ್ರೇಟ್ ಮಾಡುತ್ತದೆ. ಜೊತೆಗೆ ಹೊಳೆಯುತ್ತದೆ ಮತ್ತು ಆರೋಗ್ಯಕರವಾಗಿಸುತ್ತದೆ. ಗುಲಾಬಿ ಎಸಳಿನ ಪುಡಿ ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು, ಇದು ಕೂದಲಿನ ಮೇಲೆ ಯಾವುದೇ ಅಡ್ಡ ಪರಿಣಾಮಗಳನ್ನು ಬಿಡುವುದಿಲ್ಲ.
ವಿಟಮಿನ್’ಗಳು ಕೂದಲಿಗೆ ಅತ್ಯಗತ್ಯ ಅಂಶಗಳಾಗಿವೆ. ವಿಶೇಷವಾಗಿ ಎ, ಬಿ, ಸಿ ಮತ್ತು ಇ ವಿಟಮಿನ್’ಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ನೆತ್ತಿಯನ್ನು ಪೋಷಿಸುತ್ತದೆ. ಗುಲಾಬಿ ದಳಗಳಿಂದ ತಯಾರಿಸಿದ ಪುಡಿಯು ಅಂತಹ ಎಲ್ಲಾ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.
ರೋಸ್ ಪೌಡರ್ ಪೇಸ್ಟ್ ನೆತ್ತಿಯ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನೆತ್ತಿಯ ಕೋಶಕಗಳನ್ನು ಪುನರುಜ್ಜೀವನಗೊಳಿಸುವುದಲ್ಲದೆ, ಕೂದಲಿಗೆ ಹೊಳಪು ಮತ್ತು ಮೃದುತ್ವವನ್ನು ನೀಡುತ್ತದೆ, ನಿಯಮಿತವಾಗಿ ಬಳಸಿದರೆ, ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಬಿಳಿ ಕೂದಲಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಕಾಡುತ್ತಿದೆ. ಹೀಗಿರುವಾಗ ಗುಲಾಬಿ ಎಸಳುಗಳ ಪುಡಿಯನ್ನು ಪೇಸ್ಟ್ ಮಾಡಿ ಹಚ್ಚುವುದರಿಂದ ಬಿಳಿ ಕೂದಲನ್ನು ಕ್ಷಣಾರ್ಧದಲ್ಲಿ ಕಪ್ಪಾಗಿಸಬಹುದು. ಗುಲಾಬಿಯಲ್ಲಿ ಉತ್ಕರ್ಷಣ ನಿರೋಧಕ ಗುಣವಿದ್ದು ಇದು ಕೂದಲಿಗೆ ಕಡುಕಪ್ಪು ಬಣ್ಣವನ್ನು ಪಡೆಯಲು ಸಹಾಯ ಮಾಡುತ್ತದೆ.
ಒಂದು ಹಿಡಿ ತಾಜಾ ಗುಲಾಬಿ ಎಸಳುಗಳನ್ನು ಬಿಸಿಲಿನಲ್ಲಿ ಒಣಗಲು ಬಿಡಿ. ನಂತರ ಮಧ್ಯಮ ಉರಿಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆಯನ್ನು ತಣ್ಣಗಾಗಲು ಬಿಡಿ. ಇನ್ನು ಬಿಸಿಲಿನಲ್ಲಿ ಒಣಗಿದ ಗುಲಾಬಿ ದಳಗಳು ಗಾಢ ಕಂದು ಬಣ್ಣಕ್ಕೆ ತಿರುಗಿದ ನಂತರ, ಅವುಗಳನ್ನು ನುಣ್ಣಗೆ ಮಿಕ್ಸಿಯಲ್ಲಿ ಪುಡಿಮಾಡಿ. ಸಿದ್ಧಪಡಿಸಿದ ಎಣ್ಣೆಯಲ್ಲಿ ಒಂದು ಚಮಚ ಗುಲಾಬಿ ದಳದ ಪುಡಿಯನ್ನು ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಬೆರೆಸಿ.
ಕೂದಲನ್ನು ಎರಡು ಸಮಾನ ಭಾಗಗಳಾಗಿ ವಿಭಜಿಸಿ. ಈ ಎಣ್ಣೆಯನ್ನು ಕೂದಲಿನ ಬುಡದಿಂದ ತುದಿಯವರೆಗೆ ಮಸಾಜ್ ಮಾಡಿ. ಕೂದಲಿನ ಉದ್ದಕ್ಕೂ ತೈಲ ಹೀರಿಕೊಳ್ಳುವಂತೆ ಮಸಾಜ್ ಮಾಡಿ. ನಂತರ ಶವರ್ ಕ್ಯಾಪ್ನಿಂದ ಮುಚ್ಚಿ 45 ನಿಮಿಷಗಳ ಕಾಲ ಬಿಡಿ. ಅದಾದ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೊಮ್ಮೆ ಈ ಪರಿಹಾರ ಅನುಸರಿಸಿದರೆ ಕೂದಲಿನ ಸಕಲ ಸಮಸ್ಯೆಯೂ ಪರಿಹಾರವಾಗುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.