ಕಾಂತಿಯುತವಾದ ಉದ್ದ ಕೂದಲಿಗೆ ನೈಸರ್ಗಿಕ ಪರಿಹಾರ ರೋಸ್ ವಾಟರ್...
ಕೂದಲ ಆರೈಕೆಯಲ್ಲಿ ರೋಸ್ ವಾಟರ್ ತುಂಬಾ ಲಾಭದಾಯಕವಾಗಿದೆ. ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿರುವ ರೋಸ್ ವಾಟರ್ ಬಳಕೆಯಿಂದ ಇದು ಕೂದಲನ್ನು ಬೇರುಗಳಿಂದ ಪೋಷಿಸುತ್ತದೆ.
ಕೂದಲಿಗೆ ರೋಸ್ ವಾಟರ್ ಬಳಕೆಯಿಂದ ತಲೆಹೊಟ್ಟು, ನಿವಾರಣೆಯಾಗಿ, ನೆತ್ತಿಯ ತುರಿಕೆಯಂತಹ ಸಮಸ್ಯೆಗಳಿಗೂ ಇದು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.
ರೋಸ್ ವಾಟರ್ ನಲ್ಲಿರುವ ಉರಿಯೂತದ ಲಕ್ಷಣಗಳು ನೆತ್ತಿಯ ಆರೋಗ್ಯಕ್ಕೆ ಟಾನಿಕ್ ಇದ್ದಂತೆ. ಇದು ಕೂದಲಿಗೆ ಹೊಳಪನ್ನು ನೀಡುವಲ್ಲಿಯೂ ಪರಿಣಾಮಕಾರಿ ಆಗಿದೆ.
ನಿಯಮಿತವಾಗಿ ರೋಸ್ ವಾಟರ್ ಬಳಸುವುದರಿಂದ ಇದು ಸ್ಪ್ಲಿಟ್ ಹೇರ್ ಸಮಸ್ಯೆ ನಿವಾರಿಸಿ ರೇಷ್ಮೆಯಂತಹ ನಯವಾದ ಕೇಶರಾಶಿಯನ್ನು ಹೊಂದಲು ಸಹಕಾರಿ ಆಗಲಿದೆ.
ರೋಸ್ ವಾಟರ್ ಬಳಸಿ ಹೇರ್ ಮಸಾಜ್ ಮಾಡುವುದರಿಂದ ಇದರಲ್ಲಿರುವ ಆಂಟಿಆಕ್ಸಿಡೆಂಟ್ ಗಳು, ಮಿಟಮಿನ್ ಗಳು ಕೂದಲಿನ ಕಿರುಚೀಲಗಳನ್ನು ಆರೋಗ್ಯವಾಗಿರಿಸುವುದರ ಜೊತೆಗೆ ಕೂದಲನ್ನು ಬುಡದಿಂದ ಗಟ್ಟಿಯಾಗಿಸುತ್ತದೆ.
ಕೊಬ್ಬರಿ ಎಣ್ಣೆಯಲ್ಲಿ ರೋಸ್ ವಾಟರ್ ಬೆರೆಸಿ ಹಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗಿ, ಕೂದಲು ಉದುರುವಿಕೆ ನಿಲ್ಲುತ್ತದೆ.
ತಲೆಗೆ ಸ್ನಾನ ಮಾಡುವಾಗ ನೀರಿನಲ್ಲಿ ರೋಸ್ ವಾಟರ್ ಬೆರೆಸಿ ಹೇರ್ ವಾಶ್ ಮಾಡುವುದರಿಂದ ಕೂದಲು ಕಾಂತಿಯುತವಾಗಿ ಆಕರ್ಷಕವಾಗಿ ಕಾಣಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.