Royal Enfield Bullet 500 custom - Bullet 500ಗೆ ಹೊಸ ವಿನ್ಯಾಸ ನೀಡಿದ Kromworks
ನೂತನ ವರ್ಷದಲ್ಲಿ ನೂತನ ಬದಲಾವಣೆಗಳೊಂದಿಗೆ ಬೈಕ್ ಮಾರುಕಟ್ಟೆಗೆ ಇಳಿಯಲಿದೆ ಹಾಗೂ ಬೈಕ್ ಅನ್ನು ಅತ್ಯುತ್ತಮ ರೀತಿಯಲ್ಲಿ ಕಸ್ಟಮೈಸ್ ಮಾಡಲಾಗುವುದು. 2021 ರ ಕುರಿತು ಹೇಳುವುದಾದರೆ, ಈ ವರ್ಷ ರಾಯಲ್ ಎನ್ಫಿಲ್ಡ್ ಬುಲೆಟ್ 500 ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. (Photo: kromworks/Facebook)
ಕಳೆದ ಕೆಲ ವರ್ಷಗಳಿಂದ ತನ್ನ ವಿಶಿಷ್ಟ ಕಷ್ಟಮೈಸೆಶನ್ ಕೌಶಲ್ಯದ ಮೂಲಕ Andika Pratama ಹಾಗೂ ಅವರ ತಂಡ ಭಾರಿ ಯಶಸ್ಸು ಸಂಪಾದಿಸಿದೆ. ತನ್ನ ಕಂಪನಿಯ ನೂತನ ಬ್ರಾಂಡ್ ಆಗಿರುವ ಬುಲೆಟ್ 500 (Royal Enfield Bullet 500) ಅನ್ನು ವಿಶಿಷ್ಟ ರೀತಿಯಲ್ಲಿ ಕಸ್ಟಮೈಸ್ ಮಾಡಲು ರಾಯಲ್ ಎನ್ಫಿಲ್ಡ್ (Royal Enfield) ಇಂಡೋನೇಷ್ಯ ಈ ತಂಡವನ್ನು ಸಂಪರ್ಕಿಸಿತ್ತು. (Photo: kromworks/Facebook)
ಆಂಡಿಕಾ ಮತ್ತು ಅವರ ತಂಡವು ಬುಲೆಟ್ 500 ಅನ್ನು ಕೆಫೆ ರೇಸರ್ ಆಗಿ ಕಸ್ಟಮೈಸ್ ಮಾಡಿದ್ದಾರೆ. ಆದರೆ ಇದು ಒಂದು ಟಿಪಿಕಲ್ ಕೆಫೆ ರೇಸರ್ ಆಗಿಲ್ಲ. ಬುಲೆಟ್ 500 ನ 1950 ರ ದಶಕದ ನೋಟವನ್ನುಇದು ಹೊಂದಿದೆ ಮತ್ತು ಇದಕ್ಕೆ ಫ್ಯೂಚರಿಸ್ಟಿಕ್ ನೋಟ ನೀಡುವುದು ಸವಾಲಿನ ಕೆಲಸವಾಗಿತ್ತು, ಆದರೆ ಕ್ರೋಮ್‌ವರ್ಕ್ಸ್ ಇದನ್ನು ಉತ್ತಮವಾಗಿ ಕಸ್ಟಮೈಸ್ ಮಾಡಿದೆ. (Photo: kromworks/Facebook)
ಈ ತಂಡವು ಫ್ರೇಮ್, ಸ್ವಿಂಗಾರ್ಮ್ ಮತ್ತು ಫೋರ್ಕ್ ಜೋಡಣೆಯನ್ನು ಕಸ್ಟಮೈಸ್ ಮಾಡಿದೆ ಮತ್ತು ರಿಮ್ ಅನ್ನು 21 ಇಂಚಿನ ಗಾತ್ರಕ್ಕೆ ಬದಲಾಯಿಸಿದೆ. ಮೂಲತಃ ರಾಯಲ್ ಎನ್‌ಫೀಲ್ಡ್ ಅನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಇಂಧನ ಟ್ಯಾಂಕ್‌ನ ಹಿಂದೆ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಸೀಟಿನ ಕೆಳಗೆ ಅಳವಡಿಸಲಾಗಿರುವುದರಿಂದ ತಂಡದ ಕೌಶಲ್ಯ ಕಂಡುಬರುತ್ತದೆ. (Photo: kromworks/Facebook)
ಕ್ರೋಮ್ ವರ್ಕ್ಸ್ ಮತ್ತೆ ಕಾರ್ಬೋರೆಟರ್ ಅನ್ನು ಬುಲೆಟ್ ಗೆ ಮತ್ತೊಮ್ಮೆ ಸೇರಿಸಿದೆ. ಈ ತಂಡ ಹೊಸ ವಿನ್ಯಾಸ ರಚಿಸಲು ಕೇವಲ 5 ತಿಂಗಳ ಕಾಲಾವಕಾಶ ತೆಗೆದುಕೊಂಡಿದೆ. (Photo: kromworks/Facebook)