Royal Enfield Classic 350: ನೂತನ ಬೈಕ್ ನ ವೈಶಿಷ್ಟ್ಯ, ಬೆಲೆ ತಿಳಿಯಿರಿ…

Mon, 23 Aug 2021-1:03 pm,

ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಮೆಟಿಯೋರ್ 350(Meteor 350)ನಿಂದ ಬಳಸಿಕೊಂಡಿರುವ 349cc DOHC ಎಂಜಿನ್ ಅನ್ನು ಅಪ್‌ಗ್ರೇಡ್ ಮಾಡಿದ್ದು, ಇದು 20PS ಗರಿಷ್ಠ ಶಕ್ತಿ ಮತ್ತು 27Nm ಟಾರ್ಕ್ ಅನ್ನು ಉತ್ಪಾದಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಮೆಟಿಯೋರ್ ನಿಂದ ಕ್ಲಾಸಿಕ್ ಬೈಕ್ ಜೆ-ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ.

ಇತರ ವೈಶಿಷ್ಟ್ಯಗಳ ವಿಷಯದಲ್ಲಿ ಹೊಸ ಕ್ಲಾಸಿಕ್ 350 ಟ್ರಿಪ್ಪರ್ ಟರ್ನ್-ಬೈ-ಟರ್ನ್(Turn-by-Turn) ನ್ಯಾವಿಗೇಷನ್ ಮತ್ತು ರೈಡರ್‌ಗಳು ತಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಬ್ಲೂಟೂತ್ ಸಂಪರ್ಕವನ್ನು ಬಳಸಿ ನ್ಯಾವಿಗೇಟ್ ಮಾಡಲು ಸಣ್ಣ ಸ್ಕ್ರೀನ್(small screen) ವ್ಯವಸ್ಥೆ ಒದಗಿಸಲಾಗಿದೆ.

ಕ್ಲಾಸಿಕ್ 350ನ ಹಳೆಯ ಮಾದರಿಯ ಬೈಕ್ ನ ಬೆಲೆ ಇತ್ತೀಚೆಗೆ ಏರಿಕೆಯಾಗಿದೆ. ಸದ್ಯ ಅದರ ಬೆಲೆ ಮಾರುಕಟ್ಟೆಯಲ್ಲಿ 2 ಲಕ್ಷ ರೂ. ಇದೆ.

ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಆರಂಭಿಕ ಬೆಲೆ ಸುಮಾರು 1.85 ಲಕ್ಷ ರೂ. ಎಂದು ಹೇಳಲಾಗುತ್ತಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಗಳಲ್ಲಿಯೇ ಕ್ಲಾಸಿಕ್ 350 ಮಾದರಿ ಕಡಿಮೆ ಬೆಲೆಗೆ ಲಭ್ಯವಿರುವ ಬೈಕ್ ಎಂದು ಹೇಳಲಾಗುತ್ತಿದೆ. ಆದರೆ ಈ ಬೈಕ್ ನಲ್ಲಿ ಕಿಕ್-ಸ್ಟಾರ್ಟರ್ ಸೌಲಭ್ಯ ಇರುವುದಿಲ್ಲ ಅಂತಾ ತಿಳಿದುಬಂದಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link