Royal Enfield ನಿಂದ ಹಿಡಿದು ಹೊಂಡಾ ಕಂಪನಿಯವರೆಗೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿವೆ 5 ಹೊಸ ಬೈಕ್ ಗಳು

Thu, 04 Aug 2022-3:37 pm,

1. ರಾಯಲ್ ಎನ್ಫೀಲ್ಡ್ ಹಂಟರ್ 350 - ಇದು ಕಂಪನಿಯ ಅತ್ಯಂತ ಅಗ್ಗದ ದರದ ಬೈಕ್ ಆಗುವ ಸಾಧ್ಯತೆ ಇದೆ. ಆಗಸ್ಟ್ 7 ರಂದು e ಬೈಕ್ ಮಾರುಕಟ್ಟೆಯ ಇಲಿಯುವ ನಿರೀಕ್ಷೆ ಇದೆ. ಇದರ ವಿಶೇಷತೆ ಎಂದರೆ, ಇದುವರೆಗೆ ಕಂಪನಿ ಬಿಡುಗಡೆ ಮಾಡಿರುವ ಅತ್ಯಂತ ಹಗುರ ಬೈಕ್ ಇದಾಗಿರಲಿದೆ. ಇದರ ತೂಕ ಕೇವಲ 180 ಕೆ.ಜಿ ಇದೆ ಎನ್ನಲಾಗಿದೆ. ಬೈಕ್ ನಲ್ಲಿ ಜೆ ಸಿರೀಸ್ ಇಂಜಿನ್ ನೀಡಲಾಗುವ ನಿರೀಕ್ಷೆ ಇದ್ದು, ಮೆಟಿಯೋರ್ ಮತ್ತು ಕ್ಲಾಸಿಕ್ 350 ರಲ್ಲಿಯೂ ಕೂಡ ನೀವು ಈ ಇಂಜಿನ್ ಅನ್ನು ಗಮನಿಸಬಹುದು. ಈ ಇಂಜಿನ್ 20.2 ಹೆಚ್ ಪಿ ಪವರ್ ಹಾಗೂ 27 nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಬೈಕ್ ನ ಸಂಭವನೀಯ ಬೆಲೆ ರೋ.1.5 ಲಕ್ಷ ರೂ.ಗಳಿಂದ ರೂ.1.6 ಲಕ್ಷ ಇರುವ ಸಾಧ್ಯತೆ ಇದೆ.

2. 2022 ವರ್ಷದ ರಾಯಲ್ ಎನ್ಫೀಲ್ಡ್ ಬುಲೆಟ್ 350 - ಕಂಪನಿಯು ತನ್ನ ಬುಲೆಟ್ 350 ಅನ್ನು ಈ ತಿಂಗಳು ಹೊಸ ಅವತಾರದಲ್ಲಿ ಬಿಡುಗಡೆ ಮಾಡಲಿದೆ ಎಂಬ ವರದಿಗಳಿವೆ. ಬುಲೆಟ್ 350 ಪ್ರಸ್ತುತ ಕಂಪನಿಯ ಪ್ರವೇಶ ಮಟ್ಟದ ಬೈಕ್ ಆಗಿದೆ. ಟ್ರಿಪ್ಪರ್ ನ್ಯಾವಿಗೇಶನ್‌ನಂತಹ ವೈಶಿಷ್ಟ್ಯಗಳನ್ನು ಜೆ-ಪ್ಲಾಟ್‌ಫಾರ್ಮ್ ಎಂಜಿನ್‌ನೊಂದಿಗೆ ನೆಕ್ಸ್ಟ್ ಜೇನ್ ಬುಲೆಟ್ 350 ನಲ್ಲಿ ನೀವು ಕಾಣಬಹುದು. ಇದರ ಬೆಲೆ ಸುಮಾರು 1.7 ಲಕ್ಷ ರೂಪಾಯಿ ಇರುವ ಸಾಧ್ಯತೆ ಇದೆ.

3. ಅಪ್ಡೇಟೆಡ್ ಹೀರೋ ಎಕ್ಸ್ ಪಲ್ಸ್ 200 ಟಿ - Hero ಕೂಡ ತನ್ನ Xpulse 200T ಅನ್ನು ನವೀಕರಿಸಬಹುದು. 4V ಎಂಜಿನ್‌ಗೆ ಬೆಂಬಲದೊಂದಿಗೆ ಈ ಹೊಸ ಮಾದರಿ ಬಿಡುಗಡೆಯಾಗುವ ನಿರೀಕ್ಷೆ ಇದೆ. 200T ಕಂಪನಿಯ ಆಫ್ ರೋಡರ್ ಆಗಿದ್ದು, ಇದು 17-ಇಂಚಿನ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ. ಫೋರ್ಕ್ ಗೈಟರ್‌ಗಳು, ಮರುಸ್ಥಾಪಿತ ಹೆಡ್‌ಲ್ಯಾಂಪ್ ಮತ್ತು ಹೊಸ ಬಣ್ಣದ ಸ್ಕೀಮ್‌ನಂತಹ ಬದಲಾವಣೆಗಳನ್ನು ನವೀಕರಿಸಿದ ಆವೃತ್ತಿಯಲ್ಲಿ ಇರುವ ಸಾಧ್ಯತೆ ಇದೆ. ಹೊಸ ಮಾದರಿಯ ಬೆಲೆ 1.24 ಲಕ್ಷ ರೂ.ಇರಬಹುದು. 

4. ಹೊಸ ಹೊಂಡಾ ಬಿಗ್ ವಿಂಗ್ ಮಾಡೆಲ್ - ಹೋಂಡಾ ತನ್ನ ಬಿಗ್ವಿಂಗ್ ಶ್ರೇಣಿಯಲ್ಲಿ ಹೊಸ ಮಾದರಿಯನ್ನು ಪರಿಚಯಿಸುವ ಸಾಧತೆ ಇದೆ. ಇದರ ಬಿಡುಗಡೆ ಆಗಸ್ಟ್ 8 ರಂದು ನಡೆಯಲಿದೆ. ಸದ್ಯಕ್ಕೆ ಬೈಕ್‌ನ ಹೆಸರು ಅಥವಾ ವೈಶಿಷ್ಟ್ಯಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದು ಹೋಂಡಾ CB500X ನ ನವೀಕರಿಸಿದ ಅವತಾರ ಇರುವ ನಿರೀಕ್ಷೆ ಇದೆ. 

5. ಹಾರ್ಲೆ ಡೇವಿಡ್ ಸನ್ ನೈಟ್ ಸ್ಟರ್ - ಹಾರ್ಲೆ-ಡೇವಿಡ್ಸನ್ ಕಳೆದ ವರ್ಷ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಅನ್ನು ಪರಿಚಯಿಸಿತ್ತು. ಈ ವರ್ಷ ಕಂಪನಿಯು ನೈಟ್‌ಸ್ಟರ್ ಮಾದರಿಯನ್ನು ಪರಿಚಯಿಸುವ ಸಾಧ್ಯತೆ ಇದೆ. ಈ ಬೈಕ್‌ನಲ್ಲಿ 89HP ಮತ್ತು 96Nm ಟಾರ್ಕ್‌ನೊಂದಿಗೆ 975 cc ಎಂಜಿನ್ ಅನ್ನು ಕಂಪನಿ ನೀಡಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link