Ruchak Rajyog: ಮಂಗಳನ ಕೃಪೆಯಿಂದ ಮಕರ ರಾಶಿಯಲ್ಲಿ ರುಚಕ ರಾಜಯೋಗ, ಈ ಜನರಿಗೆ ಭಾರಿ ಧನ-ಸಂಪತ್ತು ಪ್ರಾಪ್ತಿ!

Fri, 02 Feb 2024-3:07 pm,

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ತನ್ನ ಉಚ್ಚ ರಾಶಿಗೆ ಪ್ರವೇಶಿಸುವ ಕಾರಣ ರುಚಕ ರಾಜಯೋಗ ರಚನೆಯಾಗುತ್ತದೆ. ಅರ್ಥಾತ್ ಮಂಗಳ ತನ್ನ ಸ್ವರಾಶಿಗಳಾಗಿರುವ ಮೇಷ ಅಥವಾ ವೃಶ್ಚಿಕ ಅಥವಾ ತನ್ನ ಉಚ್ಚ ರಾಶಿಯಾಗಿರುವ ಮಕರ ರಾಶಿಗೆ ಪ್ರವೇಶಿಸಿದಾಗ ಈ ಯೋಗ ರಚನೆಯಾಗುತ್ತದೆ. ಈ ಯೋಗ ನಿರ್ಮಾಣಗೊಂಡಾಗ ಕೆಲ ಜಾತಕದ ಜನರಿಗೆ ಅಪಾರ ಧನಪ್ರಾಪ್ತಿಯಾಗಿ ಜೀವನದಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ.   

ಮೇಷ ರಾಶಿ: ನಿಮ್ಮ ಜಾತಕದ ದಶಮ ಭಾವದಲ್ಲಿ ಮಂಗಳ ವಿರಾಜಮಾನನಾಗಿದ್ದಾನೆ. ಹೀಗಾಗಿ ಈ ಜಾತಕದಲ್ಲಿಯೂ ಕೂಡ ರುಚಕ ರಾಜಯೋಗ ರಚನೆಯಾಗುತ್ತಿದೆ. ಇದರಿಂದ ಮೇಷ ರಾಶಿಯ ಜಾತಕದವರಿಗೆ ಅಪಾರ ಧನ ಸಂಪತ್ತು ಪ್ರಾಪ್ತಿಯಾಗುತ್ತದೆ. ಕಠಿಣ ಪರಿಶ್ರಮದ ಸಂಪೂರ್ಣ ಲಾಭ ಸಿಗುತ್ತದೆ. ವೃತ್ತಿಪರ ಜೀವನದಲ್ಲಿ ನೀವು ಪಟ್ಟ ಪ್ರಯತ್ನಗಳು ಯಶಸ್ವಿಯಾಗಲಿವೆ. ಇದಲ್ಲದೆ ನಿಮ್ಮಲ್ಲಿ ನೇತೃತ್ವದ ಸಾಮರ್ಥ್ಯ ಹೆಚ್ಚಾಗಲಿದೆ. ವೃತ್ತಿಯಲ್ಲಿ ಬರುವ ಪ್ರತಿಯೊಂದು ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗಲಿದೆ. ಆರ್ಥಿಕ ಸ್ಥಿತಿ ಕುರಿತು ಹೇಳುವುದಾದರೆ, ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಬಲಿಷ್ಠವಾಗಲಿದೆ. ಹಣ ಉಳಿತಾಯ ಮಾಡುವಲ್ಲಿ ಯಶಸ್ಸನ್ನು ಕಾಣುವಿರಿ. ಸಾಕಷ್ಟು ಪ್ರಮಾಣದಲ್ಲಿ ಹಣ ಗಳಿಕೆ ಮಾಡುವಲ್ಲಿ ನೀವು ಯಶಸ್ವಿಯಾಗುವಿರಿ. ಇದಲ್ಲದೆ ನೀವು ನಿಮ್ಮ ಗುರಿ ತಲುಪುವಲ್ಲಿ ಕೂಡ ಯಶಸ್ವಿಯಾಗುವಿರಿ. ಸಂಬಂಧಗಳ ಕುರಿತು ಹೇಳುವುದಾದರೆ. ಸಂಗಾತಿಯ ಜೊತೆಗೆ ಉತ್ತಮ ಕಾಲ ಕಳೆಯುವಿರಿ ಮತ್ತು ನಿಮ್ಮ ಸಂಬಂಧದಲ್ಲಿ ಸಮತೋಲನೆ ಹೆಚ್ಚಾಗಲಿದ್ದು, ಸುಮಧುರ ಸಂಬಂಧ ನಿಮ್ಮದಾಗಲಿದೆ.   

ವೃಶ್ಚಿಕ ರಾಶಿ: ನಿಮ್ಮ ಜಾತಕದ ಶಷ್ಟಮ ಭಾವದಲ್ಲಿ ರುಚಕ ರಾಜಯೋಗ ರಚನೆಯಾಗುತ್ತಿದೆ. ಹೀಗಿರುವಾಗ ನಿಮಗೆ ಸಾಲಬಾಧೆಯಿಂದ ಮುಕ್ತಿ ಸಿಗಲಿದೆ. ದೀರ್ಘ ಕಾಲದಿಂದ ಸತಾಯಿಸುತ್ತಿರುವ ಕಾಯಿಲೆಗಳಿಂದಲೂ ಕೂಡ ನಿಮಗೆ ಮುಕ್ತಿ ಸಿಗಲಿದೆ. ನೌಕರಿಯಿಂದ ಹಿಡಿದು ವ್ಯಾಪಾರದಲ್ಲಿ ಭಾರಿ ಧನಲಾಭ ಸಿಗಲಿದೆ. ವ್ಯಾಪಾರ ಅಥವಾ ಕಚೇರಿ ಕೆಲಸಕ್ಕೆ ಸಂಬಂಧಿಸಿದಂತೆ ಯಾತ್ರೆ ಜರಗುವ ಸಾಧ್ಯತೆ ಇದೆ. ಇದರಿಂದ ಮುಂಬರುವ ದಿನಗಳಲ್ಲಿ ನಿಮಗೆ ಲಾಭ ಸಿಗಲಿದೆ. ಹಣ ಸಂಪಾದನೆಯ ಹೊಸ ಅವಕಾಶಗಳು ಒದಗಿಬರಲಿವೆ. ಹಣ ಹೂಡಿಕೆಗೆ ಯೋಜನೆ ಮಾಡುತ್ತಿದ್ದರೆ, ಈ ಅವಧಿಯಲ್ಲಿ ಹಣ ಹೂಡಿಕೆ ಮಾಡುವುದು ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗುವ ಸಾಧ್ಯತೆ ಇದೆ. ವ್ಯಾಪಾರ ಆಂಭ ಕೂಡ ಉತ್ತಮವಾಗಿರಲಿದೆ. ಆರೋಗ್ಯ ಅತ್ಯುತ್ತಮವಾಗಿರಲಿದೆ.   

ಧನು ರಾಶಿ: ನಿಮ್ಮ ಗೋಚರ ಜಾತಕದ ದ್ವಿತೀಯ ಭಾವದಲ್ಲಿ ರುಚಕ ರಾಜಯೋಗ ರಚನೆಯಾಗಲಿದೆ. ಹೀಗಿರುವಾಗ ನಿಮಗೆ ಅಪಾರ ಉನ್ನತಿಯ ಜೊತೆಗೆ ಭಾರಿ ಧನಲಾಭ ಸಿಗಲಿದೆ. ವಿದೇಶದಲ್ಲಿ ಕೆಲಸ ಮಾಡುವ ಜನರಿಗೆ ಅಪಾರ ಯಶಸ್ಸು ಸಿಗಲಿದೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ನಿಮಗೆ ಹೊಸ ಅವಕಾಶಗಳು ಒದಗಿ ಬರಲಿವೆ. ಸಹವರ್ತಿಗಳ ಜೊತೆಗೆ ಪ್ರತಿಸ್ಪರ್ಧಿಸುವ ಸಮಯ ಬರುವ ಸಾಧ್ಯತೆ ಇದೆ. ಹೀಗಾಗಿ ಸ್ವಲ್ಪ ಜಾಗ್ರತೆಯಿಂದ ಇರಿ. ಯಾವುದೇ ರೀತಿಯ ತಪ್ಪು ಗ್ರಹಿಕೆ ನಿಮ್ಮ ಕೆಲಸಕ್ಕೆ ಅಡಚಣೆ ಉಂಟು ಮಾಡಬಹುದು. ಇದರ ಜೊತೆಗೆ ವೈಯಕ್ತಿಕ ಜೀವನ ಉತ್ತಮವಾಗಿರಲಿದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link