ಬ್ಯಾಂಕಿಂಗ್ ನಿಂದ ಚಿನ್ನ ಖರೀದಿವರೆಗೆ ಬದಲಾಗಲಿದೆ ನಿಯಮ
ಜೂನ್ 7 ರಿಂದ ಐಟಿಆರ್‌ನ ಹೊಸ ವೆಬ್‌ಸೈಟ್ ಲಾಂಚ್ ಆಗಲಿದೆ. ಜೂನ್ 1 ರಿಂದ 6 ರವರೆಗೆ ಅಸ್ತಿತ್ವದಲ್ಲಿರುವ ವೆಬ್‌ಸೈಟ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಹಳೆಯ ವೆಬ್‌ಸೈಟ್ www.incometaxindiaefiling.gov.in ನಿಂದ ಹೊಸ ಪೋರ್ಟಲ್ www.incometaxgov.in ಗೆ ಮೈಗ್ರೇಶನ್ ಆಗಲಿರುವುದರಿಂದ ವೆಬ್‌ಸೈಟ್ 6 ದಿನಗಳವರೆಗೆ ಕೆಲಸ ಮಾಡುವುದಿಲ್ಲ. ಜೂನ್ 1 ರಿಂದ ಜೂನ್ 6ರವರೆಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಸೇವೆ ಕಾರ್ಯನಿರ್ವಹಿಸುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಹೊಸ ವೆಬ್‌ಸೈಟ್ ಬಂದ ನಂತರ ಐಟಿಆರ್ ಸಲ್ಲಿಕೆ ಸೇರಿದಂತೆ ಇತರ ಕಾರ್ಯಗಳು ಸುಲಭವಾಗಲಿದೆ ಎಂದು ಹೇಳಿದೆ.
ಕೆನರಾ ಬ್ಯಾಂಕ್ ಜೂನ್ 30 ರೊಳಗೆ ಐಎಫ್‌ಎಸ್‌ಸಿ ಕೋಡ್ ಅನ್ನು ಅಪ್ ಡೇಟ್ ಮಾಡುವಂತೆ, ಸಿಂಡಿಕೇಟ್ ಬ್ಯಾಂಕ್ ಗ್ರಾಹಕರನ್ನು ಕೋರಿದೆ. ಹಳೆಯ ಐಎಫ್‌ಎಸ್‌ಸಿ ಕೋಡ್ ಜುಲೈ 1 ರಿಂದ ಅಮಾನ್ಯವಾಗಲಿದೆ. ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್ ಜೊತೆ ವಿಲೀನಗೊಳಿಸಿದ ನಂತರ, SYNBಯಿಂದ ಪ್ರಾರಂಭವಾಗುವ ಎಲ್ಲಾ ಸಿಂಡಿಕೇಟ್ ಐಎಫ್‌ಎಸ್‌ಸಿ ಕೋಡ್ ಬದಲಾಗಲಿದೆ ಎಂದು ಕೆನರಾ ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಬ್ಯಾಂಕ್ ಆಫ್ ಬರೋಡಾ ಗ್ರಾಹಕರ, ಚೆಕ್ ಪಾವತಿ ನಿಯಮ ಜೂನ್ ಒಂದರಿಂದ ಬದಲಾಗಲಿದೆ. ಇನ್ನು ಗ್ರಾಹಕರಿಗೆ Positive Pay Confirmation ಅನಿವಾರ್ಯವಾಗಿರಲಿದೆ. ಚೆಕ್ ಪಾವತಿಯ ಹೊಸ ನೀತಿಯಿಂದಾಗಿ, ವಂಚನೆಯ ಜಾಲದಿಂದ ಗ್ರಾಹಕರು ಬಚಾವಾಗಲಿದ್ದಾರೆ. ಪಾಸಿಟಿವ್ ಪೆ ಸಿಸ್ಟಮ್, ವಂಚಕರನ್ನು ಹಿಡಿಯುವ ಒಂದು ಟೂಲ್ ಆಗಿರಲಿದೆ. BoB ಪ್ರಕಾರ, ಪಾಸಿಟಿವ್ ಪೇ ಸಿಸ್ಟಮ್ ಮೂಲಕ, ಚೆಕ್ ವಿವರಗಳನ್ನು ಕೂಡಾ ರಿಕನ್ ಫರ್ಮ್ ಮಾಡಬೇಕಾಗಿದೆ.
ತೈಲ ಕಂಪನಿಗಳು ಎಲ್‌ಪಿಜಿ ಬೆಲೆಗಳನ್ನು ತಿಂಗಳ ಕೊನೆಯ ದಿನಾಂಕದಂದು ಪರಿಶೀಲಿಸುತ್ತವೆ. ಹಾಗಾಗಿ, ಜೂನ್ 1 ರಂದು ದರಗಳು ಬದಲಾಗಬಹುದು.
ಚಿನ್ನದ ಹಾಲ್ ಮಾರ್ಕಿಂಗ್ ನಿಯಮಗಳು ಜೂನ್ 1 ರಿಂದ ಜಾರಿಗೆ ಬರಬೇಕಿತ್ತು. ಆದರೆ ಆಭರಣಕಾರರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅದನ್ನು ಜೂನ್ 15 ರವರೆಗೆ ಮುಂದೂಡಿದೆ. ಬ್ಯೂರೋ ಆಫ್ ಇಂಡಿಯನ್ ಮಹಾನಿರ್ದೇಶಕ ಪ್ರಮೋದ್ ತಿವಾರಿ ಅಧ್ಯಕ್ಷತೆಯಲ್ಲಿ ಸರ್ಕಾರ ಒಂದು ಸಮಿತಿಯನ್ನೂ ರಚಿಸಿದೆ. ಈ ಸಮಿತಿಯು ಹಾಲ್ ಮಾರ್ಕಿಂಗ್ ನಿಯಮಗಳನ್ನು ಅನುಷ್ಠಾನಗೊಳಿಸುವಾಗ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುತ್ತದೆ. ಮತ್ತು ಜೂನ್ 15 ರಿಂದ ಯಾವುದೇ ತೊಂದರೆಗಳಿಲ್ಲದೆ ನಿಯಮ ದೇಶಾದ್ಯಂತ ಜಾರಿಗೊಳಿಸುವುದಾಗಿ ಸಮಿತಿ ಹೇಳಿದೆ.
Google ನ ಸ್ಟೋರೇಜ್ ಪಾಲಿಸಿ ಕೂಡಾ ಜೂನ್ 1 ರಿಂದ ಬದಲಾಗಲಿದೆ. ಇದರ ನಂತರ ನೀವು Google ಫೋಟೋಗಳಲ್ಲಿ ಅನ್ ಲಿಮಿಟೆಡ್ ಫೋಟೋಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಗೂಗಲ್ ಪ್ರಕಾರ, ಪ್ರತಿ ಜಿಮೇಲ್ ಬಳಕೆದಾರರಿಗೆ 15 GB ಸ್ಪೇಸ್ ನೀಡಲಾಗುವುದು. ಇದರಲ್ಲಿ Gmailನ ಇ-ಮೇಲ್ ಗಳು ಕೂಡಾ ಸೇರಿವೆ. 15GB ಗಿಂತ ಹೆಚ್ಚಿನ ಸ್ಪೆಸ್ ಬಳಸುವುದಾದರೆ, ಅದಕ್ಕೆ ಪಾವತಿಸಬೇಕಾಗುತ್ತದೆ.