`ಇತ್ತೀಚೆಗೆ ಮದುವೆಯಾಗಿದ್ದೇನೆ..`- ಮತ್ತೆ ಪಾಕ್ ವ್ಯಕ್ತಿಯನ್ನೇ 2ನೇ ಮದುವೆಯಾದ್ರಾ ಸಾನಿಯಾ ಮಿರ್ಜಾ! ವಿದೇಶದಲ್ಲಿ ಕೈ ಹಿಡಿದು ನಡೆದ ಮೂಗುತಿ ಸುಂದರಿ ಫೋಟೋ
ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸಾನಿಯಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆ ಕೆಲ ಕಾಲ ಸುಖ ದಾಂಪತ್ಯ ಜೀವನ ನಡೆಸಿದ್ದರು. ಆದರೆ ಆ ನಂತರ ಕಲಹ ಉಂಟಾಗಿ ಇಬ್ಬರೂ ವಿಚ್ಛೇದನ ಪಡೆದಿದ್ದರು.
ಇದೀಗ ಶೋಯೆಬ್ ಪಾಕಿಸ್ತಾನಿ ನಟಿ ಸನಾ ಅವರನ್ನು ವಿವಾಹವಾಗಿದ್ದಾರೆ. ಅಂದಿನಿಂದ ಸಾನಿಯಾ ಕೂಡ ಮತ್ತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬೆನ್ನಲ್ಲೇ ಆಕೆಯ ವಿಡಿಯೋವೊಂದು ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ.
ಸದ್ಯ ಸಾನಿಯಾ ದುಬೈನಲ್ಲಿ ತನ್ನ ಮಗ ಇಜಾನ್ ಮಲಿಕ್ ಜೊತೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಂದ ಟರ್ಕಿ ಟ್ರಿಪ್ ಕೈಗೊಂಡಿರುವ ಸಾನಿಯಾ ಕೆಲ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋ ಮತ್ತು ವಿಡಿಯೋಗಳು ಸೆಳೆದಿದ್ದು, ಸಾನಿಯಾ ಕೈ ಹಿಡಿದು ವಾಕ್ ಮಾಡುತ್ತಿರುವುದು. ಮಕ್ಕಳು ಮತ್ತು ತಂಗಿ ಜೊತೆ ಮಾಲ್ ಸುತ್ತಾಡುತ್ತಿರುವ ಸಾನಿಯಾ ಫೋಟೋ ನೋಡಿ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ,
ಅಂದಹಾಗೆ, ಸಾನಿಯಾ ಮಿರ್ಜಾ ಇದುವರೆಗೂ ಎರಡನೇ ಮದುವೆಯಾಗಿಲ್ಲ. ಆದರೆ ಈ ಎಲ್ಲದರ ಮಧ್ಯೆ ಫೋಟೋವೊಂದು ಭಾರೀ ಸುದ್ದಿ ಮಾಡುತ್ತಿದೆ.
ಸಾನಿಯಾ ಮಾಜಿ ಪತಿ ಶೋಯೆಬ್ ಮಲಿಕ್ ಅವರನ್ನು ಮದುವೆಯಾಗಿರುವ ಸನಾ, ಪಾಕಿಸ್ತಾನಿ ಗಾಯಕ ಉಮೈರ್ ಜಸ್ವಾಲ್ ಅವರ ಮಾಜಿ ಪತ್ನಿ. ಆದರೆ ʼಇತ್ತೀಚೆಗಷ್ಟೇ ಮದುವೆಯಾಗಿದ್ದೇನೆʼ ಎಂದು ಉಮೈರ್ ಮದುವೆ ಚಿತ್ರಗಳನ್ನು ಹಂಚಿಕೊಂಡಿದ್ದರು.
ಆ ಫೋಟೋದಲ್ಲಿ ಅವರು ಮದುವೆಯ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು ಹೊರತು, ವಧುವಿನ ಮುಖ ತೋರಿಸಿರಲಿಲ್ಲ. ಇದರಿಂದಾಗಿ ಆ ವಧು ಸಾನಿಯಾ ಎಂದು ಅನೇಕರು ಕಮೆಂಟ್ ಮಾಡಿದ್ದರು. ಆದರೆ ಇದುವರೆಗೂ ಈ ವದಂತಿಗಳಿಗೆ ಉಮೈರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಎರಡನೇ ಮದುವೆಯಾದ ಹುಡುಗಿ ಯಾರೆಂದು ಕೂಡ ಉಮೈರ್ ಹೇಳಿಲ್ಲ. ಇನ್ನೊಂದೆಡೆ ಸಾನಿಯಾ ಉಮೇರ್ ಅವರನ್ನು ಮದುವೆಯಾದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಆಕೆಯೂ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ.