ಈಕೆ ಪ್ರಪಂಚದ ಅತಿ ಮಾದಕ ನಟಿ... ವಿರಾಟ್ ಜೊತೆ ಡೇಟ್‌ ಮಾಡಿದ್ಳು ಈ ಚೆಲುವೆ! ಆದ್ರೆ ಮದ್ವೆಯಾದ ಒಂದೇ ವರ್ಷಕ್ಕೆ ಡಿವೋರ್ಸ್‌ ಪಡೆದು ಸನ್ಯಾಸಿಯಾದ ಬ್ಯೂಟಿ!‌

Mon, 12 Aug 2024-6:17 pm,

ಒಂದೊಮ್ಮೆ ನಗ್ನ ಫೋಟೋಶೂಟ್‌ʼನಿಂದಲೇ ಸದ್ದು ಮಾಡಿದ್ದ ನಟಿ ಸೋಫಿಯಾ ಹಯಾತ್.‌ ಈಕೆ ಹೆಸರು ಯಾವಾಗಲೂ ವಿವಾದದಿಂದಲೇ ಕೂಡಿರುತ್ತದೆ. ಆದರೆ ಈಗ ತನ್ನ ಪತಿಯಿಂದ ವಿಚ್ಛೇದನ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾಳೆ ಈ ನಟಿ.

 

ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋಫಿಯಾ ಹಯಾತ್ ನಟಿ ವಿಶ್ವದಲ್ಲೇ ಅತಿ ಸೆಕ್ಸಿಯೆಸ್ಟ್‌ ಲೇಡಿ ಎಂಬ ಹಣೆಪಟ್ಟಿ ಪಡೆದವರು. 1984 ರ ಡಿಸೆಂಬರ್ 6 ರಂದು ಲಂಡನ್‌ʼನಲ್ಲಿ ಜನಿಸಿದ ಸೋಫಿಯಾ, ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ ಜೊತೆ ಡೇಟಿಂಗ್ ಮಾಡಿದ್ದೇನೆ ಎಂದು ಹೇಳಿ ಭಾರೀ ಸುದ್ದಿಯಾಗಿದ್ದಳು.

 

2012 ರಲ್ಲಿ, ಸೋಫಿಯಾ ಹಯಾತ್ ಟ್ವೀಟ್ ಮಾಡಿ, ರೋಹಿತ್ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡಿದ್ದಾಗಿ ಹೇಳಿಕೊಂಡಿದ್ದರು. ರೋಹಿತ್ ಶರ್ಮಾರನ್ನು ಲಂಡನ್‌ ಹೋಟೆಲ್‌ನಲ್ಲಿ ಭೇಟಿಯಾದೆ ಎಂದು ಸೋಫಿಯಾ ಹೇಳಿದ್ದರು. ಅಷ್ಟೇ ಅಲ್ಲದೆ, ಈ ಹೇಳಿಕೆ ಸಂಬಂಧಿಸಿದಂತೆ ಕೆಲ ಫೋಟೋಗಳು ವೈರಲ್‌ ಆಗಿದ್ದವು.

 

ಸೋಫಿಯಾ ಮಾತನಾಡಿ,  "ನಮ್ಮಿಬ್ಬ ನಡುವೆ ಬಹಳ ನಿಕಟ ಸಂಬಂಧವಿತ್ತು. ಇಬ್ಬರು ಒಟ್ಟಿಗೆ ಸಾಕಷ್ಟು ಸಮಯ ಕಳೆದಿದ್ದು, ಒಂದು ದಿನ ರೋಹಿತ್ ಅವರ ಸ್ನೇಹಿತರ ಮುಂದೆ ಅಭಿಮಾನಿಯಾಗಿ ಪರಿಚಯಿಸಿದ್ದರು. ಈ ಸಂದರ್ಭದಲ್ಲಿ ನನಗೆ ಆಘಾತವುಂಟಾಗಿ ನಾವಿಬ್ಬರೂ ದೂರವಾಗಲು ನಿರ್ಧರಿಸಿದೆವು" ಎಂದು ಹೇಳಿಕೆ ನೀಡಿದ್ದಾರೆ.

 

ಇದಾದ ನಂತರ ಮಾಧ್ಯಮಗಳಲ್ಲೂ ಕೆಲ ವರದಿಗಳು ಪ್ರಸಾರವಾಗತೊಡಗಿತ್ತು. ರೋಹಿತ್ ಶರ್ಮಾ ಮತ್ತು ಸೋಫಿಯಾ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದಾಗ ಈ ಸಂಬಂಧ ಸಂಪೂರ್ಣವಾಗಿ ಕೊನೆಗೊಂಡಿತು ಎಂದು ಹೇಳಿಕೊಂಡಿದ್ದಾರೆ.

 

ಇನ್ನು ಸೋಫಿಯಾ ಮಾತ್ರ ಈ ಬಗ್ಗೆ ಹೇಳಿಕೆ ನೀಡಿದ್ದು, ರೋಹಿತ್‌ ಈ ವಿಚಾರದಲ್ಲಿ ಇದುವರೆಗೆ ಮೌನ ವಹಿಸಿದ್ದಾರೆ. ಇನ್ನು ಅಧಿಕೃತ ಮಾಹಿತಿಯೂ ಇಲ್ಲ. ಇವರಲ್ಲದೆ, ವಿರಾಟ್‌ ಕೊಹ್ಲಿ ಜೊತೆಯೂ ಸೋಫಿಯಾ ಸುತ್ತಾಡಿದ್ದರು ಎನ್ನಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

 

ಅಂದಹಾಗೆ ಸೋಫಿಯಾ ಹಯಾತ್ ಬ್ರಿಟಿಷ್ ಗಾಯಕಿ, ನಟಿ.  2013 ರಲ್ಲಿ ಬಿಗ್ ಬಾಸ್ ಸೀಸನ್‌ 7 ರಲ್ಲಿ ಭಾಗವಹಿಸಿದರು. ಇನ್ನು ಏಪ್ರಿಲ್ 2017 ರಲ್ಲಿ ರೊಮೇನಿಯನ್ ವ್ಲಾಡ್ ಸ್ಟಾನೆಸ್ಕು ಎಂಬವರನ್ನು ವಿವಾಹವಾದ ಸೋಫಿಯಾ ಮೇಲೆ ಕೊಲೆ ಯತ್ನ ಆರೋಪವೂ ಕೇಳಿಬಂದಿತ್ತು. ಇದಾದ ಬಳಿಕ ವ್ಲಾಡ್‌ʼನಿಂದ ದೂರಾಗಿದ್ದರು.

 

ಅದಾದ ಬಳಿಕ ಸೋಫಿಯಾ ಸನ್ಯಾಸತ್ವ ಸ್ವೀಕರಿಸುವುದಾಗಿ ಘೋಷಿಸಿದ್ದರು.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link