ನಾಗಚೈತನ್ಯ ಅವರ ಈ ಅಭ್ಯಾಸದಿಂದ ಕಂಗೆಟ್ಟು ನಟಿ ಸಮಂತಾ ಪತಿಯಿಂದ ವಿಚ್ಛೇದನ ಪಡೆದ್ರಾ..? ದೂರವಾದ ವರ್ಷಗಳ ಬಳಿಕೆ ರಿವೀಲ್ ಆಯ್ತು ಶಾಕಿಂಗ್ ರೀಸನ್..?!
Samantha: ಸಮಂತಾ ಹಾಗೂ ನಾಗಚೈತನ್ಯ ಜೋಡಿ ಇಂಡಸ್ಟ್ರಿಯ ಕ್ಯೂಟ್ ಜೋಡಿಗಳಲ್ಲಿ ಒಬ್ಬರು ಎನಿಸಿಕೊಂಡವರು, ನಗು ನಗುತ್ತಾ ಸಂತೋಷದಲ್ಲಿ ಹಾರಾಡುತ್ತಿದ್ದ ಈ ಜೋಡಿಯ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ, ಇವರಿಬ್ಬರು ವಿಚ್ಚೇದನ ಪಡೆದುಕೊಂಡು ದೂರವಾಗಿದ್ದರು.
ಸಮಂತಾ ಹಗೂ ನಾಗಚೈತನ್ಯ ಅವರು ದೂರವಾಗಿ ಇಷ್ಟು ವರ್ಷ ಕಳೆದರೂ ಈ ಜೋಡಿ ದೂರವಾಗುವುದರ ಹಿಂದಿನ ನಿಜವಾದ ಕಾರಣ ಏನು ಎಂಬುದು ಯಾರಿಗೂ ತಿಳಿದಿಲ್ಲ.
ಆದರೆ, ಇದೀಗ ಈ ಜೋಡಿ ದೂರವಾಗುದಕ್ಕೆ ಕಾರಣ ನಾಗಚೈತನ್ಯ ಅವರ ಈ ಅಭ್ಯಾಸ ಎನ್ನುವ ಸುದ್ದಿಯೊಂದು ವೈರಲ್ ಆಗುತ್ತಿದೆ, ಅಷ್ಟಕ್ಕೂ ಏನದು ಕಾರಣ..? ಮುಂದೆ ಓದಿ...
ಸ್ಟಾರ್ ನಟ ನಾಗಾರ್ಜುನ ಅವರ ಪುತ್ರ ಆಗಿರುವ ನಾಗಚೈತನ್ಯ ಮಾಡಿದ ಒಂದು ಸಿನಿಮಾ ಕೂಡ ಹಿಟ್ ಆಗಿಲ್ಲ, ಇನ್ನೂ ಪರ್ಸೆನಲ್ ಲೈಫ್ ಬಗ್ಗೆ ಅಂತೂ ಕೇಳಲೇಬೇಡಿ. ಇದರಲ್ಲೂ ಕೂ ನಾಗಚೈತನ್ಯ ಜೀವನ ನೆಟ್ಗೆ ಇಲ್ಲ.
ಹೌದು, ಒಂದು ಕಡೆ ಸಿನಿಮಾದಲ್ಲಿ ಸೋಲು ಮತ್ತೊಂದು ಕಡೆ ಜೀವನದಲ್ಲಿ ಸೋಲು, ಹೀಗೆ ಮುಂದೆ ಅಕ್ಕಿನೇನಿ ಕುಟುಂಬವನ್ನು ನಡೆಸಿಕೊಂಡ ಹೋಗುವ ಜವಬ್ದಾರಿ ಹೊತ್ತಿರುವ ನಾಗಚೈತನ್ಯ ತಮ್ಮ ಜೀವನದ ಪ್ರತಿಯೊಂದು ವಿಷಯದಲ್ಲಿಯೂ ಎಡವುತ್ತಲೇ ಇದ್ದಾರೆ.
ನಾಯಕಿ ಸಮಂತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ನಾಗಚೈತನ್ಯ, ಸಮಂತಾ ಅವರಿಗೆ ವಿಚ್ಚೇದನ ನೀಡಿ ಇದೀಗ ಶೋಭಿತಾ ಧೂಳಿಪಾಲ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ʼ
ಹೀಗೆ ಪ್ರೀತಿಸಿ ಮದುವೆಯಾಗಿದ್ದ ನಟಿ ಸಮಂತಾಗೆ ನಾಗಚೈತನ್ಯ ಅವರ ಅದೊಂದು ಅಭ್ಯಾಸ ಇಷ್ಟವಾಗದೆ ಅವರಿಂದ ದೂರ ಹೋಗಿದ್ದಾರೆ ಎನ್ನುವ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೌದು, ನಾಗಚೈತನ್ಯ ಸೈಲೆಂಟ್ ಸ್ವಭಾವದ ವ್ಯಕ್ತಿ. ಯಾವುದೇ ನೋವನ್ನು ಯಾರ ಬಳಿಯೂ ಹಂಚಿಕೊಳ್ಳದೆ ಮನಸ್ಸಿನಲ್ಲಿಯೇ ಇಟ್ಟುಕೊಂಡು, ಕುಡಿದಾಗ ಮಾತ್ರ ಒಬ್ಬರೇ ಕೂತು ಕಿರುಚುತ್ತಾ ತಮ್ಮ ನೋವನ್ನು ಹೊರಹಾಕುತ್ತಿದ್ದರಂತೆ. ಈ ರೀತಿ ಮಾಡುತಿದ್ದದ್ದು, ಸಮಂತಾ ಅವರಿಗೆ ಚೂರು ಇಷ್ಟವಾಗುತ್ತಿರಲಿಲ್ಲವಂತೆ.
ಮನಸ್ಸಿನಲ್ಲಿರುವುದನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕು. ಈ ಅಭ್ಯಾಸವನ್ನು ಮೊದಲು ತ್ಯಜಿಸಿ ಎಂದು ನಾಗಚೈತನ್ಯ ಅವರ ಬಳಿ ನಟಿ ಬಹಳಷ್ಟು ಭಾರಿ ಹೇಲಿಕೊಂಡಿದ್ದರಂತೆ, ಇದೀಗ ಇದೇ ಕಾರಣದಿಂದ ಬೇಸತ್ತು, ನಟಿ ನಾಗಚೈತನ್ಯ ಅವರಿಂದ ದೂರವಾಗಿದ್ದಾರೆ ಎನ್ನುವ ಸುದ್ದಿ ಇದೀಗ ವೈರಲ್ ಆಗುತ್ತಿದೆ.
ಯಾವುದು ಹೇಗೆ ಇರಲಿ, ನಟಿ ಸಮಂತಾ ನಾಗಚೈತನ್ಯರಿಂದ ದೂರ ಹೋಗಿದ್ದಾರೆ. ನಾಗಚೈತನ್ಯ ಶೋಭಿತಾ ಧೂಳಿಪಾಲಾ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತ ನಟಿ ಸ್ಯಾಮ್ಮಾತ್ರ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಾ, ಒಂಟಿಯಾಗಿ ಕಾಲ ಕಳೆಯುತ್ತಿದ್ದಾರೆ.