ಶೋಭಿತ- ನಾಗಚೈತನ್ಯ ಮದುವೆಗೆ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಎಫೆಕ್ಟ್! ಮದುವೆ ಮುಂದೂಡಿದ ನಾಗಾರ್ಜುನ?!
Naga Chaitanya Sobhita Dhulipala: ಟಾಲಿವುಡ್ ನಟ ನಾಗಚೈತನ್ಯ ಹಾಗೂ ನಟಿ ಸೋಭಿತಾ ಧೂಳಿಪಾಲ ಮದುವೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ, ಸಮಂತಾ ಜೊತೆಗಿನ ವಿಚ್ಚೇದನದ ನಂತರ ನಾಗಚೈತನ್ಯ ಸೋಭಿತಾ ಅವರ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಇತ್ತೀಚೆಗೆ ನಾಗಚೈತನ್ಯ ಹೆಸರು ತುಂಬಾ ಚರ್ಚೆಯಾಗುತ್ತಿದೆ, ಅದಕ್ಕೆ ಕಾರಣ ನಟ ನಾಗಚೈತನ್ಯ ಸಮಂತಾ ಅವರೊಂದಿಗಿನ ವಿಚ್ಚೇದನದ ನಂತರ ನಟಿ ಸೋಭಿತಾ ಧೂಳಿಪಾಲ ಅವರನ್ನು ಮದುವೆಯಾಗುತ್ತಿರುವುದು.
ಈ ಜೋಡಿಯು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಹೊರಬಂದಿದ್ದರು ಕೂಡ ಈ ಜೋಡಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ, ಆದರೆ ದಿಢೀರನೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ಕೊಟಿದ್ದರು.
ಮದುವೆ ಯಾವಾಗ ಎಂಬುದರ ಕುರಿತು ಮಾಹಿತಿ ಬಿಚ್ಚಿಡುವ ಮುಂಚೆಯೇ ಸೋಭಿತಾ ಧೂಳಿಪಾಲ ಅವರು ತಮ್ಮ ಅರಿಶಿನ ಶಾಸ್ತ್ರದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಡಿಸೆಂಬರ್ 4 ರಂದು ಅನ್ನಪೂರ್ಣ ಸ್ಟುಡಿಯೋದ 22 ಎಕರೆ ಪ್ಲಾಟ್‌ನಲ್ಲಿ ಅದ್ದೂರಿಯಾಗಿ ಮದುವೆ ಮಾಡಲು ನಾಗಾರ್ಜುನ ನಿರ್ಧರಿಸಿದ್ದಾರೆ ಮತ್ತು ಅದರಂತೆ ಕೆಲಸ ನಡೆಯುತ್ತಿದೆ ಎಂಬ ವರದಿಗಳು ಕೂಡ ಕೇಳಿ ಬಂದಿದ್ದವು.
ಆದರೆ, ಇತ್ತೀಚೆಗೆ ಹೊರಬರುತ್ತಿರುವ ಮಾಹಿತಿ ಏನೆಂದರೆ, ಈ ಜೋಡಿಯ ಮದುವೆಯನ್ನು ಮುಂದೂಡಲಾಗಿದೆಯಂತೆ. ಇದಕ್ಕೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲವಾದರೂ, ಕೌಟುಂಬಿಕ ಸಮಸ್ಯೆಯಿಂದ ಮದುವೆ ದಿನಾಂಕವನ್ನು ಮುಂದೂಡಲಾಗಿದೆ ಎನ್ನಲಾಗಿದೆ.
ನಾಗಾರ್ಜುನ ಇತ್ತೀಚೆಗೆ ಜ್ಯೋತಿಷಿಯೊಬ್ಬರ ಸಲಹೆ ಪಡೆದಿದ್ದಾರೆ ಎಂಬ ವರದಿಗಳು ಇದೀಗ ಕೇಳಿ ಬರುತ್ತಿದೆ.
ಏಕೆಂದರೆ ನಾಗ ಚೈತನ್ಯ ಮತ್ತು ಸೋಭಿತಾ ನಿಶ್ಚಿತಾರ್ಥ ಮಾಡಿಕೊಂಡ ದಿನವೇ 2027ರಲ್ಲಿ ಇಬ್ಬರೂ ಬೇರೆಯಾಗುತ್ತಾರೆ ಎಂದು ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ನಾಗಾರ್ಜುನ ಸಮಾಲೋಚನೆ ನಡೆಸಿದ ಜ್ಯೋತಿಷಿ ನಾಗಾರ್ಜುನಗೆ ಬಹುತೇಕ ಇದೇ ಮಾತನ್ನು ಹೇಳಿದ್ದಾರೆ ಎಂಬ ಸುದ್ದಿ ಬಂದಾಗ ಅಕ್ಕಿನೇನಿ ಅಭಿಮಾನಿಗಳು ಟೆನ್ಷನ್ ಆಗಿದ್ದು, ಇದರಿಂದಾಗಿ ಇಬ್ಬರನ್ನು ಮದುವೆಯಾಗುವ ವಿಚಾರದಲ್ಲಿ ಕಿಂಗ್ ಮರು ಚಿಂತನೆ ನಡೆಸಿದ್ದಾರೆ.
ಇದರಿಂದಾಗಿ ಈ ಜೋಡಿಯ ಬಗ್ಗೆ ವೇಣು ಸ್ವಾಮಿ ಮಾಡಿರುವ ಕಾಮೆಂಟ್‌ಗಳು ನಿಜವೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಆದರೆ ಮುಂದಿನ ತಿಂಗಳು ನಾಲ್ಕನೇ ತಾರೀಖು ನಡೆಯಬೇಕಿದ್ದ ಮದುವೆ ಮುಂದೂಡಿಕೆಯಾಗುತ್ತಿದ್ದಂತೆ ಇದೀಗ ಅವರ ಅಭಿಮಾನಿಗಳಲ್ಲಿ ಮದುವೆ ಎಲ್ಲಿ ಮುರಿದು ಬೀಳುತ್ತೋ ಎನ್ನುವ ಚಿಂತೆ ಎದುರಾಗಿದೆ.
ಇನ್ನೂ, ಈ ಮದುವೆಯನ್ನು ನಿಜವಾಗಿಯೂ ಮುಂದೂಡಲಾಗಿದೆಯಾ? ಇದಕ್ಕೆ ಕಾರಣ ಏನು? ಎಂಬುದರ ಕುರಿತು ನಾಗಾರ್ಜುನ ಅವರ ಕುಟುಂಬ ಏನು ಪ್ರತಿಕ್ರಿಯೆಯನ್ನು ನೀಡಲಿದೆ ಎಂಬುದನ್ನು ಇನ್ನು ಮುಂದಷ್ಟೆ ಕಾದು ನೋಡಬೇಕಿದೆ.