ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಡೇಟ್‌ ಫಿಕ್ಸ್:‌ ಈ ದಿನದಂದು ಕೊನೆಗೊಳ್ಳಲಿದೆ ದೊಡ್ಮನೆ ಆಟ... ಈ ಸ್ಪರ್ಧಿ ನೇರ ಫೈನಲ್‌ ಪ್ರವೇಶ

Tue, 03 Dec 2024-7:26 pm,

ಬಿಗ್ ಬಾಸ್ ಸೀಸನ್ 8... ಎಲ್ಲಾ ಇನ್ಫಿನಿಟಿ ಎಂದು ಹೇಳುವ ಮೂಲಕ ನಿರೂಪಕ ನಾಗಾರ್ಜುನ ಮೊದಲಿನಿಂದಲೂ ಹೈಪ್ ಹೆಚ್ಚಿಸಿದ್ದವರು. ಇನ್ನು ಈ ಬಾರಿ ವಿಶೇಷ ಏನಪ್ಪ ಅಂದ್ರೆ ಪ್ರತಿ ಬಾರಿ ಟಾಸ್ಕ್‌ಗಳನ್ನು ಗೆದ್ದಾಗ ಬಹುಮಾನದ ಹಣವನ್ನು ಸೇರಿಸಲಾಗಿತ್ತು. ಸದ್ಯ ಈ ಸೀಸನ್ ನ ಬಹುಮಾನ ಮೊತ್ತ ರೂ.54 ಲಕ್ಷ 30 ಸಾವಿರ ತಲುಪಿದೆ.

ಆದರೆ ಈ ಮೂರು ವಾರಗಳಲ್ಲಿ ಬಹುಮಾನದ ಮೊತ್ತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸ್ತುತ ದೊಡ್ಮನೆಯಲ್ಲಿ ಏಳು ಸದಸ್ಯರಿದ್ದಾರೆ. ಇದರೊಂದಿಗೆ ಸೀಸನ್ 8ರ ಗ್ರ್ಯಾಂಡ್ ಫಿನಾಲೆ ಯಾವಾಗ ನಡೆಯಲಿದೆ ಎಂಬ ಅನುಮಾನ ಇದೀಗ ಮೂಡಿದೆ

ಸದ್ಯದ ವದಂತಿಗಳ ಪ್ರಕಾರ, ಬಿಗ್ ಬಾಸ್ ಸೀಸನ್ 8 ರ ಗ್ರ್ಯಾಂಡ್ ಫಿನಾಲೆ ಸಂಚಿಕೆ ಡಿಸೆಂಬರ್ 15 ರಂದು ಪ್ರಸಾರವಾಗಲಿದೆ. ಇನ್ನು ಹದಿನಾಲ್ಕು ದಿನಗಳಲ್ಲಿ ಈ ಸೀಸನ್ ಮುಗಿಯಲಿದೆಯಂತೆ. ಈ ಬಾರಿ ಗ್ರ್ಯಾಂಡ್ ಫಿನಾಲೆಯನ್ನು ಅದ್ಧೂರಿಯಾಗಿ ಆಯೋಜಿಸಲು ತಯಾರಕರು ಯೋಜಿಸುತ್ತಿದ್ದಾರೆ.

 

ಸ್ಟಾರ್ ಹೀರೋಯಿನ್ ಗಳ ಜೊತೆ ಆಟವಾಡುವುದಲ್ಲದೆ, ವಿಜೇತರಿಗೆ ಟ್ರೋಫಿ ನೀಡಲು ಹೊಸ ಅತಿಥಿಯನ್ನು ಕರೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಕಳೆದ ಸೀಸನ್ ನಲ್ಲಿ ಯಾರು ಅತಿಥಿಯಾಗಿ ಬಂದಿರಲಿಲ್ಲ. ನಾಗಾರ್ಜುನ ಮಾತ್ರ ವಿಜೇತರಿಗೆ ಟ್ರೋಫಿಯನ್ನು ನೀಡಿದ್ದರು. ಆದರೆ ಈ ಬಾರಿ ಸೀಸನ್ 8ಕ್ಕೆ ಸ್ಟಾರ್ ಹೀರೋನನ್ನು ಅತಿಥಿಯಾಗಿ ಕರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ

 

ಈ ವಾರ ಡಬಲ್ ಎಲಿಮಿನೇಷನ್ ನಡೆದಿರುವುದು ಗೊತ್ತೇ ಇದೆ. ಆದರೆ, ಮನೆಯಲ್ಲಿ ಇನ್ನೂ ಏಳು ಮಂದಿ ಮನೆಯವರು ಇದ್ದಾರೆ. ಮುಂದಿನ ವಾರವೂ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ವರದಿಯಾಗಿದೆ. ಆದರೆ ಈ ಬಾರಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

ಕಳೆದ ವಾರದಂತೆ ವಾರಾಂತ್ಯದ ಎಲಿಮಿನೇಷನ್‌ಗಿಂತ ಭಿನ್ನವಾಗಿ ಈ ವಾರ ಮಿಡ್‌ ವೀಕ್‌ ಎಲಿಮಿನೇಷನ್ ನಡೆಯಲೂಬಹುದು. ಭಾನುವಾರ ಮತ್ತೊಬ್ಬನನ್ನು ಹೊರಗೆ ಕಳುಹಿಸುವ ಸಾಧ್ಯತೆಯಿದೆ. ಅವಿನಾಶ್ ಈಗಾಗಲೇ ಟಾಪ್ 5ರಲ್ಲಿ ಫಿಕ್ಸ್ ಆಗಿದ್ದಾರೆ. ಉಳಿದ ಸ್ಥಾನಗಳಲ್ಲಿ ಗೌತಮ್, ನಬೀಲ್ ಮತ್ತು ನಿಖಿಲ್ ಇರಲಿದ್ದಾರೆ. ಇನ್ನು ಮೂವರು ಹುಡುಗಿಯರು ವಿಷ್ಣು, ಪ್ರೇರಣಾ, ರೋಹಿಣಿ.. ಈ ಮೂವರಲ್ಲಿ ಯಾರು ಟಾಪ್ 5 ರೊಳಗೆ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link