Virat Kohli: ಅಕಾಯ್ ಹುಟ್ಟುತ್ತಿದ್ದಂತೆ ಭಾರತ ತೊರೆದು ಈ ದೇಶದಲ್ಲಿ ನೆಲೆಸಲು ವಿರಾಟ್ ನಿರ್ಧಾರ! ಕೊನೆಯಾಗುತ್ತಾ ಟೀಂ ಇಂಡಿಯಾದ ನಂಟು?
ಫೆಬ್ರವರಿ 15 ರಂದು ಲಂಡನ್ ಆಸ್ಪತ್ರೆಯಲ್ಲಿ ಅನುಷ್ಕಾ ಅಕಾಯ್’ಗೆ ಜನ್ಮ ನೀಡಿದ್ದು, ಈ ಶುಭಸುದ್ದಿಯನ್ನು ವಿರಾಟ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.
ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದ ಅವರು, ಈ ವಿಶೇಷ ಸಮಯದಲ್ಲಿ ಆಶೀರ್ವಾದ ಮತ್ತು ಗೌಪ್ಯತೆಯನ್ನು ಕಾಪಾಡುವಂತೆ ಮನವಿ ಮಾಡಿಕೊಂಡಿದ್ದರು.
“ಸಮೃದ್ಧವಾದ ಸಂತೋಷ ಮತ್ತು ಅಂತರಾಳದ ಪ್ರೀತಿಯಿಂದ, ಫೆಬ್ರವರಿ 15 ರಂದು ನಾವು ನಮ್ಮ ಗಂಡು ಮಗು ಅಕಾಯ್ ಮತ್ತು ವಾಮಿಕಾಳ ಚಿಕ್ಕ ಸಹೋದರನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ. ಈ ಖುಷಿ ಸುದ್ದಿಯನ್ನು ಎಲ್ಲರಿಗೂ ತಿಳಿಸಲು ಸಂತೋಷಪಡುತ್ತೇವೆ! ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಇರಲಿ. ಜೊತೆಗೆ ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸಲು ನಾವು ಮನವಿ ಮಾಡುತ್ತೇವೆ… ಪ್ರೀತಿ ಮತ್ತು ಕೃತಜ್ಞತೆ- ವಿರಾಟ್ ಮತ್ತು ಅನುಷ್ಕಾ” ಎಂದು ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿದ್ದರು.
ಇನ್ನು ವೃತ್ತಿಪರ ಬದ್ಧತೆಗಳಿಗಾಗಿ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಿದ್ದಾರೆ. ಆದರೆ ಅನುಷ್ಕಾ ಶರ್ಮಾ ತಮ್ಮ ಮಕ್ಕಳೊಂದಿಗೆ ಲಂಡನ್’ನಲ್ಲಿಯೇ ಉಳಿದಿದ್ದಾರೆ. ಈ ಸಂದರ್ಭದಲ್ಲಿ ವಿರುಷ್ಕಾ ಜೋಡಿ ಭಾರತ ತೊರೆಯಲಿದ್ದಾರೆ ಎಂಬ ವದಂತಿ ಭಾರೀ ಹಬ್ಬುತ್ತಿದೆ.
ಆನ್‌ಲೈನ್’ನಲ್ಲಿ ಹರಿದಾಡುತ್ತಿರುವ ರೆಡ್ಡಿಟ್ ಪೋಸ್ಟ್, ಅನುಷ್ಕಾ ಯುಕೆಯಲ್ಲಿ ವಾಸವಾಗಿರುವುದನ್ನು ಹೈಲೈಟ್ ಮಾಡಿದ್ದು, ಈ ಕುಟುಂಬ ಅಲ್ಲಿಯೇ ನೆಲೆಸಲು ನಿರ್ಧರಿಸಿದೆಯೇ ಎಂಬ ಪ್ರಶ್ನೆಗಳನ್ನು ಎತ್ತಿದೆ.
ಈ ಪೋಸ್ಟ್’ಗೆ ತರಹೇವಾರಿ ಕಮೆಂಟ್’ಗಳು ಬಂದಿದ್ದು, ಒಬ್ಬ ಹೀಗೆ ಬರೆದಿದ್ದಾರೆ, “ಹೌದು , ಏಕೆಂದರೆ ನಿಮ್ಮ ಬಳಿ ಹಣವಿದ್ದರೆ ಯುಕೆಯಲ್ಲಿ ಜೀವನವು ತುಂಬಾ ಶಾಂತಿಯುತವಾಗಿರುತ್ತದೆ. ಪೌರತ್ವವು ಸುಲಭವಾಗಿ ಲಭ್ಯವಿದ್ದರೆ ನೀವು ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡಬೇಕು. ವಾಮಿಕಾ ಮತ್ತು ಅಕಾಯ್ ಗೌಪ್ಯತೆಯನ್ನು ಅವರು ಬಯಸುತ್ತಾರೆ. ಅನುಷ್ಕಾ ತನ್ನ ಆರಂಭಿಕ ಸಂದರ್ಶನಗಳಲ್ಲಿ ಆಕೆ ಗೃಹಿಣಿಯಾಗಿರಲು ಬಯಸಿದ್ದಳು ಎಂದು ಹೇಳಿಕೆ ನೀಡಿದ್ದರು” ಎಂದು ಬರೆದುಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್’ನ ಮುಂಬರುವ ಸೀಸನ್’ಗಾಗಿ ವಿರಾಟ್ ಸಜ್ಜಾಗುತ್ತಿದ್ದಂತೆ, ಇಂಥಾ ವದಂತಿಗಳು ಹರಿದಾಡುತ್ತಿದ್ದು ಇದರ ಸತ್ಯಾಂಶ ಇನ್ನೂ ತಿಳಿದುಬಂದಿಲ್ಲ.
ಒಂದು ವೇಳೆ ಭಾರತ ಬಿಟ್ಟು ಲಂಡನ್’ನಲ್ಲಿ ನೆಲೆಸಿದರೆ ವಿರಾಟ್ ಟೀಂ ಇಂಡಿಯಾ ಪರ ಆಡುತ್ತಾರಾ? ಅಥವಾ ನಿವೃತ್ತಿ ಘೋಷಣೆ ಮಾಡುತ್ತಾರಾ? ಎಂಬುದೇ ಸದ್ಯದ ಪ್ರಶ್ನೆಯಾಗಿದೆ.