ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಜಡೇಜಾ ಜೊತೆ ಮಾಧುರಿ ದೀಕ್ಷಿತ್ ಡೇಟಿಂಗ್! ಆದ್ರೆ ಬ್ರೇಕಪ್’ಗೆ ಕಾರಣವಾಗಿದ್ದು ಅದೊಂದು ಅಪವಾದ!
ಬಾಲಿವುಡ್ ಮತ್ತು ಕ್ರಿಕೆಟ್ ನಡುವಿನ ಸಂಬಂಧ ಇಂದು, ನಿನ್ನೆಯದಲ್ಲ... ಎರಡೂ ಜಗತ್ತಿನ ಸೂಪರ್‌ಸ್ಟಾರ್’ಗಳು ಪ್ರೀತಿಯಲ್ಲಿ ಬೀಳೋದು, ವಿವಾಹವಾಗೋದು, ಡಿವೋರ್ಸ್-ಬ್ರೇಕಪ್… ಇವೆಲ್ಲಾ ಸಾಮಾನ್ಯವಾಗಿದೆ.
ಶರ್ಮಿಳಾ ಟ್ಯಾಗೋರ್ ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ವಿವಾಹವಾದರೆ, ಅಜರುದ್ದೀನ್ ಸಂಗೀತಾ ಬಿಜಲಾನಿ ಅವರನ್ನು ವಿವಾಹವಾದರು… ಅಂತೆಯೇ ವಿರಾಟ್ ಕೊಹ್ಲಿ ಅನುಷ್ಕಾ ಜೊತೆ ಸಪ್ತಪದಿ ತುಳಿದರು. ಇವೆಲ್ಲವು ಪರಿಪೂರ್ಣ ಪ್ರೇಮಕಥೆಗಳಾದರೆ, ಕೆಲ ಅಪೂರ್ಣ ಲವ್ ಸ್ಟೋರಿಯೂ ಇದೆ. ಅದರಲ್ಲಿ ಒಂದು ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಮತ್ತು 90 ರ ದಶಕದ ಅತ್ಯಂತ ಸುಂದರ ಭಾರತೀಯ ಕ್ರಿಕೆಟಿಗ ಅಜಯ್ ಜಡೇಜಾ.
90ರ ದಶಕದಲ್ಲಿ, ಮಾಧುರಿ ದೀಕ್ಷಿತ್ ಮತ್ತು ಅಜಯ್ ಜಡೇಜಾ ಲವ್ ಸ್ಟೋರಿ ಭಾರೀ ಸುದ್ದಿಯಲ್ಲಿತ್ತು. ಒಂದೆಡೆ ಕೋಟ್ಯಂತರ ಪಡ್ಡೆ ಹುಡುಗರ ಮನಗೆದ್ದಿದ್ದ ನಟಿ ಮಾಧುರಿ ದೀಕ್ಷಿತ್, ಮತ್ತೊಂದೆಡೆ ಟೀಮ್ ಇಂಡಿಯಾದ ಉಪನಾಯಕನಾಗಿ ಲಕ್ಷಾಂತರ ಹುಡುಗಿಯರು ನಿದ್ದೆಗೆಡಿಸಿದ್ದ ಅಜಯ್ ಜಡೇಜಾ.
ಒಂದೊಮ್ಮೆ ಇವರಿಬ್ಬರ ಫೋಟೋಸ್ ಮ್ಯಾಗಜೀನ್ ಒಂದರಲ್ಲಿ ಪ್ರಕಟಗೊಂಡಾಗ ಚರ್ಚೆಗಳು ತೀವ್ರಗೊಂಡವು. ಅಜಯ್ ಜಡೇಜಾ ಮತ್ತು ಮಾಧುರಿ ದೀಕ್ಷಿತ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಅಜಯ್ ಜಡೇಜಾ ರಾಜಮನೆತನಕ್ಕೆ ಸೇರಿದವರು. ಮಾಧುರಿ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬಕ್ಕೆ ಸೇರಿದರು. ಇವರಿಬ್ಬರ ಪ್ರೀತಿಗೆ ಅಡ್ಡ ಬಂದಿದ್ದು ಇವರ ಕುಟುಂಬವೆಂದು ಹೇಳಲಾಗುತ್ತದೆ. ವರದಿಗಳ ಪ್ರಕಾರ, ಜಡೇಜಾ ಕುಟುಂಬವೇ ಈ ಸಂಬಂಧವನ್ನು ವಿರೋಧಿಸಿತ್ತು.
ಇನ್ನೂ ಕೆಲವು ವರದಿಗಳ ಪ್ರಕಾರ, ಮ್ಯಾಚ್ ಫಿಕ್ಸಿಂಗ್ ಎಂಬ ಅಪವಾದ ಇವರಿಬ್ಬರ ಬ್ರೇಕಪ್’ಗೆ ಕಾರಣವಾಗಿತ್ತು ಎನ್ನಲಾಗಿದೆ.
1999ರಲ್ಲಿ, ಅಜಯ್ ಜಡೇಜಾ ಮತ್ತು ಮಾಧುರಿ ದೀಕ್ಷಿತ್ ಬ್ರೇಕಪ್ ಮಾಡಿಕೊಂಡರು. ಅದೇ ಸಮಯಕ್ಕೆ ಜಡೇಜಾ ಮ್ಯಾಚ್ ಫಿಕ್ಸಿಂಗ್’ನಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿತ್ತು. ಅವರು ಮೊಹಮ್ಮದ್ ಅಜರುದ್ದೀನ್’ನೊಂದಿಗೆ ಫಿಕ್ಸಿಂಗ್’ನಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿತ್ತು. ಈ ಕಾರಣದಿಂದಲೇ ಮಾಧುರಿ ಕುಟುಂಬ ಈ ಸಂಬಂಧವನ್ನು ನಿರಾಕರಿಸಿತು ಎನ್ನಲಾಗಿದೆ.
ಈ ಪಕ್ರರಣ ಸಂಭವಿಸುತ್ತಿರಲಿಲ್ಲ ಎಂದಾದರೆ ಮಾಧುರಿ ದೀಕ್ಷಿತ್ ಈಗ ರಾಜಮನೆತನದ ಸೊಸೆಯಾಗಿರುತ್ತಿದ್ದರು. ಆದರೆ ಅಜಯ್ ಹೆಸರು ಮ್ಯಾಚ್ ಫಿಕ್ಸಿಂಗ್’ನಲ್ಲಿ ಕೇಳಿಬಂದಾಗ, ತಮ್ಮ ಮಗಳಿಗೆ ಈ ಹುಡುಗ ಸೂಕ್ತವಲ್ಲ ಎಂದೆನಿಸಿ, ಪೋಷಕರೇ ನಿರಾಕರಿಸಿದರು ಎನ್ನಲಾಗುತ್ತದೆ.