ರಾಜ್ಯದ ಜನತೆಗೆ ಶಾಕ್!! ಗೃಹಲಕ್ಷ್ಮಿ ಯೋಜನೆಗೆ ಬೀಳುತ್ತಾ ಬ್ರೇಕ್..?!
Gruha lakshmi scheme: ಚುನಾವಣೆ ಸಮಯದಲ್ಲಿ ರಾಜ್ಯಸರ್ಕಾರ ಐದು ಮಹತ್ವವಾದ ಗ್ಯಾರಂಟಿಗಳನ್ನು ರಾಜ್ಯದ ಜನರಿಗಾಗಿ ಘೋಷಣೆ ಮಾಡಿತ್ತು. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು.
ಗೃಹಲಕ್ಷ್ಮಿ ಹಣದಿಂದ ಹಲವರಿಗೆ ಸಹಾಯ ಆಗುತ್ತಿದೆಯಾದರೂ, ಹಣ ಸರಿಯಾದ ಸಮಯಕ್ಕೆ ಖಾತೆ ಸೇರುತ್ತಿಲ್ಲ. ಈ ಕಾರಣದಿಂದ ರಾಜ್ಯದ ಜನ ಬೇಸರಗೊಂಡಿದ್ದು, ಹಣ ತಮ್ಮ ಖಾತೆಗೆ ಸೇರುವುದು ಯಾವಾಗ ಎಂದು ಎದುರು ನೋಡುತ್ತಿದ್ದಾರೆ.
ಈ ಗ್ಯಾರಂಟಿ ಜಾರಿಯಾದಾಗಿನಿಂದ ಹಣ ವಿಳಂಬವಾಗಿರುವುದು ಇದೇ ಮೊದಲೇನಲ್ಲ. ಈ ಮುಂಚೆ ಕೂಡ ಹೀಗೆಯೇ ಆಗಿತ್ತು.
ಪ್ರತಿ ತಿಂಗಳು ಜನರ ಖಾತೆ ಸೇರಬೇಕಿದ್ದ ಹಣ, ಇದೀಗ ಸರಿಯಾಗಿ ಜನರ ಖಾತೆ ಸೇರುತ್ತಿಲ್ಲ, ಬಾಕಿ ಇರುವ ತಿಂಗಳುಗಳ ಕಂತಿನ ಹಣವಂತೂ ಕಾತೆ ಸೇರುವ ನಿರೀಕ್ಷೆಯೇ ಇಲ್ಲ.
ಪ್ರತಿ ತಿಂಗಳಿಗೊಮ್ಮೆ ಖಾತೆ ಸೇರಬೇಕಿದ್ದ ಗೃಹಲಕ್ಷ್ಮಿ ಹಣ ಇದೀಗ ಮೂರು ತಿಂಗಳು ವಿಳಂಬವಾಗುತ್ತಿದೆ, ಜನ ಅಂತೂ ದುಡ್ಡು ಈ ತಿಂಗಳು ಬರುತ್ತೆ, ಇನ್ನೇನು ಮುಂದಿನ ತಿಂಗಳು ಬರಬಹುದು ಎಂದು ಕಾದು ಕಾದು ಸುಸ್ತಾಗಿದ್ದಾರೆ.
ಮುಂಚೆ ಕೂಡ ಆಗಸ್ಟ್ ಹಾಗೂ ಜುಲೈ ತಿಂಗಳ ಹಣ ಖಾತೆ ಸೇರಿರಲಿಲ್ಲ, ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರ ಹಣ ಹಾಕಿತ್ತಾದರೂ, ಬಾಕಿ ಉಳಿದಿದ್ದ ಕಂತಿನ ಹಣ ಹಲವರ ಖಾತೆ ಸೇರಲೇ ಇಲ್ಲ.
ಇದೀಗ ಗೃಹಲಕ್ಷ್ಮಿ ಹಣ ಇಷ್ಟ ಬಂದ ಸಮಯಕ್ಕೆ, ಇಷ್ಟ ಬಂದ ಸಮಸಯದಲ್ಲಿ ಕಾತೆ ಸೇರುತ್ತಿದೆ. ಇದನ್ನು ನೋಡಿ ಜನರು ಗೃಹಲಕ್ಷ್ಮಿ ಯೋಜನೆಗೆ ಬ್ರೇಕ್ ಬೀಳಬಹುದು ಎಂಬ ಅನುಮಾನದಲ್ಲಿದ್ದಾರೆ.
ಒಂದು ವೇಳೆ ಈ ಅನುಮಾನ ನಿಜವಾದರೆ ಹಲವು ಕುಟುಂಬಗಳು ನಷ್ಟವನ್ನು ಅನುಭವಿಸಲಿದೆ, ಈ ದುಡ್ಡಿನ ಮೇಲೆ ಅವಲಂಭಿತವಾಗಿರುವ ಅದೆಷ್ಟೋ ಕುಟುಂಬಗಳಿಗೆ ಇದು ಒಡೆತ ನೀಡಲಿದೆ.
ಗೃಹಲಕ್ಷ್ಣಿ ಯೋಜನೆ ಜಾರಿಗೆ ಬಂದಾಗಿನಿಂದ ಸರ್ಕಾರ ಅಂದಾಜು 25000 ಕೋಟಿಯನ್ನು ಬಿಡುಗಡೆ ಮಾಡಿದೆ. ತಿಂಗಳಿಗೆ 2000 ರೂ, ಯಂತೆ ಸುಮಾರು 11 ತಿಂಗಳಿನಿದಮ ಗೃಹಿಣಿಯರ ಖಾತೆಗೆ ಜಮೆ ಮಾಡುತ್ತಾ ಬರುತ್ತಿದೆ, ಆದರೆ ಗೃಹಲಕ್ಷ್ಮಿಯರ ಖಾತೆಗೆ ಸರಿಯಾದ ಸಮಯಕ್ಕೆ ಹಣ ಹಾಕಲು ಅಡ್ಡಿಯಾಗುತ್ತಿರುವುದು ತಾಂತ್ರಿಕ ಸಮಸ್ಯೆ, ಇದನ್ನು ಆದಷ್ಟು ಬೇಗ ಸರಿ ಮಾಡಿ, ರಾಜ್ಯದ ಮಹಿಳೆಯರ ಖಾತೆಗೆ ಹಣ ಹಾಕಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಇನ್ನೂ ಮುಂದೆಯಾದರೂ ಗೃಹಲಕ್ಷ್ಮಿ ಹಣ ಜನರ ಖಾತೆ ಸೇರುತ್ತಾ ಅಥವಾ ಇಲ್ವಾ ಎಂಬುದನ್ನು ಇನ್ನು ಮುಂದಷ್ಟೆ ಕಾದು ನೋಡಬೇಕಿದೆ.
ಗಮನಿಸಿ: ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಒಳಗೊಂಡಿದೆ ಇದನ್ನು Zee Kannada News ಖಚಿತಪಡಿಸುವುದಿಲ್ಲ.