ಹೆಲಿಪ್ಯಾಡ್, ಗೋಲ್ಡನ್ ಬಾತ್ ರೂಂ, ಐಷಾರಾಮಿ ರೂಮ್ಸ್ ಒಳಗೊಂಡ ಈ ಐಷಾರಾಮಿ ಸೂಪರ್‌ಯಾಚ್ ಎಂತಹವರನ್ನೂ ಬೆರಗುಗೊಳಿಸುತ್ತೆ!
ಇಸ್ತಾನ್‌ಬುಲ್‌ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಎರಡು ಸೂಪರ್‌ಯಾಚ್‌ಗಳನ್ನು ಟ್ರ್ಯಾಕ್ ಮಾಡಲಾಗಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ಕೈವ್ ಪೋಸ್ಟ್ ಪ್ರಕಾರ, ಹೊಸದಾಗಿ ನಿರ್ಮಿಸಲಾದ ಈ ಎರಡು ವಿಹಾರ ನೌಕೆಗಳ ಬೆಲೆ ಸುಮಾರು 50 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದ್ದು ಈ ಐಷಾರಾಮಿ ಸೂಪರ್ ಯಾಚ್ ನಲ್ಲಿರುವ ಸೌಲಭ್ಯಗಳು ನಿಜಕ್ಕೂ ಎಂತಹವರನ್ನಾದರೂ ಬೆರಗುಗೊಳಿಸುವಂತಿದೆ.
ದಿ ಸನ್‌ನಲ್ಲಿನ ವರದಿಯ ಪ್ರಕಾರ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಪ್ತ ಸ್ನೇಹಿತರಲ್ಲಿ ಒಬ್ಬರೆಯಾದ ಗೆನ್ನಡಿ ಟಿಮ್ಚೆಂಕೊ ಅವರ ಕಂಪನಿಗಾಳಿ ಈ ಹಡಗು ಅಧಿಕೃತವಾಗಿ ನೋಂದಾಯಿಸಲ್ಪಟ್ಟಿದ್ದು $50 ಮಿಲಿಯನ್ ವೆಚ್ಚದ ಸೂಪರ್‌ಯಾಚ್ ವುಡನ್ ಮಹಡಿ ಮತ್ತು ಎತ್ತರದ ದುಂಡಗಿನ ಛಾವಣಿಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ.
ವಿಕ್ಟೋರಿಯಾ ಹೆಸರಿನ ಈ ವಿಹಾರ ನೌಕೆಯಲ್ಲಿ ಎರಡು ಮಾಸ್ಟರ್ ಬೆಡ್ ರೂಂಗಳಿವೆ. ಇದು ಪುಟಿನ್ ಅವರ ಗೆಳತಿ 40 ವರ್ಷ ವಯಸ್ಸಿನ ಅಲೀನಾ ಕಬೇವಾ ಅವರ ನೆಚ್ಚಿನ ವಿಹಾರ ನೌಕೆಯಾಗಿದೆ. ಈ ಸೂಪರ್‌ಯಾಚ್‌ನಲ್ಲಿ ಪುಟಿನ್ ಮತ್ತು ಅಲೀನಾ ಕಬೇವಾ ಕಳೆದ 15 ವರ್ಷಗಳಿಂದ ತಮ್ಮ ಸುಂದರ ಕ್ಷಣಗಳನ್ನು ಆನಂದಿಸುತ್ತಿದ್ದಾರೆ ಎಂಬ ವದಂತಿಗಳೂ ಇವೆ.
ವಿಕ್ಟೋರಿಯಾ- ಈ ಐಷಾರಾಮಿ ಸೂಪರ್‌ಯಾಚ್ ಸುಮಾರು 233 ಅಡಿ ಉದ್ದವಾಗಿದ್ದು ಇದರಲ್ಲಿ 28 ಜನರು ಪ್ರಯಾಣಿಸಬಹುದಾಗಿದೆ. ಸಾಮಾನ್ಯವಾಗಿ ಆರು ಮಂದಿ ಪ್ರಯಾಣಿಕರೊಂದಿಗೆ 15 ಸಿಬ್ಬಂದಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಾರೆ ಎನ್ನಲಾಗಿದೆ.
ಇನ್ನೊಂದು ಪ್ರಮುಖ ವಿಚಾರವೆಂದರೆ ಈ ವಿಕ್ಟೋರಿಯಾ ವಿಹಾರ ನೌಕೆ ಹೆಲಿಪ್ಯಾಡ್, ಗೋಲ್ಡನ್ ಬಾತ್ ರೂಂ, ಐಷಾರಾಮಿ ಕೋಣೆಗಳನ್ನು ಒಳಗೊಂಡಿದೆ. ಈ ಸೂಪರ್‌ಯಾಚ್ ಬಹುತೇಕ ಸಂಪೂರ್ಣವಾಗಿ ಚಿನ್ನದಿಂದ ಮುಚ್ಚಲ್ಪಟ್ಟಿದೆ. ಆದಾಗ್ಯೂ, ಈ ವಿಕ್ಟೋರಿಯಾ ಸೂಪರ್‌ಯಾಚ್‌ನಲ್ಲಿ ಪುಟಿನ್ ಅವರ ಚಿತ್ರವಿಲ್ಲ. ಆದರೆ, ಈ ಹಡಗು ರಷ್ಯಾದ ಅಧ್ಯಕ್ಷರಿಗೆ ಸೇರಿದೆ ಎಂದು ಹೇಳಸು ಹಲವು ಪುರಾವೆಗಳಿವೆ ಎಂದು ಹೇಳಲಾಗುತ್ತಿಲ್ಲ.