ಅರಮನೆಯಂತಿದೆ ಸಚಿನ್ ತೆಂಡೂಲ್ಕರ್ ಐಷಾರಾಮಿ ಬಂಗಲೆ.. ಮುಂಬೈನ ಈ ಮನೆಯ ಕೋಣೆಗಳು, ಗಾಜಿನ ಸೇತುವೆ ಸೇರಿ ಒಳಾಂಗಣ ಫೋಟೋ ಇಲ್ಲಿವೆ
'ಮಾಸ್ಟರ್ ಬ್ಲಾಸ್ಟರ್' ಸಚಿನ್ ತೆಂಡೂಲ್ಕರ್ ಕ್ರಿಕೆಟ್ ನಿಂದ ನಿವೃತ್ತರಾದ ನಂತರ ಮುಂಬೈನ ಬಾಂದ್ರಾದಲ್ಲಿರುವ ವಿಶಾಲವಾದ ಮ್ಯಾನ್ಷನ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.
ಪತ್ನಿ ಅಂಜಲಿ ತೆಂಡೂಲ್ಕರ್, ಮಗಳು ಸಾರಾ ತೆಂಡೂಲ್ಕರ್ ಮತ್ತು ಮಗ ಅರ್ಜುನ್ ತೆಂಡೂಲ್ಕರ್ ಅವರೊಂದಿಗೆ ವಾಸಿಸುವ ಈ ಬಂಗಲೆ ಅರಮನೆಯಂತಿದೆ.
6,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಸಚಿನ್ ತೆಂಡೂಲ್ಕರ್ ಅವರ ಬಂಗಲೆಯು ಬಹು ಮಹಡಿಗಳು, ಎರಡು ನೆಲಮಾಳಿಗೆಗಳು ಮತ್ತು ಟೆರೇಸ್ ಅನ್ನು ಹೊಂದಿದೆ.
ಸಚಿನ್ 2007 ರಲ್ಲಿ ಹಳೆಯ ಬಂಗಲೆಯನ್ನು 39 ಕೋಟಿ ರೂ ಖರೀದಿಸಿದ್ದರು. ಬಳಿಕ ಇದನ್ನು ಸಾಕಷ್ಟು ನವೀಕರಣಗೊಳಿಸಿದರು. ಈ ಮನೆ ಈಗ ಸುಮಾರು 100 ಕೋಟಿ ರೂ. ಬೆಲೆ ಬಾಳುವ ಬಂಗಲೆಯಾಗಿದೆ.
ಸಚಿನ್ ತೆಂಡೂಲ್ಕರ್ ಅವರ ಈ ಬಂಗಲೆಯಲ್ಲಿ ವಿಸ್ತಾರವಾದ ಕೋಣೆಯನ್ನು ಬಿಳಿ ಮತ್ತು ಕಂದು ಬಣ್ಣದ ಛಾಯೆಗಳೊಂದಿಗೆ ಸೊಗಸಾದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಲಿವಿಂಗ್ ರೂಮ್ ಬಣ್ಣಬಣ್ಣದ ಕುಶನ್‌ಗಳೊಂದಿಗೆ ಬೆಲೆಬಾಳುವ ಸೋಫಾಗಳನ್ನು ಹೊಂದಿದೆ. ಮುಖ್ಯ ಕೋಣೆಯಲ್ಲಿ ಸೀಲಿಂಗ್ ಎತ್ತರವು ಸುಮಾರು 20 ಅಡಿಗಳಷ್ಟಿದೆ.
ಈ ಬಂಗಲೆಯು ಎರಡು ಪ್ರತ್ಯೇಕ ಲಾಬಿಯನ್ನು ಸಂಪರ್ಕಿಸುವ ಗಾಜಿನ ಸೇತುವೆಯನ್ನು ಹೊಂದಿರುವುದು ಬಹುಮುಖ್ಯ ಆಕರ್ಷಣೆಯಾಗಿದೆ.
ಈ ಗಾಜಿನ ಸೇತುವೆಯ ಒಂದು ಬದಿಯಲ್ಲಿ ಮಾಜಿ ಕ್ರಿಕೆಟಿಗ ಸಚಿನ್ ಮಲಗುವ ಕೋಣೆ ಮತ್ತು ಇನ್ನೊಂದು ಬದಿಯಲ್ಲಿ ಅವರ ಮಕ್ಕಳ ಬೆಡ್ ರೂಮ್ ಇದೆ.
ಸಚಿನ್ ತೆಂಡೂಲ್ಕರ್ ಬಂಗಲೆಯು ತಾಳೆ ಮರಗಳು, ಪೊದೆಗಳು, ಹಣ್ಣಿನ ಗಿಡಗಳು, ಉಷ್ಣವಲಯದ ಸಸ್ಯಗಳು ಮತ್ತು ಸಣ್ಣ ಕೊಳವನ್ನು ಹೊಂದಿರುವ ವಿಸ್ತಾರವಾದ ಉದ್ಯಾನವನ್ನು ಸಹ ಹೊಂದಿದೆ.