ಟೀಂ ಇಂಡಿಯಾಗೂ ಮೊದಲು ಪಾಕಿಸ್ತಾನದ ಪರ ಕ್ರಿಕೆಟ್ ಆಡಿದ್ರು ಭಾರತದ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್! ಯಾವಾಗ? ಯಾಕೆ?
ಕ್ರಿಕೆಟ್ ಜಗತ್ತಿನ ದೇವರೆಂದು ಪರಿಗಣಿಸಲ್ಪಟ್ಟ ಸಚಿನ್ ತೆಂಡೂಲ್ಕರ್ ಅವರು ನವೆಂಬರ್ 1989 ರಲ್ಲಿ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಆಗ ಅವರ ವಯಸ್ಸು ಕೇವಲ 16 ವರ್ಷ. ಆದರೆ ಭಾರತದ ಚೊಚ್ಚಲ ಪ್ರವೇಶಕ್ಕೆ ಎರಡು ವರ್ಷಗಳ ಮೊದಲು, ಸಚಿನ್ 20 ಜನವರಿ 1987 ರಂದು ಪಾಕಿಸ್ತಾನಕ್ಕಾಗಿ ಕ್ರಿಕೆಟ್ ಆಡಿದ್ರು ಎಂದರೆ ನಂಬುತ್ತೀರಾ? ಶಾಕ್ ಆದ್ರೂ ಇದು ಸತ್ಯ.
ಸಚಿನ್ ತೆಂಡೂಲ್ಕರ್ 13 ನೇ ವಯಸ್ಸಿನಲ್ಲಿ ಫೀಲ್ಡರ್ ಆಗಿ ಪಾದಾರ್ಪಣೆ ಮಾಡಿದ್ದರು, ಇನ್ನು ಸಚಿನ್ ಚೊಚ್ಚಲ ಪಂದ್ಯವನ್ನಾಡಿದ್ದು ಭಾರತಕ್ಕಾಗಿ ಅಲ್ಲ ಪಾಕಿಸ್ತಾನಕ್ಕಾಗಿ. ಜನವರಿ 20, 1987 ರಂದು, ಸಚಿನ್ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಪಾಕಿಸ್ತಾನದ ಫೀಲ್ಡರ್ ಆಗಿ ತಮ್ಮ ಮೊದಲ ಪಂದ್ಯವನ್ನು ಆಡಿದರು.
ಈ ಪಂದ್ಯ ನಡೆದಿದ್ದು ಭಾರತ ಮತ್ತು ಪಾಕಿಸ್ತಾನ ನಡುವೆ. ಇದು ಅಂತರರಾಷ್ಟ್ರೀಯ ಪಂದ್ಯವಲ್ಲದಿದ್ದರೂ, ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಸುವರ್ಣ ಮಹೋತ್ಸವದ ನೆನಪಿಗಾಗಿ ಇದನ್ನು ಆಯೋಜನೆ ಮಾಡಿತ್ತು.
ಈ ಪಂದ್ಯದಲ್ಲಿ ಪಾಕಿಸ್ತಾನದ ಅನುಭವಿ ಆಟಗಾರರಾದ ಜಾವೇದ್ ಮಿಯಾಂದಾದ್ ಮತ್ತು ಅಬ್ದುಲ್ ಖಾದಿರ್ ಊಟದ ವೇಳೆಗೆ ಮೈದಾನದಿಂದ ನಿರ್ಗಮಿಸಿದರು. ಆ ನಂತರ ಸಚಿನ್ ಪಾಕಿಸ್ತಾನ ತಂಡದ ಪರವಾಗಿ ಫೀಲ್ಡಿಂಗ್ ಮಾಡಲು ಮೈದಾನಕ್ಕೆ ಬಂದಿದ್ದರು. ಈ ಪಂದ್ಯದಲ್ಲಿ ಸಚಿನ್ ಲಾಂಗ್ ಆನ್ ಫೀಲ್ಡಿಂಗ್ ಮಾಡಿದರು.
ಇನ್ನು ಭಾರತದ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಒಂದು ಶಾಟ್ ಆಡಿದ್ದರು. ಅದನ್ನು ತೆಂಡೂಲ್ಕರ್ ಹಿಡಿಯಲು ವಿಫಲರಾದರು. ಈ ಘಟನೆಯನ್ನು ಸ್ವತಃ ಸಚಿನ್ ತೆಂಡೂಲ್ಕರ್ ತಮ್ಮ ಆತ್ಮಕಥನ 'ಪ್ಲೇಯಿಂಗ್ ಇಟ್ ಮೈ ವೇ' ನಲ್ಲಿ ಉಲ್ಲೇಖಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರು ಎಂದು ಕರೆಯಲಾಗುತ್ತದೆ. ತಮ್ಮ ಇಡೀ ವೃತ್ತಿಜೀವನದಲ್ಲಿ ಒಟ್ಟು 664 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಸಚಿನ್, 782 ಇನ್ನಿಂಗ್ಸ್‌ಗಳಲ್ಲಿ 48.52 ಸರಾಸರಿಯಲ್ಲಿ 34357 ರನ್ ಗಳಿಸಿದ್ದಾರೆ. ಇದರಲ್ಲಿ 100 ಶತಕ ಮತ್ತು 164 ಅರ್ಧ ಶತಕಗಳು ಸೇರಿವೆ,