ಯುವಿ ತಂಡದ ಎದಿರು ಗೆದ್ದು ಬೀಗಿದ ಸಚಿನ್ ಟೀಂ..! OWOFCup ಫೋಟೋಸ್ ಇಲ್ಲಿವೆ
ಸಾಮಾಜಿಕ ಕಳಕಳಿಯ ಉದ್ದೇಶದಿಂದ ಚಿಕ್ಕಬಳ್ಳಾಪುರದ ಸತ್ಯಸಾಯಿ ಗ್ರಾಮದಲ್ಲಿ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ಟಿ20 ಪಂದ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಚಿಕ್ಕಬಳ್ಳಾಪುರದ ಸಾಯಿಕೃಷ್ಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ನಾಯಕತ್ವದ ಒನ್ ವಲ್ಡ್ ತಂಡ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಸಚಿನ್ ನಾಯಕತ್ವದ ತಂಡ ಒನ್ ಫ್ಯಾಮಿಲಿ ತಂಡ ನೀಡಿದ 182 ರನ್ ಗಳನ್ನ ಒಂದು ಎಸೆತ ಬಾಕಿ ಇರುವಂತೆ ಗುರಿ ಮುಟ್ಟಿತು.
ಇದಕ್ಕೂ ಮುನ್ನ ಯುವರಾಜ್ ಸಿಂಗ್ ನಾಯಕತ್ವದ ಒನ್ ಫ್ಯಾಮಿಲಿ ತಂಡವು ಬ್ಯಾಟಿಂಗ್ ಮಾಡಿ 181 ರನ್ ಗಳ ಸ್ಪರ್ಧಾತಕ ಮೊತ್ತ ಕಲೆ ಹಾಕಿತು.
ಒನ್ ಫ್ಯಾಮಿಲಿ ತಂಡದ ಪಾರ್ಥಿವ್ ಪಟೇಲ್ (19) ಹೆಚ್ಚು ಒತ್ತು ನಿಲ್ಲಲಿಲ್ಲ. ಈ ವೇಳೆ ಯುಸೂಫ್ ಪಠಾಣ್ ಹಾಗೂ ಯುವರಾಜ್ ಸಿಂಗ್ ರನ್ ಗತಿ ಹೆಚ್ಚಿಸಿದರು.
ಯೂಸುಫ್ ಆಕರ್ಷಕ ಸಿಕ್ಸರ್ ಗಳನ್ನ ಸಿಡಿಸಿ 38 ರನ್ ಗೆ ಔಟಾದರೆ, ಯುವರಾಜ್ ಸಿಂಗ್ 23 ರನ್ ಬಾರಿಸಿ ಅಶೋಕ್ ದಿಂಡಾ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.
182 ರನ್ ಗಳ ಗುರಿ ಪಡೆದ ಒನ್ ವಲ್ಡ್ ತಂಡಕ್ಕೆ ಸಚಿನ್ ಹಾಗೂ ನಮನ್ ಒಜಾ ಆರಂಭದಲ್ಲಿ ಭದ್ರ ಬುನಾದಿ ಹಾಕಿಕೊಟ್ಟರು. ರನ್ ಗತಿ ಹೆಚ್ಚಿಸುವ ಭರದಲ್ಲಿ 28 ರನ್ ಗಳಿಸಿದ್ದ ನಮನ್ ಒಜಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ಪೆವಿಲಿಯನ್ ಗೆ ಮರಳಿದರು.
ಇನ್ನೊಂದೆಡೆ ತಮ್ಮದೆ ಸ್ಟೈಲ್ ನಲ್ಲಿ ಬೌಂಡರಿ- ಸಿಕ್ಸರ್ ಅಟ್ಟಿ ಉತ್ತಮ ಅಡಿಪಾಯ ಹಾಕಿದ್ದ ಸಚಿನ್ ಮುತ್ಯಯ್ಯ ಮುರುಳಿಧರನ್ ಬೌಲಿಂಗ್ ನ ಮೊದಲ ಎಸೆತದಲ್ಲೇ ಮೊಹಮ್ಮದ್ ಕೈಫ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ನಂತರ ಅಂಕಣಕ್ಕೆ ಬಂದ ಆಲ್ಫೇರ್ ಪೀಟರ್ ಸನ್ ಸ್ಕ್ರೀಸ್ ಗೆ ಅಂಟಿಕೊಂಡು ಭರ್ಜರಿ ಬ್ಯಾಂಟಿಗ್ ಮಾಡಿದ್ರು. ಈ ವೇಳೆ ಉಪುಲ್ ತರಂಗ ಉಪಯುಕ್ತ 23 ರನ್ ಗಳಿಸಿ ಔಡ್ ಆದರು.
ಕೊನೆಯ ಎರಡು ಓವರ್ ಗಳಲ್ಲಿ 17 ರನ್ ಅವಶ್ಯಕತೆ ಇದ್ದಾಗ ಚಮಿಂದಾ ವಾಸ್ ಬೌಲಿಂಗ್ ನಲ್ಲಿ ಎರಡನೇ ಎಸೆತವನ್ನು ಸಿಕ್ಸರ್ ಅಟ್ಟಿದರು. ನಂತರ ದೊಡ್ಡ ಶಾಟ್ ಗೆ ಕೈ ಹಾಕಿದ ಪಿಟರ್ ಸನ್ (74) ಕೈಫ್ ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು.
ಕೊನೆಯ ಓವರ್ ನಲ್ಲಿ 7 ರನ್ ಬೇಕಿದ್ದಾಗ ಇರ್ಫಾನ್ ಪಠಾಣ್ ಸಿಕ್ಸ್ ಚಚ್ಚಿ ಗೆಲುವಿಗೆ ಕಾರಣರಾದರು. ಪಂದ್ಯ ಪುರುಷೋತ್ತಮರಾಗಿ ಆಲ್ಪೇರ್ ಪೀಟರ್ ಸನ್,ಬೆಸ್ಟ್ ಬ್ಯಾಟರ್ ಆಗಿ ಡಾರೇನ್ ಮ್ಯಾಡಿ ಹಾಗೂ ಬೆಸ್ಟ್ ಬೌಲರ್ ಆಗಿ ಚಮಿಂದಾ ವಾಸ್ ಪ್ರಶಸ್ತಿ ಪಡೆದರು. ಬೆಸ್ಟ್ ಫಿಲ್ಡರ್ ಆಗಿ ಮೂರು ಕ್ಯಾಚ್ ಪಡೆದ ಮಹಮ್ಮದ್ ಕೈಫ್ ಅರ್ಹವಾಗಿ ಪ್ರಶಸ್ತಿ ಪಡೆದರು.