ಮಧುಮೇಹಿಗಳಿಗೆ ಅಮೃತ ಈ ರಸ.. ನಿತ್ಯ ಈ ಹೂವಿನ ಗಿಡದ ಎಲೆಗಳ ರಸ ಕುಡಿದರೆ ಡಯಾಬಿಟಿಸ್ ನಿಯಂತ್ರಣದಲ್ಲಿರುತ್ತೆ!
ಮಧುಮೇಹವನ್ನು ಗುಣಪಡಿಸುವುದು ಕಷ್ಟ ಸಾಧ್ಯ. ಆದ್ದರಿಂದ ಅದನ್ನು ನಿಯಂತ್ರಿಸುವುದು ಬಹಳ ಮುಖ್ಯ. ಮಧುಮೇಹವನ್ನು ನಿಯಂತ್ರಿಸಲು, ಆಯುರ್ವೇದದಲ್ಲಿ ಅನೇಕ ರೀತಿಯ ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ.
ಡಯಾಬಿಟಿಸ್ ರೋಗಿಗಳು ಸದಾಪುಷ್ಪ ಅಥವಾ ಬಸವನಪಾದ ಎಂದು ಕರೆಯುವ ಈ ಹೂವುಗಳ ಎಲೆಗಳಿಂದ ತಯಾರಿಸಿದ ಜ್ಯೂಸ್ ಕುಡಿದರೆ ಬ್ಲಡ್ ಶುಗರ್ ನಿಯಂತ್ರಣದಲ್ಲಿರುವುದು. ಸದಾಪುಷ್ಪ ಹೂವಿನ ಎಲೆಗಳ ರಸವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಟೈಪ್ 2 ಮಧುಮೇಹ ಜೀವನಶೈಲಿ ಸಂಬಂಧಿತ ಕಾಯಿಲೆ. ಇನ್ಸುಲಿನ್ ಹಾರ್ಮೋನ್ ಕಡಿಮೆ ಉತ್ಪತ್ತಿಯಾದಾಗ ಅಥವಾ ಕೆಲಸ ಮಾಡದಿದ್ದರೆ ಬ್ಲಡ್ ಶುಗರ್ ಪ್ರಮಾಣ ಹೆಚ್ಚಾಗುತ್ತದೆ.
ಸದಾಪುಷ್ಪ ಹೂವಿನ ಗಿಡದ ಎಲೆಗಳ ರಸವನ್ನು ತಯಾರಿಸಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯು ವೇಗವಾಗಿ ಇಳಿಯುತ್ತದೆ ಎಂದು ಸಂಶೋಧನೆ ಸಾಬೀತುಪಡಿಸಿದೆ.
ಸದಾಪುಷ್ಪ ಎಲೆಗಳನ್ನು ಒಣಗಿಸಿ ಪುಡಿ ಮಾಡಿ, ಗಾಜಿನ ಡಬ್ಬದಲ್ಲಿ ಶೇಖರಿಸಿಡಬಹುದು. ಒಂದು ಚಮಚ ಪುಡಿಯನ್ನು ಪ್ರತಿದಿನ ಒಂದು ಕಪ್ ತಾಜಾ ಹಣ್ಣಿನ ರಸ ಅಥವಾ ನೀರಿನೊಂದಿಗೆ ಬೆರೆಸಿ ಸೇವಿಸಬಹುದು.
ಸದಾಪುಷ್ಪ ಸಸ್ಯದ ಹೂವುಗಳನ್ನು ತೆಗೆದುಕೊಂಡು ಅವುಗಳನ್ನು ಒಂದು ಕಪ್ ನೀರಿನಲ್ಲಿ ಕುದಿಸಿ. ನೀರನ್ನು ಸೋಸಿಕೊಂಡು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೂ ಮಧುಮೇಹ ನಿಯಂತ್ರಣದಲ್ಲಿರುವುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.