Sagar Biligowda: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಾಗರ್ ಬಿಳಿಗೌಡ ದಂಪತಿ!
ಸತ್ಯ ಧಾರವಾಹಿ ಖ್ಯಾತಿಯ ಸಾಗರ್ ಬಿಳಿ ಗೌಡ ಹಾಗೂ ಸಿರಿ ರಾಜು ದಂಪತಿ ಫ್ಯಾನ್ಸ್‌ಗೆ ಮೊದಲ ಮಗುವಿನ ನಿರೀಕ್ಷೆಯ ಬಗ್ಗೆ ತಿಳಿಸಿದ್ದು, ಈ ಸುದ್ದಿ ಕೇಳಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ.
ಸಾಗರ್ ಪತ್ನಿ ಸಿರಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದಂಪತಿಗಳು ಇಬ್ಬರು ಮಗುವಿನ ಶೂ ಹಿಡಿದು ಕೊಂಡು ಇರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಹಾಗೆಯೇ ಆ ಫೋಟೋದ ಕೆಳಗಡೆ , "ಪವಾಡಗಳಿಗೂ ಸಮಯ ಹಿಡಿಯುತ್ತದೆ" ಎಂಬ ಸಾಲನ್ನು ಬರೆದುಕೊಂಡಿದ್ದಾರೆ.
ಸಾಗರ್ ಹಾಗೂ ಸಿರಿ ಮಗುವಿನ ಶೂ ಫೋಟೋ ನೋಡಿ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಹಾಗೆಯೇ ಮಾಮ್ ಟೂ ಬಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸಾಗರ್ ಬಿಳಿಗೌಡ ಹಾಗೂ ಸಿರಿ ರಾಜು ಐದು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದ ಜೋಡಿ 2023 ಜನವರಿ 26 ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಸಾಗರ್ ಹಾಗೂ ಸಿರಿಯ ಮದುವೆಗೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದು, ಬಹಳ ವಿಜೃಂಭಣೆಯಿಂದ ಇವರಿಬ್ಬರ ಮದುವೆ ನಡೆದಿದೆ. ಆದರೆ ಈ ವರುಷ ಮತ್ತೊಮ್ಮೆ ಅಭಿಮಾನಿಗಳ ಜೊತೆ ಖುಷಿ ಸುದ್ದಿ ಹಂಚಿಕೊಂಡಿದ್ದಾರೆ.
ಸಾಗರ್ ತಾನು ತಂದೆ ಆಗುತ್ತಿರುವ ವಿಚಾರ ತಿಳಿದ ದಿನದಿಂದ ತನ್ನ ಕಂದನ ಬರುವಿಕೆಗಾಗಿ ಕಾಯುತ್ತಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸಾಗರ್ ಹಾಗೂ ಸಿರಿ ರಾಜು ಜೋಡಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.
ಸಾಗರ್ ಬಿಳಿಗೌಡ ಸತ್ಯ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ಗಮನ ಸೆಳೆಯುತ್ತಿದ್ದು, ಇವರನ್ನು ಅಮೂಲ್ ಬೇಬಿ ಎಂದು ಬಾಯಿ ತುಂಬ ಅಭಿಮಾನಿಗಳು ಕರೆಯುತ್ತಾರೆ. ಸದ್ಯ ಸಾಗರ್ 'ಜಾಜಿ' ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.
ಸಿರಿ ರಾಜು ಕೂಡ 'ಬರ್ಬರಿಕ' ಚಿತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದು, ಈ ಜೋಡಿ ಮಗುವಿನ ನಿರೀಕ್ಷೆಯಲ್ಲಿ ಇರುವುದರ ಜೊತೆಗೆ ಹಾಗೆಯೇ ಅವರ ಕುಟುಂಬಸ್ಥರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.