Sai Pallavi : ನೀವು ಎಷ್ಟೇ ದೊಡ್ಡವರಾಗಿದ್ರೂ ನಿಮ್ಮನ್ನ ಬಿಡಲ್ಲ..! ಮಿಡಿಯಾಗಳಿಗೆ ಸಾಯಿ ಪಲ್ಲವಿ ಖಡಕ್‌ ವಾರ್ನಿಂಗ್‌

Thu, 12 Dec 2024-11:29 am,

ನಾಯಕಿ ಸಾಯಿ ಪಲ್ಲವಿ ಸದ್ಯ ಬೆರಳೆಣಿಕೆಯ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಯುವ ಸಾಮ್ರಾಟ್ ಅಕ್ಕಿನೇನಿ ನಾಗ ಚೈತನ್ಯ ಎದುರು ʼತಾಂಡೇಲ್ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಚಂದೂ ಮೊಂಡೇಟಿ ನಿರ್ದೇಶನದ ಈ ಸಿನಿಮಾ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಹಿಂದಿ ಸಿನಿಮಾ ರಾಮಾಯಣದಲ್ಲೂ ನಟಿಸಲಿದ್ದಾರೆ.   

ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡರೆ, ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಮರನ್ ಚಿತ್ರದ ಮೂಲಕ ಮತ್ತೊಂದು ಹಿಟ್ ಗಳಿಸಿದ್ದಾರೆ. ಆದರೆ ಹಿಂದಿ ಚಿತ್ರ ರಾಮಾಯಣದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿ ಬಗ್ಗೆ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಿದಾಡುತ್ತಲೇ ಇರುತ್ತವೆ.   

ರಾಮಾಯಣ ಚಿತ್ರಕ್ಕಾಗಿ ಸಾಯಿ ಪಲ್ಲವಿ ತಮ್ಮ ಅಭ್ಯಾಸವನ್ನು ಬದಲಾಯಿಸಿಕೊಂಡಿದ್ದಾರೆ ಎಂದು ಕೆಲವು ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗೆ ಈ ವದಂತಿಗಳಿಗೆ ಸಾಯಿ ಪಲ್ಲವಿ ಖಡಕ್ಕಾಗಿ ಪ್ರತಿಕ್ರಿಯೆ ನೀಡಿದ್ದಾರೆ. ರಾಮಾಯಣ ಚಿತ್ರಕ್ಕಾಗಿ ಸಾಯಿ ಪಲ್ಲವಿ ಅನೇಕ ಅಭ್ಯಾಸಗಳನ್ನು ಬದಲಾಯಿಸಿದ್ದಾರೆ ಎಂದು ಕಾಲಿವುಡ್‌ನ ಮಾಧ್ಯಮ ಸಂಸ್ಥೆಯೊಂದು ಸುದ್ದಿ ಪ್ರಕಟಿಸಿತ್ತು.   

ಅದರಲ್ಲಿ, ಸಾಯಿ ಪಲ್ಲವಿ ಈ ಚಿತ್ರ ಮುಗಿಯುವವರೆಗೂ ನಾನ್ ವೆಜ್ ಬಿಟ್ಟಿದ್ದು, ವಿದೇಶಕ್ಕೆ ಹೋದಾಗಲೂ ತನ್ನ ಅಡುಗೆಯವರನ್ನು ಕರೆದುಕೊಂಡು ಹೋಗುತ್ತಾಳೆ ಎಂದು ಬರೆಯಲಾಗಿತ್ತು. ಇತ್ತೀಚೆಗಷ್ಟೇ ಸಾಯಿ ಪಲ್ಲವಿ ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿದ್ದರು. ಆಧಾರ ರಹಿತ ವದಂತಿಗಳನ್ನು ಬರೆದರೆ ಎಷ್ಟೇ ದೊಡ್ಡ ಕಂಪನಿಯಾದರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು..  

"ನನ್ನ ಬಗ್ಗೆ ಸಾಕಷ್ಟು ವದಂತಿಗಳಿವೆ. ಅದು ಬಂದಾಗಲೆಲ್ಲಾ ನಾನು ಮೌನವಾಗಿರುತ್ತಿದ್ದೆ. ಏಕೆಂದರೆ ಸತ್ಯ ಏನೆಂದು ದೇವರಿಗೆ ಗೊತ್ತು. ಆದರೆ ನಾನು ಮೌನ ವಹಿಸುತ್ತಿದ್ದೇನೆ ಅಂತ ಇಂತಹ ವದಂತಿಗಳನ್ನು ಹಚ್ಚು ಬರೆಯಲಾಗುತ್ತಿದೆ. ಈಗ ಪ್ರತಿಕ್ರಿಯಿಸುವ ಸಮಯ.   

ನನ್ನ ಸಿನಿಮಾಗಳ ರಿಲೀಸ್, ಜಾಹೀರಾತು, ನನ್ನ ಕೆರಿಯರ್ ಹೀಗೆ ಆಧಾರ ರಹಿತ ಸುದ್ದಿಗಳನ್ನು ಪ್ರಕಟಿಸಿದರೆ.. ಎಷ್ಟೇ ದೊಡ್ಡ ಮಾನ್ಯತೆ ಪಡೆದ ಸಂಸ್ಥೆಯಾಗಿದ್ದರೂ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಇಷ್ಟು ವರ್ಷ ಸಹಿಸಿಕೊಂಡಿದ್ದೇನೆ. ಇನ್ನು ಮುಂದೆ ಸಹಿಸಿಕೊಳ್ಳಲು ನಾನು ತಯಾರಿಲ್ಲ” ಎಂದು ಸಾಯಿ ಪಲ್ಲವಿ ಟ್ವೀಟ್ ಮಾಡಿದ್ದಾರೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link