ಮೇಕಪ್ ಗಾಗಿ ನಟಿ ಸಾಯಿ ಪಲ್ಲವಿ ಬಳಸುವುದು ಈ ಎರಡು ವಸ್ತು ಮಾತ್ರ!ಸಿನಿಮಾದಲ್ಲಿಯೂ ಅತೀ ಕಡಿಮೆ ಮೇಕ್ ಅಪ್ ಬಳಸುವ ನಟಿ ಈಕೆ
ನಟಿ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಮುಖ ತುಂಬಾ ಮೇಕ್ ಅಪ್, ಸುಂದರ ಹೇರ್ ಸ್ಟೈಲ್. ಆದರೆ, ಇದಕ್ಕೆ ತದ್ವಿರುದ್ದ ಎನ್ನುವಂಥ ನಟಿ ಸಾಯಿ ಪಲ್ಲವಿ.
ಸಾಯಿ ಪಲ್ಲವಿ ಮುಖ ತುಂಬಾ ಮೊಡವೆ ಇದ್ದರೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮೇಕಪ್ ಇಲ್ಲದೆ ಕ್ಯಾಮರಾ ಮುಂದೆ ಬರುವ ಧೈರ್ಯ ಮಾಡುತ್ತಾರೆ.
ಪಾತ್ರಕ್ಕೆ ತಕ್ಕಂತೆ ನಟನೆ ಮಾಡುವುದು ಮುಖ್ಯವೇ ಹೊರತು ಮೇಕಪ್ ಅಲ್ಲ ಎಂಬುದು ನಟಿ ಸಾಯಿ ಪಲ್ಲವಿ ಅಭಿಪ್ರಾಯ.
ಆದ ಕಾರಣದಿಂದಲೇ ಸಾಯಿ ಪಲ್ಲವಿಯನ್ನು ನ್ಯಾಚ್ಯುರಲ್ ಬ್ಯೂಟಿ ಎಂದು ಕರೆಸಿಕೊಳ್ಳುತ್ತಾರೆ.
ಸಾಯಿ ಪಲ್ಲವಿ ಬಳಸುವ ಮೇಕ್ ಅಪ್ ಅಂದರೆ ಮಾಯಿಶ್ಚರೈಸಿಂಗ್ ಕ್ರೀಂ ಮತ್ತು ಐ ಲೈನರ್ ಮಾತ್ರ. ಇವರು ಸಿನಿಮಾದಲ್ಲೂ ಅತೀ ಕಡಿಮೆ ಎನ್ನುವಷ್ಟು ಮೇಕಪ್ ಮಾಡುತ್ತಾರೆ.
ಆದರೆ, ಇವರು ಹೇರ್ ಸ್ಟೈಲರ್ ಅನ್ನು ಮಾತ್ರ ಇಟ್ಟುಕೊಂಡಿದ್ದಾರೆ. ಮಾಯಿಶ್ಚರೈಸಿಂಗ್ ಕ್ರೀಂ ಮತ್ತು ಐ ಲೈನರ್ ಮಾತ್ರ ಬಳಸುವ ಇವರು ಹೇರ್ ಸ್ಟೈಲ್ ಮಾತ್ರ ಬದಲಿಸುತ್ತಾ ಇರುತ್ತಾರೆ.