ಒಂದೇ ಸ್ಕೂಲ್’ನಲ್ಲಿ ಓದಿದ್ರು ಸ್ಟಾರ್ ಕ್ರಿಕೆಟಿಗರ ಪತ್ನಿಯರು: ಒಬ್ರು ನಟಿ… ಮತ್ತೊಬ್ರು ನಿರ್ಮಾಪಕಿ: ಯಾರೆಂದು ಗೆಸ್ ಮಾಡಿ…

Thu, 01 Jun 2023-12:37 pm,

ಈ ಇಬ್ಬರು ಬಾಲ್ಯದ ಸ್ನೇಹಿತರು. ಆ ಬಳಿಕ ಇವರಿಬ್ಬರು ಮದುವೆಯಾಗಿದ್ದು ಟೀಂ ಇಂಡಿಯಾವನ್ನು ಮುನ್ನಡೆಸಿದ ಸ್ಟಾರ್ ಕ್ರಿಕೆಟಿಗರನ್ನು. ನಾವಿಂದು ಮಾತನಾಡುತ್ತಿರುವುದು ಅನುಷ್ಕಾ ಶರ್ಮಾ ಹಾಗೂ ಸಾಕ್ಷಿ ಸಿಂಗ್ ಧೋನಿ ಬಗ್ಗೆ. ಇವರಿಬ್ಬರ ಬಾಲ್ಯದ ಒಂದು ಫೋಟೋ ಸಖತ್ ವೈರಲ್ ಆಗಿದೆ.

ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿಯವರನ್ನು ಸಾಕ್ಷಿ ಸಿಂಗ್ ವಿವಾಹವಾಗಿದ್ದಾರೆ. ಇನ್ನು ಅನುಷ್ಕಾ ಶರ್ಮಾ ಅವರನ್ನು ವಿರಾಟ್ ಕೊಹ್ಲಿ ಪ್ರೀತಿಸಿ ಮದುವೆಯಾಗಿದ್ದಾರೆ. ಕ್ರಿಕೆಟಿಗರ ಮೂಲಕ ಭೇಟಿಗೂ ಮುನ್ನ ಸಾಕ್ಷಿ ಮತ್ತು ಅನುಷ್ಕಾ ಭೇಟಿಯಾಗಿದ್ದರು. ಇವರಿಬ್ಬರು ಬಾಲ್ಯದ ಸ್ನೇಹಿತರು.

ಇನ್​​ಸ್ಟಂಟ್ ಬಾಲಿವುಡ್ ಇನ್​ ಸ್ಟಾಗ್ರಾಂ ಖಾತೆಯಲ್ಲಿ ಅನುಷ್ಕಾ ಶರ್ಮಾ, ಕರ್ಣೇಶ್ ಶರ್ಮಾ ಹಾಗೂ ಸಾಕ್ಷಿ ಸಿಂಗ್ ಒಟ್ಟಾಗಿ ಇರುವ ಫೋಟೋ ಕಾಣಿಸಿಕೊಂಡಿದೆ. ಇನ್ನು ಅಸ್ಸಾಂನಲ್ಲಿ ಈ ಮೂವರು ಒಂದೇ ಶಾಲೆಯಲ್ಲಿ ಓದುತ್ತಿದ್ದರು.

ಇನ್ನು ಅನುಷ್ಕಾ ಶರ್ಮಾ ಹಾಗೂ ಸಾಕ್ಷಿ ಇಬ್ಬರೂ ಟೀಂ ಇಂಡಿಯಾವನ್ನು ಒಂದು ಕಾಲದಲ್ಲಿ ಮುನ್ನಡೆಸಿದ್ದ ನಾಯಕರ ಕೈಹಿಡಿದಿದ್ದಾರೆ. ಇಬ್ಬರಿಗೂ ಹೆಣ್ಣು ಮಗು ಜನಿಸಿದೆ. ಸದ್ಯ ಬಾಲಿವುಡ್ ನಲ್ಲಿ ಸಖತ್ ಫೇಮಸ್ ಆಗಿರುವ ಅನುಷ್ಕಾ ಶರ್ಮಾ ಸಿನಿಮಾಗಳಿಂದ ಕೊಂಚ ದೂರವಿದ್ದಾರೆ. ಮತ್ತೊಂದೆಡೆ ಧೋನಿ ಎಂಟರ್​ಟೈನ್​ಮೆಂಟ್ ಮೂಲಕ ಬರುತ್ತಿರುವ ಮೊದಲ ಸಿನಿಮಾ ‘ಎಲ್​ಜಿಎಂ’ಗೆ ಸಾಕ್ಷಿ ಸಿಂಗ್ ಧೋನಿ ನಿರ್ಮಾಪಕಿ ಆಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link