Dunki vs Salaar: ಮುಂಗಡ ಬುಕಿಂಗ್‌ನಲ್ಲಿ ಡುಂಕಿ ಹಿಂದಿಕ್ಕಿದ ಸಲಾರ್, ರಿಲೀಸ್‍ಗೂ ಮುನ್ನವೇ 30 ಕೋಟಿ ಸಂಗ್ರಹ!
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ವರ್ಷದ 3ನೇ ಚಿತ್ರ ‘ಡಂಕಿ’ ಮತ್ತು ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ನಟನೆಯ, ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್: ಪಾರ್ಟ್ 1- ಸೀಸ್‌ಫೈರ್’ ಸಿನಿಮಾಗಳ ನಡುವೆ ಟಿಕೆಟ್ ಬುಕ್ಕಿಂಗ್ ಫೈಟ್ ನಡೆಯುತ್ತಿದೆ. ಬುಧವಾರ ಡಂಕಿ ಸಿನಿಮಾದ ಟಿಕೆಟ್ ಬುಕ್ಕಿಂಗ್ ಹೆಚ್ಚಿತ್ತು. ಇದೀಗ ಡಂಕಿಯನ್ನು ಹಿಂದಿಕ್ಕಿರುವ ಸಲಾರ್ ಮುಂಗಡ ಟಿಕೆಟ್ ಬುಕ್ಕಿಂಗ್‍ನಲ್ಲಿ ನಂ.1 ಆಗಿ ಹೊರಹೊಮ್ಮಿದೆ.
ರಾಜ್ ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಗುರುವಾರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದು, ಸುಮಾರು 15.41 ಕೋಟಿ ರೂ. ಮೌಲ್ಯದ ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ವರದಿಯ ಪ್ರಕಾರ 15,014 ಶೋಗಳಿಂದ ಡಂಕಿಯ 5.6 ಲಕ್ಷ ಟಿಕೆಟ್‌ಗಳು ಆರಂಭಿಕ ದಿನಕ್ಕೆ ಮಾರಾಟವಾಗಿವೆ. ಆದರೆ ಶುಕ್ರವಾರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿರುವ ಪ್ರಭಾಸ್ ನಟನೆಯ ಸಲಾರ್ ಈಗಾಗಲೇ 29.35 ಕೋಟಿ ರೂ. ಮೌಲ್ಯದ ಟಿಕೆಟ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ.
ಡಂಕಿ ಹಿಂದಿಯಲ್ಲಿ ಮಾತ್ರ ಲಭ್ಯವಿದ್ದು, ಸಲಾರ್ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದೆ. ವರದಿಯ ಪ್ರಕಾರ, ಶುಕ್ರವಾರ ಬಿಡುಗಡೆಯಾಗಲಿರುವ ಸಲಾರ್ ಭಾರತದಲ್ಲಿ 10,434 ಶೋಗಳಿಂದ 14 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ತೆಲುಗು ಅವತರಣಿಕೆಯೇ ಇಲ್ಲಿಯವರೆಗೆ 23.5 ಕೋಟಿ ರೂ. ಮುಂಗಡ ಬುಕ್ಕಿಂಗ್ ಕಲೆಕ್ಷನ್ ದಾಖಲಿಸಿದೆ. ಹಿಂದಿಯಿಂದ 2.7 ಕೋಟಿ ರೂ., ಮಲಯಾಳಂನಿಂದ 1.6 ಕೋಟಿ ರೂ., ತಮಿಳಿನಿಂದ 1 ಕೋಟಿ ರೂ. ಹಾಗೂ ಕನ್ನಡ ಶೋಗಳಿಂದ 25 ಲಕ್ಷ ರೂ. ಮೊತ್ತದ ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ.
ದಕ್ಷಿಣ ಭಾರತದ ಫಿಲ್ಮ್ ಬಾಕ್ಸಾಫೀಸ್ ಟ್ರ್ಯಾಕರ್ ಹಾಗೂ ಖ್ಯಾತ ಸಿನಿಮಾ ಕ್ರಿಟಿಕ್ ಮನೋಬಾಲ ವಿಜಯಬಾಲನ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. ಒಂದೇ ದಿನದ ಅಂತದಲ್ಲಿ ಬಿಡುಗಡೆಯಾಗುತ್ತಿರುವ 2 ದೊಡ್ಡ ಚಿತ್ರಗಳಿಗೆ ಸಿಗುತ್ತಿರುವ ಶೋಗಳ ಬಗ್ಗೆ ಅವರು ಪ್ರಶ್ನಿಸಿದ್ದಾರೆ. ಶಾರುಖ್ ನಟನೆಯ ಡಂಕಿಗೆ ಸಿಕ್ಕಷ್ಟು ಶೋಗಳು PVR INOXನಲ್ಲಿ ಪ್ರಭಾಸ್ ನಟನೆಯ ಸಲಾರ್‍ಗೆ ಸಿಕ್ಕಿಲ್ಲ. ಇದು ಅನ್ಯಾಯವಾಗಿದ್ದು, #BoycottPVRInox ಎಂದು ಅವರು Multiplexಗಳ ವಿರುದ್ಧ ಕಿಡಿಕಾರಿದ್ದಾರೆ.
ಹೊಂಬಾಳೆ ಫಿಲ್ಮ್ ನಿರ್ಮಾಣದ ‘ಸಲಾರ್’ ಸಿನಿಮಾ ಜೊತೆಗೆ ಬಾಕ್ಸ್ ಆಫೀಸ್‍ನಲ್ಲಿ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಸಿನಿಮಾವು ತೀವ್ರ ಪೈಪೋಟಿ ನೀಡತ್ತಿದೆ. ಈ ಉಭಯ ಸಿನಿಮಾಗಳು 1,000 ಕೋಟಿ ರೂ. ಸಂಗ್ರಹಿಸುವ ಸಾಧ್ಯತೆ ಇದೆ. ಆದರೆ PVR ಮತ್ತು Inox ಡಂಕಿಗೆ ಹೆಚ್ಚಿನ ಶೋಗಳನ್ನು ನೀಡಿದ್ದು, ಸಲಾರ್‍ಗೆ ತುಸು ಹಿನ್ನೆಡೆಯಾದಂತಿದೆ.