Salaar: ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಕಾನ್ಸೆಪ್ಟ್‌ನಲ್ಲಿ ಸಲಾರ್ ಸಕ್ಸಸ್ ಮೀಟ್!
ಸಲಾರ್ ಭಾಗ 1 ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ಡ್ರೀಮ್ ಪ್ರಾಗ್ಜೆಟ್ ಅದ್ಭುತ ಯಶಸ್ಸು ದಾಖಲಿಸಿದ್ದು, ಬೆಂಗಳೂರಿನಲ್ಲಿ ತಮ್ಮ ವಿಜಯೋತ್ಸವವನ್ನು ಆಚರಿಸಿದೆ.
ಸಲಾರ್ ಚಿತ್ರತಂಡ ಮತ್ತೆ ಒಂದಾಗಿ ಬೆಂಗಳೂರಿನಲ್ಲಿ ಸಿನಿಮಾ ಸಕ್ಸಸ್ ಪಾರ್ಟಿಯನ್ನು ಅರೇಂಜ್ ಮಾಡಲಾಗಿದ್ದು, ಪ್ರಭಾಸ್, ಶ್ರುತಿ ಹಾಸನ್, ಶ್ರೀಯಾ ರೆಡ್ಡಿ, ಜಗಪತಿ ಬಾಬು ಸೇರಿ ಅನೇಕ ನಟರಿದ್ದರು.
ಸಲಾರ್ ಸಕ್ಸಸ್ ಪಾರ್ಟಿಯಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಪಾರ್ಟಿಯಲ್ಲಿ ಉಪಸ್ಥಿತರಿದ್ದರು.
ಸಲಾರ್ ಸಕ್ಸಸ್ ಪಾರ್ಟಿಯನ್ನು ಮತ್ತಷ್ಟು ವಿಶೇಷತೆಯೇನೆಂದರೆ, ಪಾರ್ಟಿಯಲ್ಲಿನ ಪೀಠೋಪಕರಣಗಳಿಂದ ಹಿಡಿದು ಬಟ್ಟೆಗಳವರೆಗೆ ಪ್ರತಿಯೊಂದರಲ್ಲಿಯೂ ಕಪ್ಪು ಬಣ್ಣದ ಛಾಯೆಉ ಥೀಮ್.
ಪಾರ್ಟಿಯಲ್ಲಿ ನಟ ಪ್ರಭಾಸ್ ತಮ್ಮ ಕಪ್ಪು ಜೀನ್ಸ್, ಟಿ-ಶರ್ಟ್ ಮತ್ತು ಬ್ಲೇಜರ್‌ನೊಂದಿಗೆ ಅಲ್ಟ್ರಾ ಸ್ಟೈಲಿಶ್ ಆಗಿ ಕಾಣುತ್ತಿದ್ದರು. ಇತರ ನಟ, ನಿರ್ದೇಶಕ, ತಾಂತ್ರಿಕ ವರ್ಗ ಕೂಡ ಕಪ್ಪು ಬಣ್ಣವನ್ನೇ ಅಯ್ಕೆ ಮಾಡಿಕೊಂಡಿದ್ದರು. ಚಿತ್ರದ ನಾಯಕಿ ಶ್ರುತಿ ಹಾಸನ್ ಸಕತ್ ಆಗಿ ಕಾಣುವ ಗೋಲ್ಡ್ ಮತ್ತು ಬ್ಲ್ಯಾಕ್ ಕಲರ್ ಕಾಂಬಿನೇಷನ್‌ನ ಡ್ರೆಸ್ ಧರಿಸಿದ್ದರು.
ಸಲಾರ್ ಸಕ್ಸಸ್ ಪಾರ್ಟಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಸಕ್ಸಸ್ ಪಾರ್ಟಿಯಲ್ಲಿ ಎಲ್ಲರ ಕಣ್ಣು ನಟ ಪೃಥ್ವಿರಾಜ್ ಸುಕುಮಾರನ್ ಹುಡುಕುತ್ತಿದದ್ದರು.
ಸಲಾರ್ ಭಾಗ 1: ಕದನ ವಿರಾಮಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದಯ, ಈಗ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಇಬ್ಬರೂ ಸಲಾರ್ ಭಾಗ 2: ಶೌರ್ಯಾಂಗ ಪರ್ವಂಗಾಗಿ ಮತ್ತೆ ಒಂದಾಗುತ್ತಿದ್ದಾರೆ. ಚಿತ್ರದ ಭಾಗ 2 ರ ಸ್ಕ್ರಿಪ್ಟ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ ಎಂದು ಪ್ರಶಾಂತ್ ನೀಲ್ ತಿಳಿಸಿದ್ದಾರೆ.