ಸಲ್ಮಾನ್ ಖಾನ್ ಮದುವೆ ಆಗಬೇಕಿದ್ದ ಈ ಸ್ಟಾರ್ ನಟಿ.. ಧರ್ಮ ಬದಲಿಸಿ ಎರಡು ಮಕ್ಕಳಿದ್ದ ಖ್ಯಾತ ಕ್ರಿಕೆಟಿಗನ ಪತ್ನಿಯಾದರು !
ಬಾಲಿವುಡ್‌ನ ಈ ಸ್ಟಾರ್ ನಟಿ ಎರಡು ಮಕ್ಕಳ ತಂದೆಯಾಗಿದ್ದ ಖ್ಯಾತ ಕ್ರಿಕೆಟಿಗನ ಜೊತೆ ಮದುವೆಯಾಗಲು ಧರ್ಮವನ್ನೇ ಬದಲಿಸಿದರು ಎಂದು ಹೇಳಲಾಗುತ್ತದೆ. ಮಾಡೆಲಿಂಗ್ ಮೂಲಕ ವೃತ್ತಿಜೀವನ ಪ್ರಾರಂಭಿಸಿದ ಸಂಗೀತಾ ಬಿಜಲಾನಿ 1980 ರಲ್ಲಿ 'ಮಿಸ್ ಇಂಡಿಯಾ' ಪ್ರಶಸ್ತಿಯನ್ನು ಗೆದ್ದ ಚೆಲುವೆ.
ಸಂಗೀತಾ ಬಿಜಲಾನಿ ನಂತರ 'ಮಿಸ್ ಯೂನಿವರ್ಸ್' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದರು. ಸಂಗೀತಾ ಬಿಜಲಾನಿ 1988ರಲ್ಲಿ ಕಾತಿಲ್ (Qatil) ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು.
ಸಲ್ಮಾನ್ ಖಾನ್ ಜೊತೆ ಸಂಗೀತಾ ಬಿಜಲಾನಿ ಬಹುಕಾಲ ಡೇಟಿಂಗ್ ಮಾಡಿದ್ದರು. ಸಲ್ಮಾನ್ ಖಾನ್ ಜೊತೆಗೆ ಸಂಗೀತಾ ಬಿಜಲಾನಿ ಮದುವೆ ಕೂಡ ನಿಶ್ಚಯವಾಗಿತ್ತು ಎನ್ನಲಾಗುತ್ತದೆ. ಮದುವೆಯ ಆಮಂತ್ರಣ ಪತ್ರಿಕೆ ಸಹ ಪ್ರಿಂಟ್ ಮಾಡಿಸಲಾಗಿತ್ತು ಎಂದು ಹೇಳಲಾಗುತ್ತದೆ. ಆದರೆ ಇವರಿಬ್ಬರ ಸಂಬಂಧ ವಿವಾಹಕ್ಕೂ ಮುನ್ನವೇ ಮುರಿದು ಬಿದ್ದಿತು.
ಸಲ್ಮಾನ್ ಖಾನ್ ಜೊತೆ ಬ್ರೇಕಪ್ ಬಳಿಕ ಸಂಗೀತಾ ಬಿಜಲಾನಿ ಟೀಮ್ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರ ಜೊತೆ ಪ್ರೀತಿಯಲ್ಲಿ ಬಿದ್ದರು. ಆ ಸಮಯದಲ್ಲಿ ಮೊಹಮ್ಮದ್ ಅಜರುದ್ದೀನ್ ಮತ್ತು ಸಂಗೀತಾ ಬಿಜಲಾನಿ ಡೇಟಿಂಗ್ ಮಾಡುತ್ತಿದ್ದರು.
ಮೊಹಮ್ಮದ್ ಅಜರುದ್ದೀನ್ ಅವರಿಗೆ ಆಗ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ವಿವಾಹಿತ ಎರಡು ಮಕ್ಕಳ ತಂದೆಯಾಗಿದ್ದ ಮೊಹಮ್ಮದ್ ಅಜರುದ್ದೀನ್ ಜೊತೆ ಮದುವೆಯಾಗಲು ಸಂಗೀತಾ ಬಿಜಲಾನಿ ತಮ್ಮ ಧರ್ಮವನ್ನೇ ಬದಲಿಸಿದರು.
ಮೊಹಮ್ಮದ್ ಅಜರುದ್ದೀನ್ ಪತ್ನಿ ಆಗಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. 1996 ರಲ್ಲಿ ಇವರಿಬ್ಬರ ಮದುವೆಯೂ ನಡೆಯಿತು. ಆದರೆ 2010 ರಲ್ಲಿ ಮೊಹಮ್ಮದ್ ಅಜರುದ್ದೀನ್ ಮತ್ತು ಸಂಗೀತಾ ವಿಚ್ಛೇದನ ಪಡೆದರು.