ಸಲ್ಮಾನ್ ಖಾನ್ ಮದುವೆ ಆಗಬೇಕಿದ್ದ ಈ ಸ್ಟಾರ್ ನಟಿ ಧರ್ಮ ಬದಲಿಸಿ, ಎರಡು ಮಕ್ಕಳಿದ್ದ ಖ್ಯಾತ ಕ್ರಿಕೆಟಿಗನ ಪತ್ನಿಯಾದರು.. ಆದರೆ!!

Sun, 07 Apr 2024-9:27 am,

ಬಾಲಿವುಡ್‌ನ ಈ ಸ್ಟಾರ್ ನಟಿ ಎರಡು ಮಕ್ಕಳ ತಂದೆ‌ಯಾಗಿದ್ದ ಖ್ಯಾತ ಕ್ರಿಕೆಟಿಗನ ಜೊತೆ ಮದುವೆಯಾಗಲು ಧರ್ಮವನ್ನೇ ಬದಲಿಸಿದರು. ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ  ಸಂಗೀತಾ ಬಿಜಲಾನಿ 1980 ರಲ್ಲಿ 'ಮಿಸ್ ಇಂಡಿಯಾ' ಪ್ರಶಸ್ತಿಯನ್ನು ಗೆದ್ದರು.

ನಂತರ 'ಮಿಸ್ ಯೂನಿವರ್ಸ್' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದರು. ಸಂಗೀತಾ ಬಿಜಲಾನಿ 1988ರಲ್ಲಿ ಕಾತಿಲ್‌ (Qatil) ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟರು. ನಟಿ ಸಂಗೀತಾ ಬಿಜಲಾನಿ ಸಿನಿಮಾಗಳಿಂದ ಮಾತ್ರವಲ್ಲ ವೈಯಕ್ತಿಕ ಜೀವನವೂ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. 

ಸಲ್ಮಾನ್ ಖಾನ್ ಜೊತೆ ಬಹುಕಾಲ ಡೇಟಿಂಗ್ ಮಾಡಿದ್ದರು. ಸಲ್ಮಾನ್ ಖಾನ್ ಜೊತೆಗೆ ಮದುವೆ ಕೂಡ ನಿಶ್ಚಯವಾಗಿತ್ತು ಎನ್ನಲಾಗುತ್ತದೆ. ಮದುವೆಯ ಕಾರ್ಡ್‌ಗಳನ್ನು ಸಹ ಪ್ರಿಂಟ್‌ ಮಾಡಿಸಲಾಗಿತ್ತು ಎಂದು ಹೇಳಲಾಗುತ್ತದೆ. ಆದರೆ ನಂತರ ಈ ಮದುವೆ ನಡೆಯಲಿಲ್ಲ, ಇವರಿಬ್ಬರ ಸಂಬಂಧ ವಿವಾಹಕ್ಕೂ ಮುನ್ನವೇ ಮುರಿದು ಬಿದ್ದಿತು.

ಸಲ್ಮಾನ್ ಖಾನ್ ಜೊತೆ ಸಂಬಂಧ ಮುರಿದು ಹೋದ ಬಳಿಕ ಸಂಗೀತಾ ಬಿಜಲಾನಿ ಟೀಮ್‌ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರ ಜೊತೆ ಪ್ರೀತಿಯಲ್ಲಿ ಬಿದ್ದರು.

ಆ ಸಮಯದಲ್ಲಿ ಮೊಹಮ್ಮದ್ ಅಜರುದ್ದೀನ್ ಮತ್ತು ಸಂಗೀತಾ ಬಿಜಲಾನಿ ಡೇಟಿಂಗ್ ಮಾಡುತ್ತಿದ್ದರು. ಆದರೆ ಮೊಹಮ್ಮದ್ ಅಜರುದ್ದೀನ್ ಅವರಿಗೆ ಆಗ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ವಿವಾಹಿತ ಎರಡು ಮಕ್ಕಳ ತಂದೆಯಾಗಿದ್ದ ಮೊಹಮ್ಮದ್ ಅಜರುದ್ದೀನ್ ಜೊತೆ ಮದುವೆಯಾಗಲು ಸಂಗೀತಾ ಬಿಜಲಾನಿ ತಮ್ಮ ಧರ್ಮವನ್ನೇ ಬದಲಿಸಿದರು. 

ಮೊಹಮ್ಮದ್‌ ಅಜರುದ್ದೀನ್‌ ಪತ್ನಿ ಆಗಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. 1996 ರಲ್ಲಿ ಇವರಿಬ್ಬರ ಮದುವೆಯೂ ನಡೆಯಿತು. ಆದರೆ 2010 ರಲ್ಲಿ ಮೊಹಮ್ಮದ್‌ ಅಜರುದ್ದೀನ್‌ ಮತ್ತು ಸಂಗೀತಾ ವಿಚ್ಛೇದನ ಪಡೆದರು. 

ಮೊಹಮ್ಮದ್ ಅಜರುದ್ದೀನ್ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರೆಂದು ಹೇಳಲಾಗುತ್ತದೆ. ಇದೇ ವಿಚ್ಛೇದನಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಆದರೆ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರೊಂದಿಗಿನ ಸಂಬಂಧದ ಬಗ್ಗೆ ಮೊಹಮ್ಮದ್ ಅಜರುದ್ದೀನ್ ಇದುವರೆಗೂ ಮೌನ ಮುರಿದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link