ತಾಳಲಾರದ ದುಃಖ..ಗೆಳೆಯನ ನೆನಪಲ್ಲಿ ಕಣ್ಣಿರಿಟ್ಟ ಸಲ್ಮಾನ್‌ ಖಾನ್‌! ಭಾಯಿಜಾನ್‌ ಸ್ಥಿತಿ ಕಂಡು ಭಾವುಕರಾದ ಫ್ಯಾನ್ಸ್‌..ಫೋಟೋ ವೈರಲ್‌

Mon, 14 Oct 2024-1:02 pm,

Salman khan: ಕೊಲೆ ಬೆದರಿಕೆ ಹಾಗೂ ಒಂದಾದ ಮೇಲೊಂದು ಅಟ್ಯಾಕ್‌ನ ಕಾರನ ಇತ್ತೀಚೆಗೆ ನಟ ಸಲ್ಮಾನ್‌ ಖಾನ್‌ ಸುದ್ದಿಯಲ್ಲಿದ್ದಾರೆ. ದಾಳಿಯಿಂದ ಇನ್ನೂ ನಟ ಸಲ್ಮಾನ್ ಕಾನ್‌ ಚೇತರಿಸಿಕೊಳ್ಳುತ್ತಿರುವಾಗಲೇ, ಮತ್ತೊಂದು ಶಾಕಿಂಗ್‌ ಸುದ್ದಿ ಅವರಿಗೆ ದೊಡ್ಡ ಅಘಾತವನ್ನೆ ಉಂಟು ಮಾಡಿದೆ.   

ಹೌದು, ನಟ ಸಲ್ಮಾನ್‌ ಖಾನ್‌ ಅವರ ಆಪ್ತ ಗೆಳೆಯ ಬಾಬಾ ಸಿದ್ದಿಕಿ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಸ್ಥಳದಲ್ಲೆ ಈತ ಸಾವನ್ನಪ್ಪಿದ್ದಾರೆ.   

ಸಲ್ಮಾನ್‌  ಅವರ ಆಪ್ತ ಎಂಬ ಕಾರಣಕ್ಕೆ  ಬಿಷ್ಣೋಯ್ ಗ್ಯಾಂಗ್ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಲಾಗುತ್ತಿದ್ದು, ಆಪತ್ನ ಕೊನೆಯ ದರ್ಶನ ಪಡೆಯಲು ಬಂದ ಸಲ್ಮಾನ್‌ ಖಾನ್‌ ಅವರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.   

ಬಾಬಾ ಸಿದ್ದಿಕಿ ದರ್ಶನಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಭದ್ರತೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಲ್ಮಾನ್‌ ಖಾನ್‌ ಅವರು ತಮ್ಮ ಆಪ್ತನ ಕೊನೆಯ ದರ್ಶನ ಪಡೆಯಲು ದೌಡಾಯಿಸಿದ್ದರು.   

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವೇಳೆಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ, ಆಪ್ತ ಸ್ನೇಹಿತನನ್ನು ಕಲೆದುಕೊಂಡು ದುಃಖದಿಂದ ಕುಗ್ಗಿ ಹೋಗಿರುವ ದೃಶ್ಯಗಳು ಭಾಯಿಜಾನ್‌ ಅವರ ಅಭಿಮಾನಿಗಳನ್ನು ಭಾವುಕರನ್ನಾಗಿ ಮಾಡಿಸಿದೆ.   

ಸಲ್ಮಾನ್‌ ಖಾನ್‌ ತಮ್ಮ ಆತ್ಮೀಯ ಗೆಳೆಯನ್ನು ಕಲೆದುಕೊಂಡು ಆಘಾತಕ್ಕೊಳಗಾಗಿದ್ದಾರೆ, ಅಷ್ಟಕ್ಕೂ ಇವರಿಬ್ಬರು ಸ್ನೇಹ ಕೂಡ ಇಂದು ನಿನ್ನೆಯದ್ದಲ್ಲ ಹೊರೆತಾಗಿ ಬಹಳ ಹಳೆಯದ್ದು.  

ಸಲ್ಮಾನ್‌ ಖಾನ್‌ ಹಾಗೂ ಶಾರುಕ್‌ ಖಾನ್‌ ಮನಸ್ಥಾಪಗಳ ಕಾರಣ ದೂರವಾದಾಗ ಕೂಡ ಬಾಬಾ ಸಿದ್ದಿಕಿ ಅವರೇ ಇವರಿಬ್ಬರ ನಡುವೆ ಮಧ್ಯಸ್ತಿಕೆ ವಹಿಸಿ, ಇಬ್ಬರನ್ನು ಮತ್ತೆ ಒಂದು ಮಾಡಿದ್ದರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link