1994, ಮೇ 27 ರಂದು ನಡೆಯಬೇಕಿತ್ತು ಸಲ್ಮಾನ್ ವಿವಾಹ! ಮದುವೆ ಹೆಣ್ಣಿನ ಕೈಗೆ ಈ ನಟಿಯ ಜೊತೆ ಸಿಕ್ಕಿ ಬಿದ್ದಿರುವುದೇ ಕೊನೆ ಕ್ಷಣದಲ್ಲಿ ಮದುವೆ ಮುರಿಯಲು ಕಾರಣ !

Fri, 13 Sep 2024-11:30 am,

ವರ್ಷ 59 ಆದರೂ ಸಲ್ಮಾನ್ ಇನ್ನು ಕೂಡಾ ಮದುವೆಯಾಗಿಲ್ಲ. ಮದುವೆ ಯಾವಾಗ ಎನ್ನುವ ಸುದ್ದಿ ಸಲ್ಮಾನ್ ಖಾನ್ ನನ್ನು ಸದಾ ಸುತ್ತುತ್ತಲೇ ಇರುತ್ತದೆ. ಆದರೆ ಇನ್ನು ಸಲ್ಮಾನ್ ಮದುವೆಯಾಗುವ ಬಹುತೇಕ ಸಾಧ್ಯ ಇಲ್ಲ ಎಂದೇ ಹೇಳಲಾಗುತ್ತಿದೆ. 

ಸಲ್ಮಾನ್ ಹೆಸರು ಬಾಲಿವುಡ್ ನ ಅನೇಕ ನಟಿಮಣಿಯರ ಜೊತೆ ಕೇಳಿ ಬಂದಿದೆ. ಇನ್ನೇನು ಮದುವೆ ಆಗಿಯೇ ಬಿಡುತ್ತಾರೆ ಎನ್ನುವವರೆಗೂ ಇವರ ಸಂಬಂಧ ಮುಂದುವರೆದದ್ದೂ ಇದೆ.  

ಹಾಗೆ ನೋಡಿದರೆ 1994ರಲ್ಲಿಯೇ ಸಲ್ಮಾನ್ ವಿವಾಹ, ಮಾಜಿ ಮಿಸ್ ಇಂಡಿಯಾ ಜೊತೆ ನಡೆದು ಹೋಗಬೇಕಿತ್ತು.ಮಾಜಿ ಮಿಸ್ ಇಂಡಿಯಾ ಸಂಗೀತಾ ಬಿಜಿಲಾನಿ ಮತ್ತು ಸಲ್ಮಾನ್ ಮದುವೆ  ಮೇ 27, 1994ಕ್ಕೆ ನಿಗದಿಯಾಗಿ, ಕಾರ್ಡ್ ಕೂಡಾ ಮುದ್ರಿಸಲಾಗಿತ್ತಂತೆ. 

ಆದರೆ ಇದರ ನಡುವೆಯೇ ಪಾಕಿಸ್ತಾನಿ-ಅಮೆರಿಕನ್ ನಟಿ ಸೋಮಿ ಅಲಿಯೊಂದಿಗೆ ಸಲ್ಮಾನ್, ಸಂಗೀತಾ ಕೈಗೆ ಸಿಕ್ಕಿ ಬಿದ್ದಿದ್ದರು ಎನ್ನಲಾಗಿದೆ.ಈ ಘಟನೆ ಸಂಗೀತಾ ಮದುವೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿತು.

ಮದುವೆಗೆ ಇನ್ನೇನು ಒಂದು ತಿಂಗಳು ಬಾಕಿ ಇದೆ ಎನ್ನುವಾಗಲೇ ಸಂಗೀತಾ ಬಿಜಿಲಾನಿ ಮದುವೆ ಸಾಧ್ಯವಿಲ್ಲ ಎನ್ನುವ ತನ್ನ ನಿರ್ಧಾರ ತಿಳಿಸಿ ಬಿಟ್ಟರಂತೆ.ಅಲ್ಲಿಂದ ಬಾಲಿವುಡ್ ನ ಈ ನಟನಿಗೆ ಮದುವೆ ಭಾಗ್ಯ ಕೂಡಿ ಬರಲೇ ಇಲ್ಲ. 

ಸಂಗೀತಾ ಬಿಜಲಾನಿ ಮತ್ತು ತಮ್ಮ ಮದುವೆಯ ವಿಚಾರದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.ಆ ಕಾಲದಲ್ಲಿ ತಾನು ನಿಜವಾಗಿಯೂ  ಮದುವೆಯಾಗಲು ಬಯಸಿದ್ದೆ, ಆದರೆ ಸಾಧ್ಯವಾಗಲಿಲ್ಲ ಎಂದು ಮನಸ್ಸಿನ ಮೂಲೆಯಲ್ಲಿದ್ದ ನೋವನ್ನು ಹೊರ ಹಾಕಿದ್ದರು. 

ವರದಿಯ ಪ್ರಕಾರ,ಸೋಮಿ ಬಾಲಿವುಡ್ ಸೂಪರ್‌ಸ್ಟಾರ್ ಮೇಲೆ ಭಾರಿ ಕ್ರಶ್ ಹೊಂದಿದ್ದು, ಸಲ್ಮಾನ್ ಅವರನ್ನು ಮದುವೆಯಾಗುವ ಬಯಕೆಯಿಂದಲೇ ತಾನು  ಫ್ಲೋರಿಡಾದಿಂದ ಭಾರತಕ್ಕೆ  ಬಂದಿರುವುದಾಗಿಯೂ ಹೇಳಿದ್ದರಂತೆ. 

ಈಗಲೂ ಸಲ್ಮಾನ್ ಮತ್ತು ಸಂಗೀತಾ ಬಿಜಲಾನಿ ನಡುವೆ ಉತ್ತಮ ಸ್ನೇಹವಿದೆ. ಸಲ್ಮಾನ್ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಂಗೀತ ಭಾಗಿಯಾಗುತ್ತಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link